ವಿಜಯನಗರ.(ಹೊಸಪೇಟೆ) ಕಳೆದ ವಿಧಾನಸಭ ಚುನಾವಣೆಯಲ್ಲಿ ಕಮಲ ಪಾಳೆಯ ಸೇರಿ ಕೊಂಡಿದ್ದ ಹೆಚ್.ಆರ್.ಗವಿಯಪ್ಪ ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದಾರೆ, ಈ ಸಂಭಂದ ಇಂದಿನಿಂದಲೇ ತಯಾರಿ ನಡೆಸಿರುವ ಗವಿಯಪ್ಪ ನಾಳೆ ಬೆಂಗಳೂರಿನ ಕೆ.ಪಿ.ಸಿ.ಸಿ.ಕಛೇರಿಯಲ್ಲಿ ಡಿ.ಕೆ.ಸಿ.ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆ ಆಗಲಿದ್ದಾರೆ.
ಹಾಗಾಗಿ ಹೊಸಪೇಟೆ ನಗರದಲ್ಲಿ ಭರ್ಜರಿ ತಯಾರಿನಡೆಸಿದ್ದು, ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರದ ಗ್ರಾಮ ಗ್ರಾಮಗಳಿಂದ ಬೆಂಬಗಲಿರನ್ನ ಒಟ್ಟುಗೂಡಿಸಿ ಬೆಂಗಳೂರಿಗೆ ಕರೆದೊಯ್ಯುತಿದ್ದಾರೆ. ಈ ಕಾರಣಕ್ಕೆ ಹೊಸಪೇಟೆ ಮತ್ತು ಗಂಗಾವತಿ ಬಾಗದ ಎರಡು ನೂರು ಐವತ್ತಕ್ಕೂ ಹೆಚ್ಚು ಬಾಡಿಗೆ ವಾಹನಗಳನ್ನ ಬುಕ್ ಮಾಡಿರುವ ಗವಿಯಪ್ಪ ಮತ್ತು ತಂಡ, ಇಂದು ಮದ್ಯಾಹ್ನ ಪ್ರತಿಯೊಂದು ಗ್ರಾಮಗಳ ಬೆಂಬಲಿಗರನ್ನ ಕರೆದುಕೊಂಡು ಇಂದು ರಾತ್ರಿ ಬೆಂಗಳೂರು ಸೇರಲಿದ್ದಾರೆ.
ಅಂದಾಜು ಎರಡು ಸಾವಿರ ಬೆಂಬಲಿಗರನ್ನ ಬೆಂಗಳೂರಿಗೆ ಕರೆದೊಯ್ಯುತ್ತಿರುವ ಗವಿಯಪ್ಪ, ಪಕ್ಷ ಸೇರ್ಪಡೆ ಆಗಿ ಮರಳುವ ಸಂದರ್ಭದಲ್ಲಿ ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಪಕ್ಕಾ ಮಾಡಿಕೊಂಡು ಬರುವ ಸಾಧ್ಯತೆ ಹೆಚ್ವಿದೆ. ಹಾಗಾಗಿ ಸಾವಿರಾರು ಬೆಂಬಲಿಗರನ್ನ ಕರೆದೊಯ್ಯುವ ಕಸರತ್ತಿಗೆ ಗವಿಯಪ್ಪ ಕೈ ಹಾಕಿದ್ದಾರೆ.
ಕಳೆದ ಸಾರ್ವತ್ರಿಕ ವಿಧಾನಸಭ ಚುನಾವಣೆಯ ಪೂರ್ವದಲ್ಲಿ ಆನಂದ್ ಸಿಂಗ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರು. ಈ ಕಾರಣಕ್ಕೆ ಗವಿಯಪ್ಪ ಕೂಡ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆ ಆಗಿ ಚುನಾವಣೆಗೆ ಸ್ಪರ್ಧಿಸಿದ್ದರು, ಆ ಚಯನಾವಣೆಯಲ್ಲಿ ಗವಿಯಪ್ಪ ವಿರುದ್ದ ಆನಂದ್ ಸಿಂಗ್ ಗೆಲುವು ಸಾಧಿಸಿದ್ದ, ಇದಾದ ಬಳಿಕ ಬದಲಾದ ರಾಜಕೀಯ ವಿಧ್ಯಮಾನಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದ ಆನಂದ್ ಸಿಂಗ್ ಮತ್ತು ಹದಿನೇಳು ಜನ ಶಾಸಕರೊಂದಿಗೆ ಸಮ್ಮಿಶ್ರ ಸರ್ಕಾರ ತೊರೆದು ಬಿಜೆಪಿ ಪಕ್ಷವನ್ನ ಮತ್ತೆ ಸೇರ್ಪಡೆ ಆಗಿದ್ದರು.
