ಕೆಲವು ಗಣ್ಯಾತಿಗಣ್ಯರು ಸಸಿನೆಡುವುದು ನೆಟ್ಟ ಸಸಿಗಳಿಗೆ ನೀರುಣಿಸುವ ಮುಖಾಂತ್ರ ಕಾರ್ಯಕ್ರಮಗಳಲ್ಲಿ ಪುಂಕಾನು ಪುಂಕವಾಗಿ ಭಾಷಣ ಬಿಗಿದು ಮನೆಗಳಿಗೆ ತೆರಳುತ್ತಾರೆ, ನಾಳೆ ಬೆಳಗಾದ್ರೆ ನಿನ್ನೆ ನಾವು ಏನು ಮಾತನಾಡಿದ್ವಿ ಎನ್ನುವುದು ಕೂಡ ನೆನಪಿರುವುದಿಲ್ಲ ಆ ಗಣ್ಯಮಾನ್ಯರಿಗೆ, ಆದ್ರೆ ಇಲ್ಲೊಬ್ಬ ಅಪರೂಪದ ವ್ಯೆಕ್ತಿ ಇದ್ದಾನೆ, ಈತನ ಕಾಯಕದಲ್ಲಿ ತೋರುವ ನಿಷ್ಟೆ ಹೇಗಿದೆ ಎಂದ್ರೆ, ಪರಿಸರವೇ ಈತನೊಂದಿಗೆ ಮಾತನಾಡುತ್ತೆ, ಕೂಗಿದ್ರೆ ಪ್ರೀತಿಯಿಂದ ಬಂದು ಅಪ್ಪಿಕೊಳ್ಳುತ್ತೆ, ಅರೆ ಏನದು ವಿಷೇಶ ಅಂತೀರ ಈ ವರದಿ ನೋಡಿ.
ಹೌದು ಹೀಗೆ ಕುರುಚಲು ಕಾಡಿನಲ್ಲಿ ನಿಂತು ಲಕ್ಷ್ಮಿ ಲಕ್ಷಿ ಎಂದು ಈ ವ್ಯೆಕ್ತಿ ಕೂಗುತ್ತಿರುವುದು ಯಾವುದೋ ಮನುಕುಲದ ಸಂಭಂದಿಗಳನ್ನಲ್ಲ, ಬದಲಾಗಿ ಪರಿಸರದಲ್ಲಿ ಒಂದು ಬಾಗವಾಗಿರುವ ಜಿಂಕೆ ಮರಿಯನ್ನ, ಹೌದು ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಅವಿನಾಭಾವ ಸಂಭಂದ ಕಂಡುಬರುವುದು ವಿಜಯನಗರ ಜಿಲ್ಲೆಯ ಕಮಲಾಪುರ ಬಳಿಯ ಬಿಳಿಕಲ್ಲು ಅರಣ್ಯದಲ್ಲಿನ ಅಟಲ್ ಬಿಹಾರ್ ವಾಜ್ಪೇಯಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿ, ಪಾರ್ಕಲ್ಲಿ ಕಾವಲುಗಾರನಾಗಿ ಕೆಲಸಮಾಡುತ್ತಿರುವ ಈ ಬಸವರಾಜನನ್ನ ಕಂಡ್ರೆ ಇಲ್ಲಿನ ಬಹುತೇಕ ಕಾಡು ಪ್ರಾಣಿಗಳಿಗೆ ಅಚ್ಚು ಮೆಚ್ಚು, ಅದರಲ್ಲಿಯೂ ಇಂದಿರಾ ಪ್ರಿಯದರ್ಶಿನಿ ಜಿಂಕೆ ವನದಲ್ಲಿನದಲ್ಲಿರುವ ಈ ಪುಟ್ಟ ಪುಟ್ಟ ಜಿಂಕೆ ಮರಿಗಳಿಗಂತೂ ತುಂಬಾ ಪ್ರೀತಿ, ಜಿಂಕೆ ವನದ ವಳಗಡೆ ಹೋಗಿ ಹೆಸರಿಟ್ಟು ಜಿಂಕೆ ಮರಿಗಳನ್ನ ಕೂಗಿದ್ರೆ ಬಸವರಾಜ್ ಇದ್ದ ಕಡೆ ಓಡೊಡಿ ಬರುತ್ತವೆ ಈ ಮರಿಗಳು, ಅದರಲ್ಲೂ ಲಕ್ಷ್ಮಿ ಮತ್ತು ಗೌರಿ ಎನ್ನುವ ಎರಡು ಜಿಂಕೆ ಮರಿಗಳು ಯಾವುದೇ ಭಯವಿಲ್ಲದೆ ಬಸವರಾಜ್ ಇದ್ದ ಕಡೆ ಬಂದು ಪ್ರೀತಿ ತೋರಿಸುತ್ತವೆ, ಇದಕ್ಕೆ ಕಾರಣ ಬಸವರಾಜ್ ಆ ಅನಾಥ ಮರಿಗಳಿಗೆ ಬಸವರಾಜ ತೋರಿಸಿದ ಪ್ರೀತಿ,
