ವಿಜಯನಗರ…ಬುಟ್ಟಿಯನ್ನ ಹೊತ್ತು ಹಣ್ಣಿನ ವ್ಯಾಪಾರಮಾಡುವ ಮೂಲಕ ಶಾಲೆ ಕಟ್ಟಿಸಿ ಬಡ ಮಕ್ಕಳಿಗೆ ವಿಧ್ಯಾದಾನ ಮಾಡಿದ್ದ ಹರೇಕಾಳ ಹಾಜಬ್ಬ ಇಂದು ವಿಶ್ವ ವಿಖ್ಯಾತ ಹಂಪಿಯ ಪ್ರವಾಸ ಕೈಗೊಂಡಿದ್ದರು, ಹಂಪಿಯ ವಿಜಯ ವಿಠ್ಠಲ ದೇವಸ್ಥಾನ ಸಂಕೀರ್ಣಕ್ಕೆ ಬೇಟಿ ನೀಡಿದ ಹಾಜಬ್ಬ ಅವರು ಕಲ್ಲಿನ ತೇರು, ಸಂಗೀತ ಮಂಟಪ, ಭಜನಾಮಂಟಪ, ವೀಜಕ್ಷಣೆ ಮಾಡಿ ಪೊಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ನಂತರ ಕಮಲ ಮೆಹಲ್, ಕೊನೆಗೆ ವೀರೂಪಾಕ್ಷೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ತಮ್ಮ ಹಂಪಿಯ ಪ್ರವಾಸ ಮುಗಿಸಿದರು. ತಾವೊಬ್ಬ ಪದ್ಮಶ್ರೀ ಪುರಸ್ಕೃತರು ಎನ್ನುವ ಯಾವೊಂದು ಹಮ್ಮು ಬಿಮ್ಮು ಇಲ್ಲದ ಹಾಜಬ್ಬ ಜನ ಸಾಮಾನ್ಯರಂತೆ ಹಂಪಿಯನ್ನ ವೀಕ್ಷಣೆಮಾಡಿದ್ದು ವಿಶೇಷವಾಗಿತ್ತು.ಹಂಪಿಯ ಪ್ರವಾಸಿಮಾರ್ಗದರ್ಶಿ ಕಮಲಾಪುರ ವೀರಣ್ಣ ಹಾಜಬ್ಬ ಅವರಿಗೆ ಹಂಪಿಯ ಪ್ರತಿಯೊಂದು ಸ್ಮಾರಕಗಳ ಕುರಿತು ಮತ್ತು ವಿಜಯನಗರ ಸಾಮ್ರಾಜ್ಯದ ಕುರಿತು ಎಳೆ ಯಳೆಯಾಗಿ ಬಿಡಿಸಿ ಪ್ರಾಮುಖ್ಯತೆಯನ್ನ ತಿಳಿಸಿದರು.
ಇಂದು ಸಂಡೂರಿನ ಖಾಸಗಿ ಶಾಲೆಗೆ ಬೇಟಿ ನೀಡಿದ ಹಾಜಬ್ಬ ಅವರು ಕಾರ್ಯಕ್ರಮ ಮುಗಿಸಿಕೊಂಡು ಸಂಡೂರು ಶಾಸಕ ತುಕಾರಾಂ ಅವರ ನಿವೇಶನಕ್ಕೆ ಬೇಟಿ ನೀಡಿ ನಂತರ ಹಂಪಿಯ ಪ್ರವಾಸ ಕೈಗೊಂಡಿದ್ದರು, ಪ್ರವಾಸ ಮುಗಿಸಿ ಇಂದು ಸಂಜೆ ತಮ್ಮೂರಿಗೆ ಮರಳಿದ್ದಾರೆ ಹಾಜಬ್ಬ ಅವರು. ಅಂದಹಾಗೆ ಇತ್ತೀಚೆಗೆ ಅತ್ತ್ಯೂನ್ನತ ನಾಗರೀಕ ಪ್ರಶಸ್ತಿ ಯಾದ ಪದ್ಮಶ್ರೀ ಪುರಸ್ಕಾರವನ್ಮ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಪಡೆದಿದ್ದ ಹರೇಕಾಳ್ ಹಾಜಬ್ಬ ಅವರು ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಮೂಲೆ ಮೂಲೆಗೂ ಪರಿಚಯವಾಗಿದ್ದರು.
ವೀಡಿಯೊ ವೀಕ್ಷಣೆಗಾಗಿ ಈ ಕೆಳಗಿನ ಲಿಂಕನ್ನ ಒತ್ತಿರಿ.
ವರದಿ..ಸುಬಾನಿ ಪಿಂಜಾರ ವಿಜಯನಗರ.