You are currently viewing ಜೊತೆಗೆ ಎಣ್ಣೆ ಹೊಡೆಯಲು ಕುಳಿತವರೇ ಸ್ಕೆಚ್ಚು ಹಾಕಿ ಕೊಲೆಮಾಡಿದರು.

ಜೊತೆಗೆ ಎಣ್ಣೆ ಹೊಡೆಯಲು ಕುಳಿತವರೇ ಸ್ಕೆಚ್ಚು ಹಾಕಿ ಕೊಲೆಮಾಡಿದರು.

ವಿಜಯನಗರ…ಹಾಡು- ಹಗಲೆ ಯುವಕನ ಎದೆಗೆ ಚೂರಿ ಇರಿದು ಕೊಲೆಮಾಡಿದ ಘಟನೆ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಯಶ್ ಬಾರನಲ್ಲಿ ಇಂದು ಸಂಜೆ ನಡೆದಿದೆ.

ಗಂಗಾಧರ (32) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಬಾರಲ್ಲಿ ನಾಲ್ಕು ಜನ ಪರಿಚಯಸ್ತರೊಂದಿಗೆ ಕುಳಿತು ಎಣ್ಣೆ ಹೊಡೆಯುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಓರ್ವ ವ್ಯಕ್ತಿ ತನ್ನ ಬಳಿ ಇದ್ದ ಚಾಕುವನ್ನ ತೆಗೆದು ಗಂಗಾಧರನ ಎದೆಗೆ ಚುಚ್ಚಿ ಕೊಲೆಮಾಡಲು ಮುಂದಾಗಿದ್ದಾನೆ.

ಸ್ಥಳದಲ್ಲೇ ಇದ್ದ ಬಾರ್ ಸಿಬ್ಬಂದಿಗಳು ಗಲಾಟೆ ನಿಯಂತ್ರಣಮಾಡುವ ಉದ್ದೇಶದಿಂದ ಸೇರಿದ್ದ ನಾಲ್ವರನ್ನ ಬಾರಿಂದ ಹೊರ ಕಳಿಸಿ ಗಲಾಟೆ ನಿಯಂತ್ರಣಕ್ಕೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಗಂಗಾಧರ ನೋಡ ನೋಡುತಿದ್ದಂತೆ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುವುದಕ್ಕೆ ಪ್ರಾರಂಬಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಕೆಲವರು ಗಾಯಾಳುವನ್ನ ಆಟೊದಲ್ಲಿ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲು ಮುಂದಾಗಿದ್ದಾರೆ ಆದರು ಗಂಗಾಧರ ಬದುಕುಳಿಯಲ್ಲಿಲ್ಲ.

ಮೃತ ಗಂಗಾಧರ  ಮೂಲತ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಗೋವಾದ ಕೆಸಿನೊದಲ್ಲಿ ಕೆಲಸಮಾಡುತಿದ್ದರು. ವರ್ಷದಲ್ಲಿ ಎರಡರಿಂದ ಮೂರು ಬಾರಿ ತನ್ನೂರಿಗೆ‌ ಬಂದು ತನ್ನ ತಂದೆ ತಾಯಯನ್ನ ಮಾತನಾಡಿಸಿ ಮರಳುತಿದ್ದರು.

ಅದೇರೀತಿಯಾಗಿ ಕಳೆದ ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದ ಗಂಗಾಧರ ಇಂದು ಮದ್ಯಾಹ್ನ ಹೊಸಪೇಟೆ ನಗರಕ್ಕೆ ಬಂದು ಸ್ನೇಹಿತರೊಂದಿಗೆ ಬಾರಲ್ಲಿ ಎಣ್ಣೆ ಹೊಡೆಯಲು ಕುಳಿತಿದ್ದ, ಈ ಸಂದರ್ಭದಲ್ಲಿ ಬಂದ ಕೆಲವರು ಕೊಲೆಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಇನ್ನು ಮಾಡಿದವರು ಯಾರು ಮತ್ತು ಕೊಲೆಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ, ಈ ಸಂಭಂದ ಪ್ರಕರಣ ದಾಖಲಿಸಿಕೊಂಡಿರುವ ಹೊಸಪೇಟೆ ಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.