ವಿಜಯನಗರ (ಹೊಸಪೇಟೆ).. ಮುಂಬರುವ ವಿಧಾನಸಭೆ ಚುನಾವಣೆ ಎದುರಿಸಲು ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರದಲ್ಲಿ ವಿವಿದ ರಾಜಕೀಯ ಪಕ್ಷಗಳು ಭರದ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿವೆ. ಆನಂದ್ ಸಿಂಗ್ ವಶದಲ್ಲಿರುವ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ಪಡೆಯಲು ಕೈ ಪಕ್ಷಹಲವು ಕಸರತ್ತುಗಳನ್ನ ಮಾಡುತ್ತಲೇ ಇದ್ದು, ಇದೀಗ ಕೈ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.
ಈ ಎಲ್ಲಾ ಆಕಾಂಕ್ಷಿಗಳು ತಮ್ಮ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ತಮ್ಮ ಬೆಂಬಲಿಗರ ಬಣ ಒಂದೆಡೆ ಸೇರುಸಲು ಕೆಲವರು ಪ್ರತ್ಯೇಕ ಕಛೇರಿಗಳನ್ನ ತೆರೆದಿದ್ದಾರೆ.ಇದು ವರೆಗೆ ಹೊಸಪೇಟೆ ನಗರದಲ್ಲಿ ಕಛೇರಿಯನ್ನ ಹೊಂದಿದ್ದ ಮಾಜಿ ಶಾಸಕ ಶಿರಾಜ್ ಶೇಖ್, ಇದೀಗ ತಮ್ಮ ಕಛೇರಿಯನ್ನ ನಗರದ ಹೊರ ವಲಯದಲ್ಲಿರುವ ಕೊಂಡನಾಯಕನಹಳ್ಳಿಗೆ ಸ್ಥಳಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನೂತನ ಕಛೇರಿ ಉದ್ಘಾಟನೆ ಸಹ ಆಗಲಿದೆ.
ಅಂದಹಾಗೆ ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಈ ಕೆಳಗಿನಂತಿದ್ದು, ಕೈ ಪಕ್ಷದ ಟಿಕೆಟ್ ಯಾರ ಕೈಗೆ ಎಟಕುತ್ತೊ ಕಾದು ನೋಡಬೇಕು.
◆ ಸಿರಾಜ್ ಶೇಕ್
ಅಲ್ಪಸಂಖ್ಯಾತ (ಮುಸ್ಲಿಂ)
◆ ರಾಜಶೇಖರ ಹಿಟ್ನಾಳ
(ಓ.ಬಿ.ಸಿ.ಕುರುಬರು)
◆ವೆಂಕಟರಾವ್ ವೈ ಘೋರ್ಪಡೆ
(ಮರಾಠ ಕ್ಷತ್ರೀಯ)
◆ ಹೆಚ್.ಎನ್.ಎಫ್ ಇಮಾನ್ ನಿಯಾಜಿ
ಅಲ್ಪಸಂಖ್ಯಾತ (ಮುಸ್ಲಿಂ)
◆ ಹೆಚ್.ಆರ್.ಗವಿಯಪ್ಪ
(ಓ.ಬಿ.ಸಿ ಈಡಿಗರು)
◆ದೀಪಕ್ ಕುಮಾರ್ ಸಿಂಗ್
(ಕ್ಷತ್ರಿಯ ರಜಪೂತ್)
◆ ಕುರಿ ಶಿವಮೂರ್ತಿ
(ಓ.ಬಿ.ಸಿ.ಕುರುಬರು)
◆ ಎಲ್.ಸಿದ್ದನಗೌಡ
(ಓ.ಬಿ.ಸಿ.ಕುರುಬರು)
◆ ವಿನಾಯಕ ಶೆಟ್ಟರ್
(ಲಿಂಗಾಯತ)
◆ ಕೆ.ಎಸ್.ಎಲ್. ಸ್ವಾಮಿ
(ಓ.ಬಿ.ಸಿ.ಕುರುಬರು)
◆ ಸೈಯದ್ ಮೋಹಮ್ಮದ್
ಅಲ್ಪಸಂಖ್ಯಾತ (ಮುಸ್ಲಿಂ)