ಇನ್ನು ಇತ್ತೀಚೆಗೆ ಗೌರಿ ಎನ್ನುವ ಈ ಜಿಂಕೆ ಒಂದು ಮರಿಗೆ ಜನ್ಮ ನೀಡಿದ್ದು ಇದರಿಂದ ಗೌರಿಯ ಆರೋಗ್ಯ ತುಂಬಾ ಹದಗೆಟ್ಟಿಂತಂತೆ ಆ ಸಂದರ್ಭದಲ್ಲಿ ಪ್ರತಿದಿನ ಬಸವರಾಜ್ ಬರುವ ದಾರಿಯನ್ನ ಕಾಯುತ್ತಲೇ ಇದ್ದುದ್ದನ್ನ ಕಂಡು ತನ್ನ ಕಾವಲಿಗೆ ಕೊಟ್ಟಿದ್ದ ಒಂದು ಕೋಣೆಯಲ್ಲೇ ಗೌರಿಗೆ ಹಾರೈಕೆ ಮಾಡಿ ಇದೀಗ ತಾಯಿ ಮಗುವನ್ನ ಬೆಳಸಿದ್ದಾನೆ, ಅದಿಕಾರಿಗಳ ಒಪ್ಪಿಗೆಯ ನಂತ್ರ ಇಬ್ಬರನ್ನೂ ಮತ್ತೆ ಕಾಡಿಗೆ ಸೇರಿಸಿದ್ದಾನೆ,ಇನ್ನು ಜಿಂಕೆ ವನದಲ್ಲಿ ಸುಮಾರು ಮೂರು ನೂರಕ್ಕೂ ಜಿಂಕೆಗಳಿವೆ, ಪ್ರತಿದಿನ ಸಮಯಕ್ಕೆ ಸರಿಯಾಗಿ ಕಾಳು ನೀರು ಅವುಗಳ ಯೋಗ ಕ್ಷೇಮವನ್ನ ಸೂಕ್ಷ್ಮವಾಗಿ ಗಮನಿಸುವುದು ಇವರ ಕೆಲಸ, ಹಾಗಂತ ಇವೇನು ಸಾಕಿದ ಜಿಂಕೆಗಳಲ್ಲ, ಎಲ್ಲವೂ ಕಾಡಿನಲ್ಲಿ ಬೆಳೆದಿರುವ ಜಿಂಕೆಗಳೆ, ಆದ್ರೆ ಪ್ರತಿದಿನ ಈ ಬಸವರಾಜ್ ಅವುಗಳ ಮದ್ಯ ಸಂಚಾರ ನಡೆಸಿ ಅವುಗಳಿಗೆ ಹತ್ತಿರವಾಗಿದ್ದಾನೆ, ಇನ್ನು ಬಸವರಾಜ್ ಅವರ ಕಾರ್ಯಕ್ಕೆ ಮೇಲಾದಿಕಾರಿಗಳು ಕೂಡ ಸಾತ್ ನೀಡಿ ಪ್ರಶಂಸಿಸುತ್ತಾರೆ,
ಕೇವಲ ಕೆಲವು ವಿಷೇಶ ದಿನಗಳಲ್ಲಿ ತೋರಿಕೆಗೋಸ್ಕರ ಪರಿಸರವನ್ನ ಉಳಿಸಿ ಬೆಳಸುವ ಮಾತನಾಡುವರು ಗಣ್ಯಾತಿಗಣ್ಯರು ಈ ಬಸವರಾಜನ್ನ ನೋಡಿ ಕಲಿಯ ಬೇಕಾಗಿದೆ, ಯಾಕೆಂದ್ರೆ ಪ್ರತಿಯೊಬ್ಬರು ತಮ್ಮ ಕಾಯದಲ್ಲಿ ನಿಷ್ಠೆ ತೋರಿಸಿದ್ರೆ ಯಾವುದೇ ವಿಷೇಶ ದಿನಗಳ ಆಚರಣೆಯೇ ಇರೊದಿಲ್ಲ ಎನ್ನುವುದು ನಮ್ಮ ಅಭಿಪ್ರಾಯ,
ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