ವಿಜಯನಗರ…73ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಇಂದು ಬೆಳ್ಳಂಬೆಳಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು. ಬಟನ್ ಒತ್ತುವ ಮೂಲಕ ನಗರಸಭೆ ಅಧ್ಯಕ್ಷೆ ಸುಂಕಮ್ಮ,ಹಾಗೂ ಉಪಾಧ್ಯಕ್ಷ ಆನಂದ್ 150 ಅಡಿಯ ದ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಕೂಡ ಬಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹೊಸಪೇಟೆ ಪಟ್ಟಣ ಪೊಲೀಸರಿಂದ ಧ್ವಜಾರೋಹಣದ ಮುನ್ನ ಗಾಡ ಆಫ್ ಹಾನರ್ ಸ್ವೀಕಾರ ಮಾಡಿದರು ಸಚಿವ ಆನಂದ್ ಸಿಂಗ್. ಸಹಜವಾಗಿ ದ್ವಜಾರೋಹಣ ನೆರವೇರಿಸುವ ಗಣ್ಯಮಾನ್ಯರಿಗೆ ಗಾಡ್ ಆಪ್ ಹಾನರ್ ನೀಡಿ ದ್ವಜಾರೋಹಣಕ್ಕೆ ಆಹ್ವಾನಿಸುವುದು ಶಿಷ್ಟಾಚಾರ, ಆದರೆ ಇಲ್ಲಿ ದ್ವಜಾರೋಹಣ ನೆರವೇರಿಸಿದ್ದು ಹೊಸಪೇಟೆ ನಗರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರು, ಆದರೆ ಗಾಡ ಆಪ್ ಹಾನರ್ ಸ್ವೀಕರಿಸಿದ್ದು ಮಾತ್ರ ಸಚಿವ ಆನಂದ್ ಸಿಂಗ್,
ಅದಲ್ಲದೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪೊಲೀಸ್ ಇಲಾಖೆ ಗಾಡಾಪ್ ಹಾನರ್ ಕೊಡುವುದು ಪದ್ದತಿ, ಅದು ದ್ವಜಾರೋಹಣ ಸಂದರ್ಭದಲ್ಲಿ ಮಾತ್ರ, ಆದರೆ ಜಿಲ್ಲಾ ಉಸ್ತುವಾರಿ ಕೊಪ್ಪಳ ಜಿಲ್ಲೆಗೆ ವರ್ಗಾವಣೆ ಆದ ಮೇಲೆಯೂ ವಿಜಯನಗರ ಜಿಲ್ಲೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಗಾಡಾಫ್ ಹಾನರ್ ಸ್ವೀಕಾರಮಾಡಿರುವುದು ಒಂದು ರೀತಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆಯಾ, ಅಥವಾ ಪೊಲೀಸ್ ಇಲಾಖೆಯೇ ಶಿಷ್ಟಾಚಾರ ಉಲ್ಲಂಘಸಿತ ಎನ್ನುವ ಅನುಮಾನಗಳು ಇದೀಗ ಮೂಡತೊಡಗಿದೆ.
ನಂತರ ಮಾದ್ಯಮದ ಜೊತೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್,ವಿಜಯನಗರ ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರ, ನನ್ನ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ,ಅವರಿಗೆ ಸರಿಯಾದ ಮಾಹಿತಿ ಇಲ್ಲಾ, ಸರ್ಕಾರ ತೆಗೊಂಡ ತಿರ್ಮಾನ ಸರಿಯಾಗಿದೆ, ಸರ್ಕಾರದ ಕೆಲ ಸ್ಟ್ಯಾಟರ್ಜಿ ಏನಿದೆ ಎಂದು ನಮಗೆ ಗೊತ್ತಿಲ್ಲ, ಕೇವಲ ವಿಜಯನಗರ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾ ಉಸ್ತುವಾರಿಯನ್ನ ಬದಲಾವಣೆ ಮಾಡಿಲ್ಲ, ತವರು ಜಿಲ್ಲೆಯಲ್ಲಿ ಯಾರಿಗೂ ಉಸ್ತುವಾರಿ ಕೊಡಲಾಗಿತ್ತೊ ಅಂತವರ ಉಸ್ತುವಾರಿ ಬದಲಾವಣೆಯಾಗಿದೆ.