ಈ ಸಂದರ್ಭದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪಕ್ಷದಿಂದ ಆನಂದ್ ಸಿಂಗ್ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದ ಘೋರ್ಪಡೆ ಯವರನ್ನ ಸೋಲಿಸಿ ಬಿಜೆಪಿಯಲ್ಲಿ ತಮ್ಮ ನೆಲೆಯನ್ನ ಕಟ್ಟಿಕೊಳಿಸಿಕೊಂಡರು, ಇದಾದ ಬಳಿಕ ಹೆಚ್.ಆರ್.ಗವಿಯಪ್ಪ ರಾಜಕೀಯದಲ್ಲಿ ಮೂಲೆಗುಂಪಾದರು ಎನ್ನುವ ಮಾತುಗಳು ಎಲ್ಲೆಡೆ ಹರಡಿದ್ದವು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜಯನಗರ ವಿಧಾನಸಭ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಪಡುತಿದ್ದಾರೆ.
ಗವಿಯಪ್ಪ ಕಾಂಗ್ರೆಸ್ ಪಕ್ಷ ತೊರೆದ ಮೇಲೆ ವಿಜಯನಗರ ವಿಧಾನಸಭ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಸಾರಥಿಗಳು ಇಲ್ಲದಂತಾಗಿತ್ತು, ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆ ಕಾರ್ಯವನ್ನ ನಿಭಾಯಿಸಿದ್ದು, ಹೆಚ್.ಎನ್.ಎಫ್. ಇಮಾಮ್ ನಿಯಾಜಿ, ಕಳೆದ ವಿಧಾನಸಭ ಚುನಾವಣೆಯಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಹವಣಿಸುತ್ತಿರುವ ಇಮಾಮ್ ನಿಯಾಜಿಯ ಕನಸು ಮತ್ತೆ ನುಚ್ಚು ನೂರಾಗುವ ಸಾಧ್ಯತೆ ಇದೆ. ಅದಾದ ಬಳಿಕ ಕಳೆದ ಒಂದು ವರೆ ವರ್ಷದಿಂದ ಮಾಜಿ ಶಾಸಕ ಶಿರಾಜ್ ಶೇಕ್ ಕೂಡ ವಿಜಯನಗರ ವಿಧಾನಸಭ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಕಾರ್ಯಕ್ಕೆ ಕೈ ಹಾಕಿ ಜನರ ಮದ್ಯ ತಮ್ಮ ಕಾರ್ಯ ಪ್ರಾರಂಬಿಸಿದ್ದಾರೆ,
ಅದರ ಜೊತೆ ಕೊಪ್ಪಳ ಜಿಲ್ಲೆಯ ರಾಘವೇಂದ್ರ ಹಿಟ್ನಾಳ್ ಅವರಯ ಕೂಡ ವಿಜಯನಗರ ಜಿಲ್ಲೆಯಲ್ಲಿ ನಾನು ಕೂಡ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎನ್ನುವಂತೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾರೆ, ಈ ಮೂರ ಜನರ ಮದ್ಯೆ ಕಳೆದ ವಿಧಾನಸಭ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಘೋರ್ಪಡೆಯವರು ಹಾಗಾಗಿ ಕ್ಷೇತ್ರದಲ್ಲಿ ಕಾಣಿಸಿಕೊಂಡು ನಾನು ಕೂಡ ಸ್ಪರ್ದೆಯ ಆಕಾಂಕ್ಷಿಯೇ ಎನ್ನುವಂತೆ ಗೋಚರಿಸುತಿದ್ದಾರೆ, ಈ ನಾಲ್ಕು ಜನ ಆಕಾಂಕ್ಷಿಗಳ ಮದ್ಯೆ ಮತ್ತೆ ಗವಿಯಪ್ಪ ಪಕ್ಷಕ್ಕೆ ಮರಳಿ ಈ ನಾಲ್ವರ ಕನಸಿಗೆ ತಣ್ಣೀರು ಎರಚುವ ಲಕ್ಷಣಗಳು ಕಾಣುತ್ತಿವೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ವಿಜಯನಗರ ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ಮೂರ ಬಾಗಿಲು ಎನ್ನುವ ಗಾದೆ ಮಾತು ನೆನಪಾಗುತ್ತದೆ.
ವರದಿ. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.