ಪ್ರತಿಯೊಂದು ದೇವಸ್ಥಾನ ನಿರ್ಮಾಣದ ಹಿಂದೆಯೂ ಒಂದೊಂದು ಇತಿಹಾಸ ಮತ್ತು ಪವಾಡಗಳನ್ನ ನಾವು ನೀವು ಕಾಣುತ್ತೇವೆ, ಅಂತದ್ದೆ ಒಂದು ಶಿವನ ದೇವಾಲಯ ಇಲ್ಲಿ ಕೂಡ ಇದೆ. ಈ ದೇವಸ್ಥಾನದ ಹಿನ್ನೆಲೆ ಇತಿಹಾಸ ಮತ್ತು ಪವಾಡ ಇಂದಿಗೂ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ.
ಈ ಇಲ್ಲಿನ ಹಿರಿಯರು ಹೇಳುವ ಪ್ರಕಾರ ಈ ಹಿಂದೆ ಈ ದೇವಸ್ಥಾನಕ್ಕೆ ಸುಣ್ಣ ಬಣ್ಣವನ್ನ ಯಾರು ಬಳಿದರು ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲವಂತೆ, ಬೆಳಗಾಗುವಷ್ಟರಲ್ಲಿ ಸಂಪೂರ್ಣ ದೇವಸ್ಥಾನ ಅಲಂಕೃತಗೊಂಡು ಮುಂದೆ ನಡೆಯುವ ಜಾತ್ರೆಯ ಕಾರ್ಯಕ್ರಮಕ್ಕೆ ಈ ದೇವಸ್ಥಾನ ಸೃಂಗಾರ ಗೊಂಡಿರುತಿತ್ತು ಎಂದು ಹೇಳುತ್ತಾರೆ ಇಲ್ಲಿನ ಜನ ಸಾಮಾನ್ಯರು.
ಆದರೆ ಈಗ ಆ ರೀತಿಯಾಗಿ ಸಂಪೂರ್ಣ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿಯುವ ಪವಾಡ ನಡೆಯುವುದಿಲ್ಲ, ಬದಲಾಗಿ ದೇವಸ್ಥಾನದ ಮೇಲ್ಬಾಗದ ಒಂದು ಬಾಗಕ್ಕೆ ಸುಣ್ಣವನ್ನ ರಾತ್ರೊ ರಾತ್ರಿ ಹಚ್ಚಲಾಗಿರುತ್ತೆ, ಆದರೆ ಯಾರು ಹಚ್ಚಿರುತ್ತಾರೆ ಎಂದು ಇದುವರೆಗೆ ಯಾರಿಗೂ ಗೊತ್ತಾಗಿಲ್ಲ, ಸುಣ್ಣ ಬಳಿದ ಬಾಗವನ್ನ ನೋಡಿಕೊಂಡೇ ಮುಂದಿನ ಜಾತ್ರೆಯ ಕಾರ್ಯಕ್ರಮವನ್ನ ಇಲ್ಲಿ ಹಮ್ಮಿಕೊಳ್ಳಲಾಗುತ್ತೆ, ಅದು ಇಲ್ಲನ ಪದ್ದತಿ.
ಅಂದಹಾಗೆ ಇಂತದ್ದೊಂದು ವಿಷೇಶವಾದ ದೇವಾಲಯ ಕಾಣಸಿಗುವುದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೊರ ವಲಯದಲ್ಲಿ, ಹೌದು ಕಾಲ ಕಾಲಾಂತರದಿಂದಲೂ ಇಲ್ಲಿರುವ ಈ ದೇವಸ್ಥಾನಕ್ಕೆ ಇರುವ ಹೆಸರೇ ಕಾಲ ಕಾಲೇಶ್ವರ ದೇವಸ್ಥಾನ ಎಂದು.
ಈ ದೇವಸ್ಥಾನದಲ್ಲಿ ನಡೆಯುವ ಪವಾಡ ಮತ್ತು ಇತಿಹಾಸ ಎಷ್ಟು ಅಚ್ಚರಿ ಮೂಡಿಸುತ್ತದೆಯೂ ಇಲ್ಲಿಗೆ ಬೇಟಿ ಕೊಡುವ ಭಕ್ತರ ಮನಸಿಗೆ ಅಷ್ಟೆ ಮುದ ನೀಡುತ್ತದೆ ಈ ದೇವಾಲಯ ಮತ್ತು ಇಲ್ಲಿರುವ ಪರಿಸರ.
ಶಿಲಾರಾಶಿಯ ಗುಹೆಯೊಳಗೆ ನಿರ್ಮಾಣವಾಗಿರುವ ಈ ದೇವಾಲಯಕ್ಕೆ ಪ್ರವೇಶಮಾಡಿದರೆ ಮನಸಿಗೆ ಒಂದು ರೀತಿಯ ನೆಮ್ಮದಿ ಸಿಗುವುದಂತೂ ಸತ್ಯ.
ದಕ್ಷಿಣ ಕಾಶಿ ಎನಿಸಿಕೊಂಡಿರುವ ಈ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಏಳು ಗುಹೆಗಳಿವೆ ಎಂದು ಹೇಳಲಾಗುತ್ತೆ, ಇರುವ ಪ್ರತಿಯೊಂದು ಗುಹೆಯಲ್ಲಿ ನೀರಿನ ಹೊಂಡಗಳು ಇವೆ ಎಂದು ಕೂಡ ಹೇಳಲಾಗುತ್ತೆ,ಆದರೆ ಇತ್ತೀಚೆಗೆ ಈ ಗುಹೆಯೊಳಗೆ ಯಾರಿಗೂ ಪ್ರವೇಶ ನೀಡದೆ ಬಂದ್ ಮಾಡಲಾಗಿದೆ.
