You are currently viewing ಇವರು ಆಭರಣ ತಯಾರಿಸುವ ಅಕ್ಕಸಾಲಿಗರಲ್ಲ, ಬಂಗಾರವನ್ನೇ ತಯಾರಿಸುವ ಮೋಸಗಾರ.

ಇವರು ಆಭರಣ ತಯಾರಿಸುವ ಅಕ್ಕಸಾಲಿಗರಲ್ಲ, ಬಂಗಾರವನ್ನೇ ತಯಾರಿಸುವ ಮೋಸಗಾರ.

ವಿಜಯನಗರ…ಇತ್ತೀಚೆಗೆ ವಿಜಯನಗರದಲ್ಲಿ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದೆ‌. ಕಳೆದ ಕೆಲವು ತಿಂಗಳ ಹಿಂದೆ ಹರಪನಹಳ್ಳಿ ತಾಲೂಕಿನಲ್ಲಿ ನಕಲಿ ಬಂಗಾರ ಮಾರಾಟಮಾಡಿ ಮೋಸಮಾಡಿದ್ದವರು ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆ ಸುದ್ದಿ ಜನಗಳಿಂದ ಮರೆಮಾಚುವ ಮುಂಚೆಯೇ ಮತ್ತೊಬ್ಬ ನಕಲಿ ಬಂಗಾರ ತಯಾರಿಸಿ ವಂಚನೆಮಾಡಲು ಮುಂದಾಗಿದ್ದ ಅಕ್ಕಸಾಲಿಗ ಪೊಲೀಸರ ಅಥಿತಿಯಾಗಿದ್ದಾನೆ.

ನಿರಂಜನ ಎನ್ನುವ 23ವರ್ಷದ ವ್ಯಕ್ತಿಯೇ ನಕಲಿ ಬಂಗಾರವನ್ನ ಸಿದ್ದ ಪಡಿಸಿ ಮಾರಾಟಮಾಡುತಿದ್ದ ಖತರ್ನಾಕ್ ಆರೋಪಿಯಾಗಿದ್ದಾನೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟಿ ಗ್ರಾಮದ ಎ.ರಾಜು ಎನ್ನುವ ವ್ಯಕ್ತಿಗೆ ವಂಚಿಸಲು‌ ಮುಂದಾಗಿದ್ದ ಈ ನಿರಂಜನ್,

ಇಂದು ಬೆಳಗ್ಗೆ ಗುಡೇಕೋಟೆ ಗ್ರಾಮದ ಹೊರ ವಲಯದಲ್ಲಿರುವ ಬಳ್ಳಾರಿ ದುರ್ಗಮ್ಮ ದೇವಸ್ಥಾನದ ಬಳಿಯಲ್ಲಿ ಬೈಕಲ್ಲಿ ಹೋಗುತಿದ್ದ ಎ.ರಾಜುನನ್ನ ತಡೆದ ಈ ನಿರಂಜನ,  ತನ್ನಲ್ಲಿರುವ ನಕಲಿ ಬಂಗಾರ ಅಸಲಿ‌ ಎಂದು ತೋರಿಸಿ ಮಾರಾಟಮಾಡಲು ಮುಂದಾಗಿದ್ದಾರೆ, ನಮ್ಮ ತಾಯಿಯ ಆರೋಗ್ಯ ಸರಿಯಾಗಿಲ್ಲ, ಚಿಕಿತ್ಸೆಗಾಗಿ ಹಣದ ಅನಿವಾರ್ಯತೆ ಇದೆ, ನನ್ನ ಬಳಿ ಮನೆಯ ಬುನಾದಿ ಹಗೆಯುವ ಸಂದರ್ಭದಲ್ಲಿ ಸಿಕ್ಕಿದ್ದ ಬಂಗಾರದ ನಾಣ್ಯಗಳಿವು ಎಂದು ಹೇಳಿದ ನಿರಂಜನ್, ಇದು ಒಂದು ವೇಳೆ ಪೊಲೀಸರಿಗೆ ಗೊತ್ತಾದರೆ ನಮ್ಮನ್ನ ನಿಮ್ಮನ್ನ ಇಬ್ಬರನ್ನೂ ಪೊಲೀಸರು ಹಿಡಿದು ಹಾಕುತ್ತಾರೆ ಎಂದು ನಂಬಿಸಿ ವಂಚಿಸಲು ಮುಂದಾಗಿದ್ದಾನೆ.

ನನ್ನ ಬಳಿ ಇರುವ 200 ರಿಂದ 300 ಬಂಗಾರದ ನಾಣ್ಯಗಳನ್ನ ಕಡಿಮೆ ಬೆಲೆಗೆ ಮಾರಾಟಮಾಡುತ್ತೇನೆ ತೆಗೆದುಕೊಳ್ಳಿ ಎಂದು ವಂಚನೆಮಾಡಲು ಮುಂದಾಗಿದ್ದ ನಿರಂಜನ ಪೊಲೀಸರ ಅಥಿತಿಯಾಗಿದ್ದಾನೆ.

