ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಬಳಿಯಲ್ಲಿ ಕಳೆದ ಹಲವು ದಿನಗಳಿಂದ ಮೊಸಳೆಯೊಂದು ಪ್ರತ್ತ್ಯಕ್ಷವಾಗಿತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಪಟ್ಟಣದ ಜೋಗಿ ಕಾಲುವೆ ದಡದಲ್ಲಿ ಪ್ರತಿದಿನ ಮದ್ಯಾಹ್ನದ ಸುಮಾರಿಗೆ ಕಾಣಿಸಿಕೊಳ್ಳುವ ಈ ಮೊಸಳೆ ಬಿಸಿಲಿಗೆ ಮೈಯೊಡ್ಡಿ ಮಲಗುತ್ತದೆ. ಜನರ ಸುಳಿವು ಕಾಣಿಸಿಕೊಳ್ಳುತಿದ್ದಂತೆ ನೀರಿಗೆ ಇಳಿಯುವ ಮೊಸಳೆ ಮತ್ತೆ ಮಾರನೆ ದಿನ ಮದ್ಯಾಹ್ನವೇ ದಡಕ್ಕೆ ಬಂದು ಮೈಯೊಡ್ಡುತ್ತದೆ.
ಕಳೆದ ಐದಾರು ದಿನಗಳಿಂದ ದಿನ ನಿತ್ತ್ಯದ ಕಾಯದಂತೆ ಕಾಣಿಸಿಕೊಳ್ಳುವ ಮೊಸಳೆ, ಈ ಬಾಗದ ಜನ ಸಾಮಾನ್ಯರ ಆತಂಕ ಹೆಚ್ಚುಮಾಡಿದೆ. ಇನ್ನು ಈ ಕಾಲುವೆ ಇರುವ ಪ್ರದೇಶದ ಕೂಗಳೆತೆಯ ದೂರದಲ್ಲೇ ಕಲ್ಮಠ ಶಾಲೆ ಕೂಡ ಇದ್ದು ಶಾಲಾ ಮಕ್ಕಳಿಗೆ ಏನಾದರು ತೊಂದರೆ ಎದುರಾಗಬಹುದು ಎಂದು ಸ್ಥಳೀಯರು ವೀಡಿಯೊ ಚಿತ್ರೀಕರಣಮಾಡಿ ಜನ ಸಾಮಾನ್ಯರಲ್ಲಿ ಜಾಗೃತಿ ಕೂಡ ಮೂಡಿಸಿದ್ದಾರೆ.
ಇನ್ನು ಅದರಲ್ಲೂ ಬತ್ತದ ಗದ್ದೆಗಳು ಹೆಚ್ಚಿರುವ ಈ ಸ್ಥಳದಲ್ಲಿ ರೈತರ ದನ ಕರುಗಳು ಮೇಯುವುದಕ್ಕೆ ಬರುವುದು ಕೂಡ ಸರ್ವೇ ಸಾಮಾನ್ಯವಾಗಿದ್ದು, ಯಾವುದಕ್ಕೂ ಈ ಬಾಗದ ಜನ ಸಾಮಾನ್ಯರು ಕೊಂಚ ಎಚ್ಚರಿಕೆ ವಹಿಸುವುದು ಸೂಕ್ತ. ಇನ್ನು ಕಂಪ್ಲಿ ಪಟ್ಟಣದ ಪಕ್ಕದಲ್ಲಿ ಹರಿದಿರುವ ತುಂಗಭದ್ರ ನದಿಯ ವಡಲಲ್ಲಿ ಅಪಾರ ಜಲಚರಗಳು ಅಡಕವಾಗಿವೆ. ಅದರಲ್ಲಿ ನೀರುನಾಯಿ ಮತ್ತು ಮೊಸಳೆಗಳು ಪ್ರಮುಖವಾಗಿವೆ. ಆದರೆ ಪಟ್ಟಣದ ಇನ್ನೊಂದು ಬಾಗದಲ್ಲಿ ಕಾಣಿಸಿಕೊಂಡಿರುವ ಈ ಒಂಟಿ ಮೊಸಳೆಯಿಂದ ಅಪಾಯ ಎದುರಾಗಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೂಡಲೆ ಸಂಭಂದ ಪಟ್ಟ ಇಲಾಖೆಗಳು ಇದರ ಬಗ್ಗೆ ಗಮನ ಹರಿಸಿ ಮುಂಜಾಗೃತೆ ಕ್ರಮ ಕೈಗೊಳ್ಳಬೇಕಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.