ವಿಜಯನಗರ..ಇಂದು ಬೆಳಗಿನ ಜಾವ 12:45 ಗಂಟೆ ಸುಮಾರಿಗೆ ವಿದ್ಯೂತ್ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅಗ್ನಿ ಅವಘಡಕ್ಕೆ ಒಂದೇ ಕುಟುಂಭದ ನಾಲ್ವರು ಸಜೀವವಾಗಿ ದಹನವಾದ ದಾರುಣ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 5ನೇ ವಾರ್ಡಲ್ಲಿರುವ ಶ್ರೀ ರಾಘವೇಂದ್ರ ಶೆಟ್ಟಿ ರವರ ಮನೆಯಲ್ಲಿ ಸಂಭವಿಸಿದೆ.
ಇದ್ದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮತ್ತು ಎ.ಸಿ ಲಿಕ್ ನಿಂದ ಮನೆಗೆ ಬೆಂಕಿ ಹತ್ತಿಕೊಂಡಿದ್ದು ಮನೆಯ ಕೆಳಗಡೆ ಮಲಗಿದ್ದ ರಾಘವೇಂದ್ರ ಶೆಟ್ಟಿ ಮತ್ತು ಅವರ ಹೆಂಡತಿ ರಾಜೇಶ್ರೀ ರವರು ಮನೆಯಿಂದ ಹೊರಗಡೆ ಓಡಿ ಬಂದಿದ್ದು,
ಮನೆಯ ಮೇಲುಗಡೆ ಬೆಡ್ರೂಮಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿ ರವರ ಮಗ ಡಿ ವೆಂಕಟ್ ಪ್ರಶಾಂತ್ 42 ವರ್ಷ, ವೈಷ್ಣವ ಜನಾಂಗ ಕಿರಣಿ ಅಂಗಡಿ ವ್ಯಾಪಾರಿ ಮತ್ತು ವೆಂಕಟ್ ಪ್ರಶಾಂತ್ ರವರ ಹೆಂಡತಿ ಡಿ ಚಂದ್ರಕಲ 38 ವರ್ಷ, ಹಾಗೂ ಅವರ ಮಕ್ಕಳಾದ 1) ಎಚ್. ಎ ಅರ್ದ್ವಿಕ್, 16 ವರ್ಷ, 2) ಪ್ರೇರಣಾ, 8 ವರ್ಷ ಇವರುಗಳು ಮನೆಯಿಂದ ಹೊರಗಡೆ ಬರಲಿಕ್ಕೆ ಆಗದೆ ಉಸಿರುಗಟ್ಟಿ ಮತ್ತು ಸುಟ್ಟಗಾಯಗಳಿಂದ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ನಾಲ್ಕು ಜನರ ಶವವನ್ನ 108 ಆಂಬುಲೆನ್ಸ್ ಮೂಲಕ ಹೊಸಪೇಟೆಯ 100 ಬೆಡ್ ಹಾಸ್ಪಿಟಲ್ಗೆ ರವಾನೆ ಮಾಡಲಾಗಿದೆ.
ಈ ಸಂಭಂದ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಡಾಣಪುರ ರಾಘವೇಂದ್ರ ಶೇಟ್ರು ಎಂದು ಹೆಸರು ಪಡೆದಿದ್ದ ಈ ಕುಟುಂಭ ಕಿರಾಣಿ ವ್ಯಾಪಾರದಲ್ಲಿ ಮರಿಯಮ್ಮನಹಳ್ಳಿ ಸುತ್ತ ಮುತ್ತಲಿನ 32 ಹಳ್ಳಿಗಳಿಗೂ ಪರಿಚಯವಿತ್ತು, ಉತ್ತಮ ಗುಣಮಟ್ಟದ ದಿನಸಿ ವಸ್ತುಗಳನ್ನ ಜನ ಸಾಮಾನ್ಯರಿಗೆ ತಲುಪಿಸುತಿದ್ದ ಈ ವೆಂಕಟ್ ಪ್ರಶಾಂತವರ ಅಂಗಡಿಯಲ್ಲಿದ್ದರೆ ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ದಿನಸಿ ಖರೀದಿಮಾಡುತಿದ್ದ ಸಂದರ್ಭಗಳು ಅದೆಷ್ಟೊ ಇದೆ. ಉತ್ತಮ ವ್ಯಾಪಾರ ನೀತಿ ಮೈಗೂಡಿಸಿಕೊಂಡಿದ್ದ ಶೆಟ್ಟರ ಕುಟುಂಭ ಇದೀಗ ಬೆಂಕಿಗೆ ಆಹುತಿಯಾಗಿರುವುದನ್ನ ಕಂಡ ಜನ ಸಾಮಾನ್ಯರು ಮಮ್ಮಲ ಮರುಗುತಿದ್ದಾರೆ. ಇನ್ನು ಕುಟುಂಭದಲ್ಲಿ ಬದುಕುಳಿದ ರಾಘವೇಂದ್ರ ಶೆಟ್ಟರು, ಮತ್ತು ಅವರ ಪತ್ನಿ ರಾಜಶ್ರೀ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಹಗರಿಬೊಮ್ಮನಹಳ್ಳಿ ವಿಧಾನ ಸಭ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಸಂತಾಪ ಸೂಚಿಸಿದ್ದಾರೆ ಕೂಡ.
ವರದಿ…ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