ವಿಜಯನಗರ…ಡಾಬ ಮಾಲೀಕನನ್ನ ಎಸ್.ಬಿ. ಕಾನ್ಸಟೇಬಲ್ ನಡು ರಸ್ತೆಯಲ್ಲೇ ಹಿಗ್ಗಾ ಮುಗ್ಗ ತಳಿಸಿದ ಪ್ರಕರಣ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದಿದೆ. ಹಿರೇಹಡಗಲಿ ಎಸ್.ಬಿ.ಕಾನ್ಸಟೇಬಲ್ ಕಲ್ಲೇಶ್ ಗೌಡ ಹಲ್ಲೆಮಾಡಿದ ಆರೋಪ ಎದುರಿಸುತಿದ್ದು, ಮೈಲಾರ ಹೊರ ವಲಯದ ಗುತ್ತಲ ಕ್ರಾಸ್ ಬಳಿ ಇರುವ ಹಸಿರು ಮನೆ ಡಾಬ ಮಾಲೀಕ ಗುರುರಾಜ್ ಹಲ್ಲೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ.
ನಿನ್ನೆ ಸಂಜೆ ಸುಮಾರಿಗೆ ಹಸಿರು ಮನೆ ಡಾಬದ ಪಕ್ಕದಲ್ಲಿರುವ ಮತ್ತೊಂದು ಹೊಟೆಲ್ನಲ್ಲಿ ಕುಳಿತ ಪಿ.ಸಿ.ಕಲ್ಲೇಶ ಗೌಡ ಸ್ನೇಹಿತರೊಂದಿಗೆ ಪಾರ್ಟಿ ಮಾಡುತಿದ್ದರಂತೆ, ಅದೇ ಸಂದರ್ಭದಲ್ಲಿ ಹಸಿರು ಮನೆ ಡಾಬ ಮಾಲೀಕ ಆ ಸ್ಥಳಕ್ಕೆ ಹೋಗುತಿದ್ದಂತೆ ಪಿ.ಸಿ.ಕಲ್ಲೇಶ್ ಗೌಡ, ಡಾಬ ಮಾಲೀಕ ಗುರುರಾಜನಿಗೆ ಅವಾಚ್ಚ ಶಬ್ದಗಳಿಂದ ಏಕಾ ಏಕಿ ನಿಂದನೆ ಮಾಡಿದ್ದಾರಂತೆ, ಇದಕ್ಕೆ ಡಾಬ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದ ಮೇಲೆ ನಡು ರಸ್ತೆಯಲ್ಲೇ ಗುರುರಾಜನ ಮೇಲೆ ಹಲ್ಲೆಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ನೊಂದ ವ್ಯೆಕ್ತಿ ಗುರುರಾಜ್ ಅವರ ಪತ್ನಿ ರಾಧಮ್ಮ ಹೂವಿನಹಡಗಲಿ ಸಿ.ಪಿ.ಐ ಕಛೇರಿಗೆ ದೂರು ಸಲ್ಲಿಸಿದ್ದಾರೆ.
ಆದರೆಷ ಮಹಿಳೆ ನೀಡಿದ ದೂರು ಇನ್ನೂ ಎಫ್.ಐ.ಆರ್.ಆಗಿಲ್ಲ, ಕಾರಣ ಹೂವಿನ ಹಡಗಲಿ ಸಿ.ಪಿ.ಐ ಅವರು ಕೆಲಸದ ನಿಮಿತ್ತ ಮಂಗಳೂರು ಪ್ರವಾಸದಲ್ಲಿದ್ದು, ಹರಪನಹಳ್ಳಿ ಸಿ.ಪಿ.ಐ. ಅವರೇ ಹೂವಿನಹಡಗಲಿ ಇನ್ಚಾರ್ಜ್ ನೋಡೊಕೊಳ್ಳುತಿದ್ದಾರೆ, ಹಾಗಾಗಿ ನಾಳೆ ಹೂವಿನಹಡಗಲಿ ಸಿ.ಪಿ.ಐ ಅವರು ಕಛೇರಿಗೆ ಬಂದ ನಂತರ ಪ್ರಕರಣದ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಕಲ್ಲೇಶ್ ಗೌಡ ಮತ್ತು ಗುರುರಾಜ್ ನುಡುವೆ ನಡೆದ ಈ ಗಲಾಟೆಯ ವೀಡಿಯೊ ವೈರಲ್ ಆಗಿ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಅವರಿಗೆ ತಲುಪಿದೆ, ಘಟನೆಯ ಕುರಿತು ತನಿಖೆ ನಡೆಸಿ ವರದಿ ಕೊಡುವಂತೆ ಹಿರೇಹಡಗಲಿ ಪಿ.ಎಸ್.ಐ ಅವರಿಗೆ ಎಸ್ಪಿ ಸೂಚಿಸಿದ್ದಾರೆ.
ಎಸ್ಪಿ ಅರುಣ್ ಕುಮಾರ್ ಹೇಳಿಕೆ..
ಒಂದು ವೇಳೆ ತಪ್ಪು ಯಾರದ್ದೇ ಕಂಡು ಬಂದರು ಅವರ ವಿರುದ್ದ ಕ್ರಮ ಜರುಗಿಸಲಾಗುತ್ತೆ, ಇತ್ತೀಚೆಗೆ ಮೈಲಾರ ಮತ್ತು ಅಕ್ಕಪಕ್ಕದ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಹಿತಿ ಇತ್ತು, ಅದಕ್ಕೆ ಕಡಿವಾಣ ಹಾಕಿ ಎಂದು ಹಿರೇಹಡಗಲಿ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿತ್ತು, ಆದರ ಜೊತೆ ಮದ್ಯ ಮಾರಾಟ ಮಾಡುತಿದ್ದ ಅಂಗಡಿಗಳ ಪಟ್ಟಿಯನ್ನ ಸಹ ಹಿರೇಹಡಗಲಿ ಪೊಲೀಸ್ ಠಾಣೆಗೆ ನೀಡಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸೂಚಿಸಲಾಗಿತ್ತು, ಆದರೆ ಗುರುರಾಜ್ ನಡೆಸುತ್ತಿರುವ ಹಸಿರು ಮನೆ ಡಾಬದ ಹೆಸರು ನಾನು ಕೊಟ್ಟ ಪಟ್ಟಿಯಲ್ಲಿ ಇರಲಿಲ್ಲ. ಹೀಗಿದ್ದರು ಪಿ.ಸಿ. ಕಲ್ಲೇಶ ಗೌಡ ಮತ್ತು ಹಸಿರು ಮನೆ ಡಾಬ ಮಾಲೀಕ ಗುರುರಾಜ್ ನಡುವೆ ಯಾಕೆ ಗಲಾಟೆ ನಡೆದಿದೆ ಎಂದು ತನಿಖೆ ನಡೆಸಲು ಹಿರೇಹಡಗಲಿ ಪಿ.ಎಸ್.ಐ. ಅವರಿಗೆ ಸೂಚಿಸಿದ್ದೇನೆ ಎಂದು ಹಂಪಿ ಮಿರರ್ ಗೆ ಹೇಳಿಕೆ ಕೊಟ್ಟಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.