ಮೈಸೂರು..ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತನ್ನ ಕೇಳಿದ್ದೀರಿ. ದಿನವಿಡೀ ಜಗಳ ಮಾಡಿದ ಗಂಡ ಹೆಂಡತಿ ರಾತ್ರಿ ಆದ ಕೂಡಲೆ ಜೊತೆ ಜೊತೆಗೆ ಊಟಮಾಡಿ ಮಲಗಿ ಬೆಳಗಾಗುತಿದ್ದಂತೆ ಮೇಲೆದ್ದು ಮತ್ತೆ ಎಂದಿನಂತೆ ತಮ್ಮ ಬದುಕಿನ ಬಂಡಿಯ ನೊಗಕ್ಕೆ ಹೆಗಲು ಕೊಟ್ಟು ಸಂಸಾರ ಸಾಗಿಸುತ್ತಾರೆ. ಆದರೆ ಕೆಲವು ಸಂಸಾರಗಳು ಗಂಡ ಹೆಂಡತಿಯ ಜಿದ್ದಿನ ಜಗಳಕ್ಕೆ ವಿಚ್ಚೇದನ ಆಗಿ ಚಿದ್ರ ಚಿದ್ರವಾಗಿ ಕೌಟುಂಬಿಕ ಜೀವನ ಅಂತ್ಯವಾಗಿರುವ ಪ್ರಕರಣಗಳನ್ನ ಎಷ್ಟೊ ಕಂಡಿದ್ದೇವೆ ಕೇಳಿದ್ದೇವೆ.
ಆದರೆ ಇಲ್ಲೊಂದು ಅಪರೂಪದಲ್ಲಿ ಅಪರೂಪ ಪ್ರಕರಣ ಬೆಳಕಿಗೆ ಬಂದಿದೆ. ಗಂಡ ಹೆಂಡತಿ ಒಬ್ಬರಿಗೊಬ್ಬರು ಬಡಿದಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿ, ನ್ಯಾಯಾಲಯಕ್ಕೆ ಹೋಗಿ ಪರಸ್ಪರ ಒಪ್ಪಿ ವಿಚ್ಚೇದನ ಪಡೆದ ಮೇಲೂ ಮರು ಮದುವೆಗೆ ದಂಪತಿಗಳು ಮುಂದಾಗಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ನ್ಯಾಯಾದೀಶರ ಯಶಸ್ವಿ ಮನವಲಿಕೆಯ ಪರಿಶ್ರಮ. ಹೌದು ಇಂತದ್ದೊಂದು ಪ್ರಕರಣ ನಡೆದಿರುವುದು ಮೈಸೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ. ಲೋಕ ಅದಾಲತ್ ಹಿನ್ನೆಲೆಯಲ್ಲಿ ಇಂದು ಮೈಸೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ರಾಜಿಸಂದಾನ ಪ್ರಕೃಯೆ ನಡೆದಿತ್ತು. ಇಲ್ಲಿನ ಪ್ರನ್ಸಿಪಲ್ ಜೆಡ್ಜ್ ಎನ್.ಎಸ್.ಪಾಟೀಲ್ ನೇತೃತ್ವದಲ್ಲಿ ಒಟ್ಟು 88 ಪ್ರಕರಣಗಳ ರಾಜಿಸಂದಾನ ಕಾರ್ಯ ನಡೆದಿದೆ.
