ನಮ್ಮ ಕನ್ನಡ ನಾಡಿಗೆ ವಿಜಯನಗರ ಸಾಮ್ರಾಜ್ಯದ ಕೊಡುಗೆ ಅಪಾರ. ಅದರಲ್ಲೂ ಶ್ರೀಕೃಷ್ಣದೇವರಾಯರ ಕುಡುಗೆಯನ್ನಂತೂ ಮರೆಯುವ ಹಾಗಿಲ್ಲ, ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯ ಗಟ್ಟಿ ನೆಲೆಯೂರಲು ಶ್ರೀಕೃಷ್ಣದೇವರಾಯರ ಕೊಡುಗೆ ಅಪಾರ. ಆದರೆ ಇಂತಾ ಮಹಾನ್ ರಾಜನ ಜಯಂತಿಯ ಆಚರಣೆಯನ್ನ ಕಡೆಗಣಿಸಿರುವುದು ದುರಾದೃಷ್ಟಕರ.
ಮಾಜಿ ಸಚಿವ ಗಣಿದಣಿ ಗಾಲಿ ಜನಾರ್ಧನ ರೆಡ್ಡಿ ಕೃಷ್ಣದೇವರಾಯರ 500ನೇ ಜಯಂತಿಯನ್ನ ಅದ್ದೂರಿಯಾಗಿ ಆಚರಣೆಮಾಡಿದ ನಂತರ ಮತ್ತೆ ಮುನ್ನೆಲೆಗೆ ಬರಲೇ ಇಲ್ಲ ರಾಯರ ಹುಟ್ಟು ಹಬ್ಬ, ಇತ್ತೀಚೆಗೆ ಸರ್ಕಾರ ಪ್ರತಿಯೊಂದ ಧರ್ಮಾಧಾರಿತ ಮಹಾನ್ ವ್ಯಕ್ತಿಗಳ ಜಯಂತಿಯನ್ನ ಆಚರಣೆಮಾಡುತಿದೆ. ಆದರೆ ಕನ್ನಡ ನೆಲಕ್ಕಾಗಿ, ಧರ್ಮಕ್ಕಾಗಿ ಶ್ರಮಿಸಿದ ಕೃಷ್ಣದೇವರಾಯರ ಜಯಂತಿಯನ್ನ ಕಡೆಗಣಿಸಿರುವದು ಮಾತ್ರ ಬೇಸರದ ಸಂಗತಿ. ಯಾಕೆ ಈ ತಾರಮ್ಯ ಎನ್ನುವ ಪ್ರಶ್ನೆ ಇತಿಹಾಸ ಪ್ರಿಯರದ್ದಾಗಿದೆ.
ಇನ್ನು ಸರ್ಕಾರ ಜಯಂತಿಯನ್ನ ಕಡೆಗಣಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸಂಘಟನೆಗಳು ಕಮಲಾಪುರದ ಕೃಷ್ಣದೇವರಾಯ ವೃತ್ತದಲ್ಲಿರುವ ಪ್ರತಿಮೆಗೆ ಪೂಜೆ ಸಲ್ಲಿಸಿ ಸರ್ಕಾರ ರಾಯರ ಜಯಂತಿಯನ್ನು ನಿರ್ಲಕ್ಷಿಸಿರುವುದು ಸರಿಯಲ್ಲ. ಈ ಕೂಡಲೇ ಸರಕಾರದ ವತಿಯಿಂದ ಶ್ರೀ ಕೃಷ್ಣದೇವರಾಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಆಗ್ರಹಿಸಿದೆ.ಇನ್ನು ಶ್ರೀವಾಲ್ಮೀಕಿ ಸಮಾಜ, ಹಂಪೆಯ ಪ್ರವಾಸಿ ಮಾರ್ಗದರ್ಶಿ ಸಂಘದ ಸಹಯೋಗದಲ್ಲಿ ಸಾಂಕೇತಿಕವಾಗಿ ವಿಜೃಂಭಣೆಯಿಂದ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಡಾ ವಿಶ್ವನಾಥ ಮಾಳಗಿ. ಈರಣ್ಣ ಪೂಜಾರಿ, ವೀರೇಶ್, ರಾಚಯ್ಯ, ಭರಮಪ್ಪ, ಬಸಪ್ಪ ಕಡ್ಲೇರ್, ಗೋಪಾಲ್, ಲೋಕೋಭಿರಾಮ, ಭಾನು ಪ್ರಕಾಶ್, ನಾಗರಾಜ್, ಕುಪೇಂದ್ರ, ಹನುಮಂತ, ವೀರಭದ್ರ, ವಿರೂಪಾಕ್ಷ, ಇನ್ನಿತರರು ಉಪಸ್ಥಿತರಿದ್ದರು
ವರದಿ..ಸುಬಾನಿ ಪಿಂಜಾರ. ವಿಜಯನಗರ.