You are currently viewing ಗೋಡೆಯ ಮೇಲೆ ಮೂಡಿದ ರಾಮಾಯಣ.

ಗೋಡೆಯ ಮೇಲೆ ಮೂಡಿದ ರಾಮಾಯಣ.

ವಿಜಯನಗರ..ಹಂಪಿಯಲ್ಲಿರುವ ಅತ್ಯಂತ ವಿಶಿಷ್ಟವಾದ ಮತ್ತು ಜನಪ್ರಿಯವಾದ ವಾಸ್ತು ಶಿಲ್ಪವನ್ನ ಹೊಂದಿರುವ ದೇವಾಲಯಗಳಲ್ಲಿ ಒಂದಾದ  ಹಜಾರ ರಾಮ ದೇವಾಲಯ ರಾಜಮನೆತನದ ಆವರಣದ ಮಧ್ಯಭಾಗದಲ್ಲಿರುವ ಬಹುಕಾಂತೀಯ ದೇವಾಲಯವಾಗಿದೆ. ಇದು ಹಿಂದೂ ದೇವತೆಯಾದ ಭಗವಾನ್ ಶ್ರೀರಾಮನಿಗೆ ಸಮರ್ಪಿತವಾಗಿದೆ. ರಾಮಾಯಣದ ಅನೇಕ ವಿಶಿಷ್ಟ ವಿಷಯಗಳನ್ನ ಈ ದೇವಾಲಯದ ಗೋಡೆಗಳ ಮೇಲೆ ಕೆತ್ತನೆಮಾಡಲಾಗಿದೆ. ಸಂಪೂರ್ಣ ರಾಮಾಯಣವನ್ನು ಚಿತ್ರಿಸುವ ಹಲವಾರು ಮೂಲ-ಉಲ್ಲೇಖಗಳನ್ನು ಉಲ್ಲೇಖಿಸಿ ಅಕ್ಷರಶಃ ಸಾವಿರ ರಾಮ ಎಂದು ಅನುವಾದಿಸುವುದರಿಂದ “ಹಜಾರ ರಾಮಸ್ವಾಮಿ ದೇವಾಲಯ” ಎಂಬ ಹೆಸರು ಈ ದೇವಸ್ಥಾನಕ್ಕೆ ಬಂತು ಎಂದು ಹೇಳಲಾಗುತ್ತಿದೆ.

ಈ ದೇವಾಲಯವನ್ನು ವಿಜಯನಗರದ ಅರಸ ಎರಡನೆ ದೇವರಾಯ 15 ನೇ ಶತಮಾನದ ಆರಂಭದಲ್ಲಿ ನಿರ್ಮಿಸಿದ್ದಾನೆ. ಗರ್ಭಗುಡಿ,  ಮಂಟಪ ಮತ್ತು ಸ್ತಂಭದ ಸಭಾಂಗಣವನ್ನು ಒಳಗೊಂಡಿರುವ ಸರಳ ರಚನೆಯ ಹಜಾರ ರಾಮ ದೇವಾಲಯ  ಒಮ್ಮೆ ವಿಜಯನಗರದ ರಾಜ ಮತ್ತು ರಾಜಮನೆತನದ ಖಾಸಗಿ ದೇವಾಲಯವಾಗಿ ಬಳಸಲ್ಪಟ್ಟಿತು. ಸೊಗಸಾದ ಸ್ತಂಭಗಳೊಂದಿಗೆ ತೆರೆದ ಮುಖಮಂಟಪವನ್ನು ಹೊಂದಿದ ದೇವಾಲಯವನ್ನು ನಂತರ ನವೀಕರಿಸಲಾಯಿತು. ಕಂಬದ ಸಭಾಂಗಣವು ಮಧ್ಯದಲ್ಲಿ ಕಲ್ಲಿನ ವೇದಿಕೆಯನ್ನು ಹೊಂದಿದೆ, ಅದರ ಮೇಲೆ ಕಪ್ಪು ಕಂಬಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಒಳಭಾಗವು ಹೆಚ್ಚು ಅಲಂಕೃತ ಮತ್ತು ಕೆತ್ತಿದ ಅಂಕಣಗಳನ್ನು ಹೊಂದಿದೆ.ಈ ದೇವಾಲಯವು ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳನ್ನು ಹೊಂದಿತ್ತು ಎನ್ನಲಾಗಿದೆ. ಹಜಾರ ರಾಮನ ದೇವಸ್ಥಾನದ ಮುಖ್ಯ ದ್ವಾರವು ಪೂರ್ವದಲ್ಲಿದೆ ಮತ್ತು ದಕ್ಷಿಣದಲ್ಲಿ ಸಣ್ಣ ದ್ವಾರಗಳು ದರ್ಬಾರ್ ಪ್ರದೇಶಕ್ಕೆ ದಾರಿ ಮಾಡಿಕೊಡುತ್ತವೆ. ಈ ದೇವಾಲಯವು ವಿಜಯನಗರದ ವಾಸ್ತುಶಿಲ್ಪದ ಸಿರಿವಂತಿಕೆಯ ಅತ್ಯುತ್ತಮ ಉದಾಹರಣೆಯಾಗಿದೆ ಎಂದ್ರೆ ತಪ್ಪಾಗಲಾರದು.


ಇನ್ನು ಹಂಪಿಯಲ್ಲಿರುವ ಈ ದೇವಾಲಯಕ್ಕೆ ಪ್ರವಾಸಿಗರು ಹೇಗೆ ಸಂಪರ್ಕಿಸಬೇಕೆಂದ್ರೆ ಈ ಮಾರ್ಗವನ್ನ ಅನುಸರಿಸಿ. ಕಮಲಾಪುರ ಮಾರ್ಗವಾಗಿ ಹೋಗಬಯಸುವ ಪ್ರವಾಸಿಗರು ರಾಣಿಯರ ಸ್ನಾನದ ಗೃಹ ಬಳಿಯಲ್ಲಿ ಬಲಬಾಗಕ್ಕೆ ತಿರುಗಿ ಅಲ್ಲಿಂದ ಮಹಾನವಮಿ ದಿಬ್ಬವನ್ನ ವೀಕ್ಷಣೆಮಾಡಿಕೊಂಡು ನಂತರ ಮುಂದೆ ಹೋದರೆ ಕೋಟೆ ಗೋಡೆ ಪಕ್ಕದ ಎಡ ಬಾಗಕ್ಕೆ ಇರುವ ವಾಸ್ತುಶಿಲ್ಪವೇ ಈ ಹಜಾರಾ ರಾಮ ದೇವಸ್ಥಾನ. ಮತ್ತೊಂದು ಮಾರ್ಗ ಹಂಪಿಯಿಂದ ಪ್ರವಾಸಮಾಡುತ್ತ ಬರುವ ಪ್ರವಾಸಿಗರು ನೆಲ ಸ್ಥರದ ಶಿವನ ದೇವಾಲದ ಪಕ್ಕದಲ್ಲಿರುವ ಮಾರ್ಗದ ಮೂಲಕ ಹಾದು ಕೂಡ ಈ ದೇವಾಲಯಕ್ಕೆ ಸಂಪರ್ಕ ಪಡೆಯಬಹುದು.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ..ಸುಬಾನಿ ಪಿಂಜಾರ ಹಂಪಿ‌ಮಿರರ್ ವಿಜಯನಗರ.