ಈ ಸಂದರ್ಭದಲ್ಲಿ ನಿರಂಜನನ ವಂಚನೆಯ ಸಂಚು ತಿಳಿದ ರಾಜು ಕೈಯಲ್ಲಿ ಒಂದು ಸಾವಿರು ರೂಪಾಯಿ ಹಣವನ್ನ ಮುಂಗಡವಾಗಿ ಕೊಟ್ಟು, ಇನ್ನುಳಿದ ಹಣವನ್ನ ಗುಡೇಕೋಟೆ ಗ್ರಾಮದ ಎ.ಟಿ.ಎಂ. ನಿಂದ ಹಣ ಡ್ರಾಮಾಡಿ ಕೊಡುವುದಾಗಿ ಹೇಳಿ ಉಪಾಯದಿಂದ ಕರೆದುಕೊಂಡು ಬಂದು ಗುಡೇಕೋಟಿ ಪೊಲೀಸರಿಗೆ ವಂಚಕನನ್ನ ಒಪ್ಪಿಸಿದ್ದಾನೆ. ಆರೋಪಿಯನ್ನ ವಶಕ್ಕೆ ಪಡೆದ ಗುಡೇಕೊಟೆ ಪಿ.ಎಸ್.ಐ.ಮಾಲಿಕ್ ಸಾಬು ವಂಚಕನನ್ನ ಚನ್ನಾಗಿ ಡ್ರಿಲ್ ಮಾಡಿ, ಹೆಚ್ಚಿನ ಸತ್ಯಾಂಶ ಬಾಯಿ ಬಿಡಿಸಿದ್ದಾರೆ, ಅದಲ್ಲದೆ ಈತ ನಕಲಿ ಚಿನ್ನ ತಯಾರಿಕೆಗೆ ಬಳಸಿದ್ದ ಪಂಚಲೋಹ ಹಾಗೂ ಹಿತ್ತಾಳೆ ತಗಡಿನ ತುಂಡುಗಳು ಮತ್ತು, ನಾಣ್ಯಮಾಡಲು ಬಳಸುತಿದ್ದ ಪ್ರಸ್ಸಿಂಗ್ ಯೂನಿಟ್ಟನ್ನ ಕೂಡ ಪೊಲೀಸರು ವಶಕ್ಕೆ ಪಡೆದಿದ್ದು,ನಿರಂಜನನ ಇನ್ನೂ ಮೂರು ಜನ ಸಹಚರರನ್ನ ಕೂಡ ಬಂದಿಸಿದ್ದಾರೆ, ಅಭಿಷೇಕ್, ಕಿರಣ್, ರಾಮಪ್ಪ, ನಿರಂಜನ ಜೊತೆಗೆ ಪೊಲೀಸರ ಅಥಿತಿಯಾಗಿದ್ದಾರೆ.ಈ ನಾಲ್ವರು ವಿರುದ್ದ ವಂಚನೆಯ ದೂರು ದಾಖಲಿಸಿದ ಗುಡೇಕೋಟೆ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. 

ಈ ಹಿಂದಿನ ಎಲ್ಲಾ ನಕಲಿ ಚಿನ್ನದ ಪ್ರಕರಣಗಳಲ್ಲಿ ಈ ನಿರಂಜನ ಮತ್ತು ಈತನ ಮೂರು ಜನ ಸಹಚರರ ಕೈವಾಡ ಅಡಗಿತ್ತ ಎನ್ನುವ ಅನುಮಾನ ಇದೀಗ ಮೂಡತೊಡಗಿದೆ. ಕಾರಣ ಹರಪನಹಳ್ಳಿ ಕೂಡ್ಲಿಗಿ ದಾವಣಗೇರಿ ಜಿಲ್ಲೆಯಲ್ಲಿ ಇಂತಾ ನಕಲಿ ಚಿನ್ನ ತಯಾರಿಸಿ ವಂಚನೆಮಾಡಿದ ಅದೆಷ್ಟೊ ಪ್ರಕರಣಗಳು ದಾಖಲಾಗಿವೆ. ಇನ್ನೂ ಕೆಲವು ಪ್ರಕರಣಗಳು ಪೊಲೀಸರ ಗಮನಕ್ಕೆ ಬರದೆ ಮುಚ್ಚಿಹೋಗಿವೆ. ಆ ಎಲ್ಲಾ ಪ್ರಕರಣಗಳಲ್ಲಿ ಈ ನಿರಂಜನನ ಕೈವಾಡ ಅಡಗಿತ್ತಾ ಎನ್ನುವುದು ಪಕ್ಕಾ ಆಗಬೇಕಿದೆ. ಯಾಕೆಂದರೆ ನಕಲಿ ಚಿನ್ನ ತಯಾರಿಸುವುದು ಅಷ್ಟು ಸುಲಭದ ಮಾತೇನಲ್ಲ,  ವೃತ್ತಿಯಲ್ಲಿ ಪರಿಣತಿಯನ್ನ ಹೊಂದಿದವರೇ ನಕಲಿಯನ್ನ ಸಿದ್ದಪಡಿಸಿ ಅಸಲಿ ಎಂದು ನಂಬುವ ಹಾಗೆ ಮಾಡಲು ಸಾಧ್ಯ. ಒಟ್ಟಿನಲ್ಲಿ ಬಂಗಾರ ಕಂಡ ಕೂಡಲೆ ಬಾಯಿ ಬಾಯಿ ಬಿಟ್ಟು ಸಿಗುತ್ತೊ ಸಿಗಲ್ವೊ ಎಂದು ಹಣ ಕಳೆದುಕೊಳ್ಳುವವರು ಇಂತಾ ಪ್ರಕರಣದಿಂದ ಬುದ್ದಿ ಕಲಿಯಬೇಕಿದೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

https://youtu.be/1PA8yfT07Ao

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.