ಹಾವೇರಿ ಜಿಲ್ಲೆ…. ಪೂಜೆ ಸಲ್ಲಿಸುವ ಸಂಭಂದ ಅರ್ಚಕರು ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ಇತಿಹಾಸ ಪ್ರಸಿದ್ದ ದೇವರಗುಡ್ಡದ ಮಾಲತೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಡೆದಿದೆ,ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಈ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಗೂರುಜಿ ಹಾಗೂ ದೇವಸ್ಥಾನದ ಪರಿಚಾರಕರಾಗಿರುವ ಶಿವಪ್ಪ ಉಪ್ಪಾರ, ಮೃತ್ಯುಂಜಯ ನಡುವೆ ತೀವ್ರವಾಗಿ ಮಾತಿನ ಚಕಮಕಿ ನಡೆದು, ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿ ಜಗಳವಾಡಿಕೊಂಡಿದ್ದಾರೆ.
ಬೆಳ್ಳಂಬೆಳಗ್ಗೆ ದೇವರ ಮೊದಲ ಪೂಜೆಗಾಗಿ ತೆರಳಿದ ಸಂದರ್ಭದ ವೇಳೆಯಲ್ಲಿ ಈ ಘಟನೆ ನಡೆದಿದ್ದು ದೇಸ್ಥಾನದಲ್ಲಿದ್ದ ಮಹಿಳೆಯರು ಅರ್ಚಕರ ಜಗಳ ತಡೆಯಲು ಮುಂದಾಗಿದ್ದಾರೆ, ಈ ದೃಶ್ಯ ಸಿಸಿ ಟಿವಿಯ ಕ್ಯಾಮರದಲ್ಲಿ ಸೆರೆಯಾಗಿದೆ.
ಘಟನೆಯ ಸಂಭಂದ ರಾಣೆಬೇನ್ನೂರು ಗ್ರಾಮೀಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತಿದ್ದಾರೆ.
ಇನ್ನು ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕಿಗಾಗಿ ತಲೆದೂರಿರುವ ವಿವಾದ ನಿನ್ನೆ ಮೊನ್ನೆಯದಲ್ಲಿ ಹಲವು ವರ್ಷಗಳಿಂದ ಮುಂದುವರೆದುಕೊಂಡು ಬಂದಿದ್ದು, ಇದೀಗ ಸಿ.ಸಿ.ಟಿ.ವಿ.ಕ್ಯಾಮರ ಮೂಲಕ ಸತ್ಯ ಬಯಲಾಗಿದೆ. ದೇವಸ್ಥಾನದ ಗರ್ಭದ ಗುಡಿಯಲ್ಲೇ ಈ ರೀತಿಯಾಗಿ ಬಡಿದಾಡಿಕೊಂಡಿರುವುದು ಮಾಲತೇಶ್ವರನ ಭಕ್ತ ಸಮೂಹಕ್ಕೆ ತೀರ್ವ ಬೇಸರ ಉಂಟಾಗಿದೆ.
ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಷ್ಟ್ರ, ಆಂದ್ರಪ್ರದೇಶ, ತೆಲಾಂಗಣ ರಾಜ್ಯಗಳಲ್ಲಿ ಅಪಾರ ಸಂಖೆಯ ಭಕ್ತ ಸಮೂಹವನ್ನ ಹೊಂದಿರುವ ಈ ದೇವಸ್ಥಾನದಲ್ಲಿ ಈ ರೀತಿಯಾಗಿ ನಡೆಯಬಾರದು ಎನ್ನುವ ಅಭಿಪ್ರಾಯವನ್ನ ಭಕ್ತರು ವ್ಯಕ್ತಪಡಿಸಿದ್ದಾರೆ.
ವರದಿ..
ಸುಬಾನಿ ಪಿಂಜಾರ. ವಿಜಯನಗರ.