ವಿಜಯನಗರ…ವಿಶ್ವ ವಿಖ್ಯಾತ ಹಂಪಿಗೆ ಬೇಟಿ ನೀಡಿದ ಮಾಜಿ ಸಚಿವ ಗಾಲಿ ರೆಡ್ಡಿ ಹಾಗೂ ಹಾಲಿ ಸಚಿವ ಶ್ರೀರಾಮುಲು ಅವರು ಇಂದು ಹಂಪಿಯ ಹಳೇ ಮ್ಯಾಂಗೋ ಟ್ರಿ ಹೋಟೆಲ್ ಬಳಿಯಲ್ಲಿ ವಿಶೇಷ ಪೂಜೆ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ. ಸಹಜವಾಗಿ ಹಂಪಿಗೆ ಯಾರೇ ಬೇಟಿ ನೀಡಿದರೂ ಕೆಲವು ನಿಗದಿತ ಸ್ಥಳದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ.
ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿರುವ ಮಂಟಪಗಳಲ್ಲಿ, ಕೋದಂಡ ರಾಮಸ್ವಾಮಿ ದೇವಸ್ಥಾನದ ಬಳಿಯಲ್ಲಿರುವ ಮಂಟಪಗಳಲ್ಲಿ ಪೂಜೆ ಸಲ್ಲಿಸುವುದು ಪದ್ದತಿ. ಇನ್ನು ಅದೇ ರೀತಿಯಾಗಿ ತಮ್ಮ ಹಿರಿಯರ ಪಿತೃಪಕ್ಷ ಕರ್ಮ ಪೂಜೆ ಮಾಡುವ ಸಂಭಂದ ವಿರೂಪಾಕ್ಷೇಶ್ವ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಭದ್ರ ನದಿ ದಡದಲ್ಲಿರುವ ಕರ್ಮ ಮಂಟಪದಲ್ಲಿ ಪೂಜೆ ಸಲ್ಲಿಸುವುದು ಪದ್ದತಿ ಇದೆ. ಆದರೆ ಇವೆಲ್ಲ ಸ್ಥಳಗಳನ್ನ ಬಿಟ್ಟು ಓಲ್ಡ್ ಮ್ಯಾಂಗೊ ಟ್ರೀ ಬಳಿಯಲ್ಲಿ ಪೂಜಾ ಕಾರ್ಯ ನೆರವೇರಿಸಿ ಚೆರ್ಚೆಗೆ ಗ್ರಾಸವಾಗಿದ್ದಾರೆ.
ಇಂದು ಬೆಳಗ್ಗೆ ಹಂಪಿಗೆ ಬೇಟಿ ನೀಡಿದ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿಯವರು ಮೊದಲಿಗೆ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು, ಅದಾದ ಬಳಿಕ ಹಳೇ ಮ್ಯಾಂಗೊ ಟ್ರಿ ಹೊಟೆಲ್ ಬಳಿ ಆಯೋಜನೆಗೊಂಡಿದ್ದ ಪೂಜಾ ಕಾರ್ಯದಲ್ಲಿ ಬಾಗಿಯಾದರು, ಅಲ್ಲಿಂದ ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ, ಪೂಜೆ ಸಲ್ಲಿಸಿ ಆನಂತರ ಪಕ್ಕದಲ್ಲೇ ಇರುವ ಯಂತ್ರೋದ್ದಾರಕ ಸ್ವಾಮಿ ದೇವಸ್ಥಾನದಲ್ಲಿ ಕೂಡ ಪೂಜೆ ಸಲ್ಲಿಸಿದರು,
ಇನ್ನು ಕಳೆದ ಒಂದು ವರ್ಷದಿಂದ ಹಂಪಿಯ ಕೋದಂಡರಾಮಸ್ವಾಮಿ ಮತ್ತು ಯಂತ್ರೊದ್ದಾರಕ ದೇವಸ್ಥಾನವನ್ನ ಸಚಿವ ಶ್ರೀ ರಾಮುಲು ತಮ್ಮ ಸ್ವಂತ ಹಣದಿಂದ ಜೀರ್ಣೊದ್ದಾರ ಕೈಗೆತ್ತಿಕೊಂಡಿದ್ದಾರೆ.ಇದೀಗ ಜೀರ್ಣೋದ್ದಾರ ಕಾರ್ಯ ಮುಕ್ತಾಯ ಹಂತಕ್ಕೆ ತಲುಪುತಿದ್ದು,ಇನ್ನು ಇವೆಲ್ಲದರ ಮದ್ಯೆ ಜನಾರ್ಧನ ರೆಡ್ಡಿಯವರು ಮತ್ತೆ ಬಳ್ಳಾರಿಯಲ್ಲಿ ರಾಜಕಾರಣಕ್ಕೆ ಇಳಿದು ದೂಳೆಬ್ಬಿಸಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಎಲ್ಲಾ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎನ್ನಲಾಗಿದೆ.