ಅದರಲ್ಲಿ 22 ಜೋಡಿಗಳು ಸಂಸಾರ ಜೀವನ ಬೇಡವೇ ಬೇಡ ಎಂದು ನ್ಯಾಯಾದೀಶರ ಮುಂದೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಇಲ್ಲಿನ ನ್ಯಾಯಾದೀಶರು ವಿಚ್ಚೇದನ ನೀಡುವ ಮುನ್ನ ಸಂಸಾರದ ಗುಟ್ಟನ್ನ ತಿಳಿ ಹೇಳಿ ಸಂಸಾರದಲ್ಲಿ ಒಂದಾಗಿ ಬಾಳುವಂತೆ ಮನವಲಿಕೆ ಮಾಡಿ ಈ 22ಜೋಡಿಗಳನ್ನ ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ 22 ಪ್ರಕರಣಗಳಲ್ಲಿ ಒಂದು ಪ್ರಕರಣವಂತೂ ತುಂಬಾ ಅಪರೂಪವಾದಂತದ್ದು, ಮೈಸೂರು ನಗರದ ಮಾರ ಮತ್ತು ಗೀತ ಎಂಬ ದಂಪತಿಗಳು 1989ರಲ್ಲಿ ವಿವಾಹವಾಗಿದ್ರು. ಆದರೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ 2018ರಲ್ಲಿ ಪರಸ್ಪರ ಇಬ್ಬರೂ ಒಪ್ಪಿ ವಿವಾಹ ವಿಚ್ಚೇದನಕ್ಕ ಅರ್ಜಿ ಸಲ್ಲಿಸಿ ನ್ಯಾಯಾಲಯದಿಂದ ವಿಚ್ಚೇದನ ಪಡೆದಿದ್ರು. ಇಲ್ಲಿನ ಎರಡನೇ ಕೌಟುಂಬಿಕ ನ್ಯಾಯಾಲಯದ ನ್ಯಾಯಾದೀಶರಾದ ವಿರುಪಾಕ್ಷಯ್ಯ ಪಂಚಾಕ್ಷರಯ್ಯ ಹಿರೇಮಠ ಅವರು 2019ರಲ್ಲಿ ಪತಿ ಮಾರ ತನ್ನ ವಿಛ್ಚೇದಿತ ಪತ್ನಿ ಗೀತಾಳಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಆದೇಶ ಮಾಡುತ್ತಾರೆ. ಆದರೆ ಮಾರ ಸರಿಯಾಗಿ ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಗೀತ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿ ಗಂಡನಿಂದ ಜೀವನಾಂಶದ ಹಣ ಪಡೆಯಲು ಮುಂದಾಗುತ್ತಾಳೆ.
ಈ ಸಂದರ್ಭದಲ್ಲಿ ಇಲ್ಲಿನ ನ್ಯಾಯಾದೀಶರಾದ ವಿ.ಪಿ.ಹಿರೇಮಠ ಅವರು ಗಂಡ ಹೆಂಡತಿಯನ್ನ ಮತ್ತೆ ಒಂದುಗೂಡಿಸಲು ನಾನಾ ಪ್ರಯತ್ನಗಳನ್ನ ನಿರಂತರವಾಗಿ ಮಾಡುತ್ತಲೇ ಬರುತ್ತಾರೆ. ಕೊನೆಯದಾಗಿ ಇಂದು ಲೊಕ ಆದಾಲತ್ ಹಿನ್ನೆಲೆಯಲ್ಲಿ ಇಬ್ಬರು ಜೋಡಿಗಳ ಮನವಲಿಸಿ ಮರು ಜೀವನ ನಡೆಸಲು ಸೂಚಿಸಿದ್ದಾರೆ.ಹಾಗಾಗಿ ಮತ್ತೊಮ್ಮೆ ಕಾನೂನ ಬದ್ದವಾಗಿ ವಿವಾಹ ನೊಂದಣಿ ಅಧಿಕಾರಿಗಳ ಮುಂದೆ ನಾಳೆ ಸೂಮವಾರ ಮರು ಮದುವೆ ಆಗಲಿದ್ದಾರೆ. ಮಾರ ಮತ್ತು ಗೀತ. ಒಟ್ಟಿನಲ್ಲಿ ನಾ ಮೇಲು ನಾ ಮೇಲು ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಜೀವನದ ಅಮೂಲ್ಯ ಕ್ಷಣಗಳನ್ನ ಕಳೆದುಕೊಂಡ ದಂಪತಿಗಳಿಗೆ ತಮ್ಮ ತಪ್ಪಿನ ಅರಿವು ಮೂಡಿಸುವಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯದ ನ್ಯಾಯಾದೀಶರು ಯಶಸ್ವಿಯಾಗಿದ್ದಾರೆ.
ಇದು ಕಳೆದ ಐದು ತಿಂಗಳ ಹಿಂದಿನ ಸಂಗ್ರಹ ವರದಿ
ವರದಿ..ಸುಬಾನಿ ಪಿಂಜಾರ ವಿಜಯನಗರ.