ಗುಹೆಯ ಬಾಗಿಲ ಪಕ್ಕದಲ್ಲೇ ಶಿವಲಿಂಗವಿದ್ದು ತ್ರಿಕಾಲವೂ ಪೂಜೆ ಪುನಸ್ಕಾರಗಳು ಇಲ್ಲಿ ನಡೆಯುತ್ತದೆ, ಘೊರ್ಪಡೆ ಮನೆತನ ಈ ದೇವಾಲಯದ ನಿಋವಹಣೆಯ ಹೊಣೆ ಹೊತ್ತಿದ್ದು ಪ್ರತಿ ಯೊಗಾದಿ ಹಬ್ಬದ ಮುಂಚಿತವಾಗಿ ಇಲ್ಲಿ ಜಾತ್ರೆ ನಡೆಯುತ್ತೆ. ಜಾತ್ರೆಯ ಮುಂಚಿತವಾಗಿ ದೇವಸ್ಥಾನದ ಮೇಲ್ಬಾಗದಲ್ಲಿ ಸುಣ್ಣ ಬಣ್ಣಗಳ ನಿಶಾನೆ ಮೂಡುತ್ತದೆ.
ಆಗ ಜಾತ್ರೆಮಾಡಯವ ತೀರ್ಮಾನವನ್ನ ಇಲ್ಲಿನ ಧರ್ಮದರ್ಶಿಗಳು ಮಾಡುತ್ತಾರೆ,ಆದರೆ ದೇವಾಲಯದ ಮೇಲ್ವಾಗದಲ್ಲಿ ಆ ಸುಣ್ಣ ಬಣ್ಣ ಬಳಿದ ಗುರುತು ಕಾಣ ಸಿಗುತ್ತದೆ, ಆ ಗುರುತನ್ನ ನೋಡಿಯೇ ಇಲ್ಲಿನ ಭಕ್ತರು ಜಾತ್ರೆ ಮಾಡಲು ಮುಂದಾಗುತ್ತಾರೆ, ಇದು ಪ್ರತಿ ವರ್ಷದ ವಾಡಿಕೆ. ಆದರೆ ದೇವಸ್ಥಾನದ ಮೇಲ್ಬಾಗದಲ್ಲಿ ಸುಣ್ಣ ಬಣ್ಣ ಬಳಿದವರು ಯಾರೆಂದು ಇದುವರೆಗೆ ಯಾರಿಗೂ ಗೊತ್ತಾಗಿಲ್ಲ, ಹೀಗೆ ಸುಣ್ಣ ಬಣ್ಣ ಬಳಿಯುವುದು ಸಾಕ್ಷಾತ್ ಕಾಲಕಾಲೇಶ್ವರನೇ ಎಂದು ಇಲ್ಲಿನ ಭಕ್ತರು ನಂಬಿದ್ದಾರೆ.
ಇನ್ನು ಗಜಾಸುರ ಎಂಬ ರಾಕ್ಷಸನು ಇಲ್ಲಿರುವ ಪರ್ವತ ಶ್ರೇಣಿಯಲ್ಲಿ ಅಡಗಿಕೊಂಡು ಪಕ್ಕದ ಗಜೇಂದ್ರಗಡ ಗ್ರಾಮದ ಜನಗಳನ್ನ ಹಿಂಸಿಸುತಿದ್ದ ಆ ಸಂದರ್ಭದಲ್ಲಿ ಶಿವ ಇಲ್ಲಿಗೆ ಬೇಟಿ ನೀಡಿ ಗಜಾಸುರನ ಸಂಹಾರ ಮಾಡಿ ಇಲ್ಲಿ ನೆಲಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ,
ಸಂಹಾರ ಗೊಂಡ ಅಸುರನ ಹೆಸರೇ ಇಲ್ಲಿನ ಗ್ರಾಮಕ್ಕೆ ನಾಮಕರಣಗೊಂಡು ಗಜೇಂದ್ರಗಡ ಎಂಬ ಹೆಸರು ಪ್ರಚಲಿತಕ್ಕೆ ಬಂತು ಎಂದು ಹೇಳಲಾಗುತ್ತದೆ. ಅಸುರ ಸಂಹಾರ ಗೊಂಡನಂತರ ಶಿವ ಇಲ್ಲಿನ ಪರ್ವತ ಶ್ರೇಣಿಯಲ್ಲಿ ನೆಲಸಿದ ಮೇಲೆ, ಇದು ಒಂದು ಪವಿತ್ರ ಧಾರ್ಮಿಕ ಸ್ಥಳವಾಗಿ ಕಾಲಕಾಲಾಂತರದಿಂದ ಉಳಿದುಕೊಂಡ ಹಿನ್ನೆಲೆಯಲ್ಲಿ ಈ ದೇವಸ್ಥಾವನ್ನ ಕಾಲಕಾಲೇಶ್ವರ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದಿದೆ ಎನ್ನಲಾಗಿದೆ.
ವರದಿ….ಸುಬಾನಿ ಪಿಂಜಾರ.ವಿಜಯನಗರ.