ಬಳ್ಳಾರಿ…ಹಿಜಾಬ್ ಕೇಸರಿ ಶಾಲಿನ ವಿವಾದ ತಲೆ ಎತ್ತಿದ ಮೇಲೆ ಇಡೀ ಬಳ್ಳಾರಿ ನಗರ ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವ ಇಲ್ಲಿನ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತನ್ನೆಲ್ಲ ಪ್ರಯತ್ನಗಳನ್ನ ಮಾಡುತ್ತಲೇ ಇದೆ. ಆದರೆ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಕೇಸರಿ ಶಾಲಿನ ಒಂದು ಪಡೆ ಇಂದು ನಗರದ ಪ್ರಮುಖ ಬೀದಿಯಲ್ಲಿ ಖಡ್ಗ ಹಿಡಿದು ಬೈಕ್ ರ್ಯಾಲಿ ಮಾಡುವ ಮೂಲಕ ನಗರದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದಾರೆ.
ಹೌದು ಚತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಇಂದು ಕೆಲವು ಯುವಕರ ಗುಂಪು ನಗರದಲ್ಲಿ ಬೈಕ್ ರ್ಯಾಲಿ ಮಾಡಿದ್ದಾರೆ, ಇದರಲ್ಲಿ ಇಬ್ಬರು ಯುವಕರು ಬೈಕ್ ಮೇಲೆ ಕುಳಿತು ಕತ್ತಿ ಹಿಡಿದು ಪ್ರದರ್ಶನ ಮಾಡುತ್ತ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗತ್ತ ಸಂಚಾರ ನಡೆಸಿದ್ದಾರೆ. ಅದರಲ್ಲೂ ಹಿಜಾಬ್ ವಿವಾದಿತ ಕೇಂದ್ರವಾಗಿರುವ ಬಳ್ಳಾರಿಯ ಸರಳಾದೇವಿ ಕಾಲೇಜು ಮುಂಭಾಗದಲ್ಲಿ ಇಂತ್ತದ್ದೊಂದು ದೃಷ್ಯಗಳು ಕಂಡುಬಂದಿದ್ದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
20 ಕ್ಕೂ ಹೆಚ್ಚು ಬೈಕ್ ನಲ್ಲಿ ಬಂದ ಕೇಸರಿ ಧ್ವಜ ಹಿಡಿದ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗುತ್ತ ಕೇಸರಿ ದ್ವಜ ಹಿಡಿದು ಬೀಸುತ್ತಾ ಸಾಗಿದ್ದಾರೆ, ಇನ್ನು ಸ್ಥಳದಲ್ಲು ಸಾಂತಿ ಸುವ್ಯವಸ್ಥೆ ಕಾಪಾಡಲೆಂದು ಕಳೆದ ಒಂದು ವಾರದಿಂದ ಪೊಲೀಸ್ ವಾಹನ ಇಲ್ಲೇ ಬೀಡು ಬಿಟ್ಟಿದೆ. ಹೀಗಿದ್ದರೂ ಯಾವುದೇ ಅಂಜಿಕೆ ಭಯ ಇಲ್ಲದೆ ಖಡ್ಗ ಪ್ರದರ್ಶನಮಾಡಿ ಅಲ್ಲಿಂದು ತೆರಳಿದ್ದಾರೆ.
ಇನ್ನು ಈ ಸಂಭಂದ ಇಲ್ಲಿನ ಕೇಸರಿ ಪಡೆಯಲ್ಲಿದ್ದ ಓರ್ವ ವ್ಯಕ್ತಿಯನ್ನ ಪ್ರಶ್ನೆಮಾಡಿದರೆ, ಶಿವಾಜಿ ಜಯಂತಿ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಬೈಕ್ ರ್ಯಾಲಿ ಮಾಡುತಿದ್ದೇವೆ. ಬಳ್ಳಾರಿ ನಗರ ಮಾತ್ರಲ್ಲದೆ ಕೆಲವು ಹಳ್ಳಿಗಳಲ್ಲಿ ಕೂಡ ಈರೀತಿಯ ಬೈಕ್ ರ್ಯಾಲಿಮಾಡಿದ್ದೇವೆ ಎನ್ನುತ್ತಾರೆ. ಇನ್ನು ಸದ್ಯಕ್ಕೆ ಪ್ರಕರಣವನ್ನ ಸೂಕ್ಷ್ಮವಾಗಿ ಗಮನಿಸಿರುವ ಇಲ್ಲಿನ ಪೊಲೀಸ್ ಇಲಾಖೆ,ಇವರ ವಿರುದ್ದ ಯಾವ ಕಾನೂನು ಕ್ರಮ ಜರುಗಿಸುತ್ತದೆ ಕಾದು ನೋಡಬೇಕಿದೆ.