ವಿಜಯನಗರ…ಹೊಸಪೇಟೆ ತಹಸಿಲ್ದಾರ್ ವಿಶ್ವನಾಥ ಅವರನ್ನ ವರ್ಗಾಣೆಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಳ್ಳಾರಿಯ ಗ್ರೇಡ್ ಒನ್ ತಹಸಿಲ್ದಾರ್ ರೆಹನ್ ಪಾಷ ಅವರ ಜಾಗಕ್ಕೆ ವರ್ಗಾವಣೆಮಾಡಿ, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ.ಎಂ.ಎಸ್.ನಿನ್ನೆ ಆದೇಶ ಹೊರಡಿಸಿದ್ದಾರೆ. ಆದರೆ ವಿಶ್ವನಾಥ ಅವರಿಂದ ತೆರವಾಗಿರುವ ಹೊಸಪೇಟೆ ತಹಸಿಲ್ದಾರ್ ಜಾಗಕ್ಕೆ ಯಾವೊಬ್ಬ ಅಧಿಕಾರಿ ನಿಯೋಜನೆ ಆಗಿಲ್ಲ. ಕಳೆದ ಐದುವರೆ ವರ್ಷಗಳ ದೀರ್ಘಾವಧಿಯಲ್ಲಿ ಹೊಸಪೇಟೆ ತಹಸಿಲ್ದಾರ್ ಆಗಿ ಸೇವೆ ಸಲ್ಲಿಸಿದ ಏಕೈಕ ಅಧಿಕಾರಿ ಎಂದ್ರೆ ಅದು ವಿಶ್ವನಾಥ ಅವರು ಮಾತ್ರ.
ಕುರುಗೋಡು ತಹಸಿಲ್ದಾರರಾಗಿ ನಂತರ ಹೂವಿನಹಡಗಲಿ ತಹಸಿಲ್ದಾರರಾಗಿ, ಕಾರ್ಯನಿರ್ವಹಿಸಿ ಅದಾದ ಬಳಿಕ ಹೊಸಪೇಟೆ ತಹಸಿಲ್ದಾರರಾಗಿ ವರ್ಗಾವಣೆ ಗೊಂಡು ಬಂದು ಹೊಸಪೇಟೆಯಲ್ಲಿ ಕಾರ್ಯ ಮುಂದುವರೆಸಿದ್ದರು, ಈ ಮದ್ಯೆ ಚುನಾಣೆಯ ಹಿನ್ನೆಲೆ ಹಲವು ಸ್ಥಳಗಳಿಗೆ ವರ್ಗಾವಣೆಗೊಂಡು ಕಾರ್ಯ ನಿರ್ವಹಿಸಿದ್ದ ವಿಶ್ವನಾಥ ಅವರು ಇದೀಗ ಬಳ್ಳಾರಿಯ ಗ್ರೇಡ್ ಒನ್ ತಹಸಿಲ್ದಾರರಾಗಿ ವರ್ಗಾವಣೆಗೊಂಡಿದ್ದಾರೆ.
ಸಮರ್ಪಕವಾಗಿ ನಿಭಾಹಿಸಿದ ಜವಾಬ್ದಾರಿಗಳು.
ಕಂದಾಯ ಇಲಾಖೆ ಎಂದರೆ ಅಕ್ರಮಗಳ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತವೆ,ಲಂಚಗುಳಿತನ, ಅಕ್ರಮ ಮರಳುಗಾರಿಕೆ, ಆಸ್ತಿ ಖಾತೆ ಬದಲಾವಣೆಗೆ ಲಂಚದ ಹಣಕ್ಕೆ ಬೇಡಿಕೆ. ಸುಳ್ಳು ಜಾತಿ ಆದಾಯ ಪ್ರಮಾಣಪತ್ರ ನೀಡುವುದು ಸೇರಿದಂತೆ ಹಲವು ಆರೋಪಗಳು ತಹಸಿಲ್ದಾರ ಕಛೇರಿಯಲ್ಲಿ ಕೇಳಿ ಬರುವುದು ಇತ್ತೀಚೆಗೆ ಹೆಚ್ಚಾಗಿದೆ. ಆದರೆ ಇಂತಾ ಯಾವೊಂದು ಸುಳಿಯಲ್ಲೂ ವಿಶ್ವನಾಥ ಸಿಲುಕದೆ ಇರುವುದು ಮೆಚ್ಚುವಂತದ್ದು, ರಾಜಕೀಯ ನಾಯಕರ ಒತ್ತಡ, ಮೇಲಾಧಿಕಾರಿಗಳ ಆದೇಶ ಪಾಲನೆಮಾಡುವುದರ ಜೊತೆಗೆ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ವಿಶ್ವನಾಥ ಕಾರ್ಯನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಕಾರಣದಿಂದಲೇ ಹೊಸಪೇಟೆ ನಗರದಂತ ಸ್ಥಳದಲ್ಲಿ ಕಳೆದ ಐದುವರೆ ವರ್ಷಗಳಿಂದ ತಹಸಿಲ್ದಾರರಾಗಿ ಕೆಲಸವನ್ನ ನಿಭಾಯಿಸಿದ್ದಾರೆ ವಿಶ್ವನಾಥ್. ಇನ್ನು ಹಂಪಿ ಉತ್ಸವ ಬಂತೆಂದ್ರೆ ಅಧಿಕಾರಿಗಳಿಗೆ ಎಲ್ಲಿಲ್ಲದ ಕೆಲಸದ ಒತ್ತಡ, ಅದರ ಜೊತೆಗೆ ಇತ್ತೀಚೆಗೆ ವಿಜಯನಗರ ನೂತನ ಜಿಲ್ಲೆಯ ಕಾರ್ಯ ಪ್ರಾರಂಭ ಆದ ಮೇಲಂತೂ ಇಲ್ಲಿನ ತಹಸಿಲ್ದಾರರಿಗೆ ಎಲ್ಲಿಲ್ಲದ ಒತ್ತಡ ಹೆಚ್ವಿತ್ತು. ಈ ಎಲ್ಲಾ ಕಾರ್ಯಗಳನ್ನ ಸಮರ್ಪಕವಾಗಿ ನಿಭಾಯಿಸಿ ಇದೀಗ ಬಳ್ಳಾರಿ ತಹಸಿಲ್ದಾರರಾಗಿ ವರ್ಗಾವಣೆಗೊಂಡಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.