ವಿಜಯನಗರ..ಹೊಸಪೇಟೆ ಬಳಿಯ ಗಾಳೆಮ್ಮನ ಗುಡಿ ಗ್ರಾಮದ ಪಕ್ಕದ ಗುಂಡಾ ಅರಣ್ಯದಲ್ಲಿ ಮೇಯಿಸುತಿದ್ದ ಮೇಕೆಗಳನ್ನ ನಿನ್ನೆ ಯಾರೋ ಮೂರು ಜನ ಖದೀಮರು ಕದ್ದು ಪರಾರಿಯಾಗುತಿದ್ದರು.
ಮೇಕೆ ಮಾಲೀಕ ಸಿ.ಎ.ನಾಗರಾಜ ಕೂಡಲೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ಪೊನ್ ಮಾಡಿ ದೂರು ಸಲ್ಲಿಸುತಿದ್ದಂತೆ ಬೆನ್ನಟ್ಟಿದ ಪೊಲೀಸರು ಕದ್ದ ಮಾಲು ಸಮೇತ ಖದೀಮರನ್ನ ಹಿಡಿದು ಹೆಡೆಮುರಿ ಕಟ್ಟಿದ್ದಾರೆ.
ಬಂದಿತರಿಂದ 86ಸಾವಿರ ಮೌಲ್ಯದ ಎಂಟು ಮೇಕೆಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ಕೆ.ಎ.35 ಎ.1745 ನಂಬರಿನ ಒಂದು ಪ್ಯಾಸೆಂಜರ್ ಆಟೋ ವಶಕ್ಕೆ ಪಡೆದು.ಘಟನೆಗೆ ಸಂಭಂದಿಸಿದಂತೆ ತಳವಾರ ಸ್ವಾಮಿ ಎಂಬ ಒಬ್ಬ ಆರೋಪಿಯನ್ನ ಬಂದಿಸಿದ್ದಾರೆ.ಬಂದಿತನನ್ನ ಇಂದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಶಂಕರನಾಯ್ಕ್ ಮತ್ತು ಹುಲಗಪ್ಪ ಎನ್ನುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಕೂಡ್ಲಿಗಿ ಡಿವೈಎಸ್ಪಿ.ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯ ತಂಡದಲ್ಲಿ. ಮರಿಯಮ್ಮನಹಳ್ಳಿ ಪಿ.ಎಸ್.ಐ. ಶ್ರೀಮತಿ ಮೀನಾಕ್ಷಿ ,ಹಾಗೂ ಹನುಮಂತಪ್ಪ ತಳವಾರ.ಸಿಬ್ಬಂದಿಗಳಾದ ಜಿ.ಹೆಗ್ಗಪ್ಪ.ಗುರುಬಸವರಾಜ.
ಪ್ರವೀಣ್ ಕುಮಾರ್ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು. ತಮ್ಮ ಶಿಬ್ಬಂದಿಗಳ ಈ ಮಿಂಚಿನ ಕಾರ್ಯಾಚರಣೆಗೆ ಮೆಚ್ಚಿದ ವಿಜಯನಗರ ಎಸ್ಪಿ.ಡಾಕ್ಟರ್ ಅರುಣ್ ಕೆ. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ. ಸುಬಾನಿ ಪಿಂಜಾರ ವಿಜಯನಗರ.