ಇನ್ನು ಹಂಪಿಗೆ ಬೇಟಿ ನೀಡಿದ ಜಮಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಅವರೊಂದಿಗೆ ಮಾಜಿ ಸಂಸದೆ ಜೆ.ಶಾಂತ ಹಾಗೂ ಗುರುಲಿಂಗನಗೌಡ ಮತ್ತು ಹೊಸಪೇಟೆ ಬಿಜೆಪಿ ಮುಖಂಡ ಕಟಿಗಿ ರಾಮಕೃಷ್ಣ ಸೇರಿದಂತೆ ಹಲವು ಬಿಜೆಪಿ ಮುಖಂಡರು ಜೊತೆಗೆ ಇದ್ದರು.
ಇದಾದ ಬಳಿಕ ತಮ್ಮ ಸಂಗಡಿಗರೊಂದಿಗೆ ಊಟ ಮಾಡಿ, ನಂತರ ಮಾದ್ಯಮದ ಪ್ರತಿನಿಧಿಯೊಂದಿಗೆ ಮಾತನಾಡಿದರು. KPCC ಅಧ್ಯಕ್ಷ ಡಿಕೆ. ಶಿವಕುಮಾರ್ ನಿವಾಸಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭೇಟಿ ವಿಚಾರದ ಕುರಿತು ಮಾತನಾಡಿದ ಶ್ರೀರಾಮುಲು ಅವರು ಬಿಜೆಪಿ ಸರ್ಕಾರ ಬರೋದಕ್ಕೆ ಆನಂದ್ ಸಿಂಗ್ ಅವರ ಕೊಡುಗೆ ಅಪಾರವಾಗಿದೆ,ಅವರ ತ್ಯಾಗದಿಂದ ಇಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ.
ಡಿಕೆಶಿ- ಆನಂದ್ ಸಿಂಗ್ ಭೇಟಿ ಕುಶಲೋಪರಿಯ ಮಾತುಗಳು ಇರಬಹುದು, ಬಿಜೆಪಿಯನ್ನು ಗಟ್ಟಿಗೊಳಿಸೋ ನಿಟ್ಟಿನಲ್ಲಿ ಸಚಿವ ಆನಂದ್ ಸಿಂಗ್ ಕೆಲಸ ಮಾಡುತ್ತಿದ್ದಾರೆ, 2023 ರ ವಿಧಾನ ಸಭೆ ಚುನಾವಣೆಯಲ್ಲಿ ನಾನು, ಆನಂದ್ ಸಿಂಗ್ ಇಬ್ಬರು ಒಗ್ಗಟ್ಟಾಗಿ ನಿಂತು ಕಾಂಗ್ರೆಸ್ ಪಕ್ಷದದವರನ್ನು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸೋಲಿಸುತ್ತೇವೆ,ಅವಳಿ ಜಿಲ್ಲೆಗಳಲ್ಲಿ ಬಿಜೆಪಿಯ ಹೆಚ್ಚು ಶಾಸಕನ್ನು ಗೆಲ್ಲಿಸುತ್ತೆವೆ, ಎಂದು ಹಂಪಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದರು.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.