ಸರ್ಕಾರದ ನಿರ್ಧಾರ, ಪಕ್ಷದ ನಿರ್ಧಾರಗಳನ್ನು ನಾವು ಬಹಿರಂಗವಾಗಿ ಚರ್ಚೆ ಮಾಡೋಕಾಗೋಲ್ಲಾ ,ಇದರಿಂದ ವಿಜಯನಗರ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗೋಲ್ಲಾ, ಕೊಪ್ಪಳ ಪಕ್ಕದ ಜಿಲ್ಲೆ, ತುಂಗಭದ್ರ ಕಾಲುವೆ ದಾಟಿದ್ರೆ ಆ ಕಡೆ ಕೊಪ್ಪಳ ಜಿಲ್ಲೆ ಇದೆ. ಈ ಕಡೆ ವಿಜಯನಗರ ಜಿಲ್ಲೆ ಇದೆ.ನಮಗೆ ಕೊಪ್ಪಳ ಜಿಲ್ಲೆ ದೂರಾನೂ ಅಲ್ಲಾ,ಇದರಿಂದ ಏನೂ ವ್ಯತ್ಯಾಸಾನೂ ಇಲ್ಲ ಎಂದು ಮಾತನಾಡಿದರು, ಅದಲ್ಲದೆ ಹೊಸಪೇಟೆಯ ಪ್ರತಿಷ್ಠಿತ ಸರ್ಕಲ್ ಗೆ ಪುನೀತ್ ರಾಜ್‍ಕುಮಾರ್ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ, ಈಗಾಗಲೇ ಪುನೀತ್ ರಾಜ್‍ಕುಮಾರ್ ಪುತ್ಥಳಿ ತರಲಾಗಿದೆ, ಆ ಪುತ್ಥಳಿಯನ್ನು ಯಾವ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಅಂತ ಅಭಿಮಾನಿಗಳ ಜೊತೆ ಚರ್ಚೆಮಾಡಿ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗುತ್ತದೆ, ಕಳೆದ ವರ್ಷ ಇದೇ ಗಣರಾಜ್ಯೋತ್ಸವ ದಿನ ವಿಜಯನಗರ ಜಿಲ್ಲೆ ಆಗುತ್ತದೆ ಅಂತ ಹೇಳಿದ್ದೆ,ಪಂಪಾ ವಿರೂಪಾಕ್ಷನ ಆಶೀರ್ವಾದಿಂದ ಜಿಲ್ಲೆ ಘೋಷಣೆ ಆಗಿದೆ,
ವಿಜಯನಗರ ಜಿಲ್ಲೆ ಘೋಷಣೆ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ನಾವು ಇಂದು ನೆನೆಯಲೇ ಬೇಕು,ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸದಾ ಬೆನ್ನೆಲುಬಾಗಿ ನಿಂತಿರೋ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅದಲ್ಲದೆ ಹೊಸಪೇಟೆ ನಗರದಲ್ಲಿ ಅಚ್ಚುಕಟ್ಟಾಗಿ ಕೆಲಸಮಾಡುತ್ತಿರುವ ಪೊಲೀಸ್ ಇಲಾಖೆಯನ್ನ ಹಾಗೂ ನಗರವನ್ನ ಸ್ವಚ್ಚವಾಗಿಟ್ಟಿರುವ ನಗರಸಭೆಯ ಪೌರಕಾರ್ಮಿರನ್ನ ಕೂಡ ಸಚಿವ ಆನಂದ್ ಸಿಂಗ್ ಹೊಗಳಿದರು.ನಂತರ ಅಲ್ಲಿಂದ ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಲು ತೆರಳಿದರು.
ಶಿಷ್ಟಾಚಾರ ಉಲ್ಲಂಘನೆ ವಿಚಾರ, ವಿಜಯನಗರ ಎಸ್ಪಿ ಸ್ಪಷ್ಟನೆ ನೀಡಿದರು,
ಇಂದು ಬೆಳಗ್ಗೆ ಹೊಸಪೇಟೆ ನಗರದ ಪುನಿತ್ ರಾಜಕುಮಾರ್ ವೃತ್ತದಲ್ಲಿ ನಡೆದ ದ್ವಜಾರೋಹಣ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆಯಾ ಎಂಬ ವಿಚಾರಕ್ಕೆ ಸಂಭಂದಿಸಿದಂತೆ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕೆ. ಅವರು ನಮ್ಮ ಹಂಪಿ ಮಿರರ್ ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರತಿಯೊಂದು ತಾಲೂಕಲ್ಲಿ ಶಾಸಕರು ದ್ವಜಾರೋಹಣ ನೆರವೇರಿಸುತ್ತಾರೆ, ಆ ಸಂದರ್ಭದಲ್ಲಿ ನಮ್ಮ ಪೊಲೀಸ್ ಇಲಾಖೆ ಅಲ್ಲಿನ ಶಾಸಕರಿಗೆ ಗಾಡಾಫ್ ಹಾನರ್ ಸಲ್ಲಿಸುತ್ತದೆ, ಅದೇರೀತಿಯಾಗಿ ಆನಂದ್ ಸಿಂಗ್ ಅವರು ಕೂಡ ವಿಜಯನಗರ ವಿಧಾನಸಭ ಕ್ಷೇತ್ರದ ಶಾಸಕರು ಮತ್ತು ಸಚಿವರು, ಹಾಗಾಗಿ ಪುನಿತ್ ರಾಜಕುಮಾರ್ ವೃತ್ತದಲ್ಲಿ ನಡೆದ ದ್ವಜಾರೋಹಣ ಸಂದರ್ಭದಲ್ಲಿ
ಅವರಿಗೆ ಗಾಡಾಪ್ ಹಾನರ್ ನೀಡಿ ಗೌರವಿಸಲಾಗಿದೆ. ಇನ್ನು ಅಲ್ಲಿ ದ್ವಜಾರೋಹಣ ನೆರವೇರಿಸಿರುವುದು ಹೊಸಪೇಟೆ ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷರು, ಆನಂದ್ ಸಿಂಗ್ ಅವರು ಹೊಸಪೇಟೆ ನಗರಸಭೆಯ ಅಧ್ಯಕ್ಷೆ ಉಪಾಧ್ಯಕ್ಷರಿಗೆ ಗೌರವ ವ್ಯಕ್ತಪಡಿಸಿ ದ್ವಜಾರೋಹಣ ನೆರವೇರಿಸಿಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ, ಅದರಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರುವುದು ಎಲ್ಲಿಯೂ ಕಾಣುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವರದಿ..ಸುಬಾನಿ ಪಿಂಜಾರ. ವಿಜಯನಗರ.