ವಿಜಯನಗರ (ಹೊಸಪೇಟೆ )ಇತ್ತೀಚೆಗೆ ವಿಶ್ವವಿಖ್ಯಾತ ಹಂಪಿಯಲ್ಲಿ ಜಿ20 ಶೃಂಗಸಭೆ ನಡೆಯಿತು. ಪ್ರಪಂಚದ ಸುಮಾರು 20 ದೇಶಗಳಿಂದ ಅತ್ಯುನ್ನತ ಪ್ರತಿನಿಧಿಗಳು ಹಂಪಿಗೆ ಭೇಟಿ ನೀಡಿ ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿ ಕೊಂಡರು. ಅಲ್ಲದೆ ನಮ್ಮ ದೇಶದ ವಿವಿಧ ಆಯಾಮಗಳ ಕುರಿತು ಚರ್ಚೆಗಳನ್ನು ಕೂಡ ನಡೆಸಿದರು, ಈ ಮೂಲಕ ಭಾರತ ದೇಶ ಅಭಿವೃದ್ಧಿ ಹೊಂದಿದೆ ಎನ್ನುವ ಸಂದೇಶವನ್ನು ಪ್ರಪಂಚಕ್ಕೆ ಸಾರುವ ಪ್ರಯತ್ನ ಇದಾಗಿತ್ತು, ಅಂದಹಾಗೆ ನಾವು ಹೇಳಲು ಹೊರಟಿರುವ ವಿಷಯ ಇದಲ್ಲ.
ಹೌದು ವಿಶ್ವವಿಖ್ಯಾತ ಹಂಪಿಯ ಕೂಗಳತಿ ದೂರದಲ್ಲಿರುವ ಹೊಸಪೇಟೆ ನಗರದ ಇದೆ. ಈ ಹೊಸಪೇಟೆ ನಗರ ಇತ್ತೀಚೆಗೆ ವಿಜಯನಗರ ಜಿಲ್ಲಾ ಕೇಂದ್ರವಾಗಿ ಕೊಡ ಹೊರಹೊಮ್ಮಿದೆ. ಅದಲ್ಲದೆ ಪ್ರಪಂಚದ ಬೇರೆ ಬೇರೆ ದೇಶದಿಂದ ಪ್ರವಾಸಿಗರು ಈ ನಗರಕ್ಕೆ ಬಂದು ಹೋಗುವುದು ಸರ್ವೇ ಸಾಮಾನ್ಯವಾಗಿದೆ, ಕಾರಣ ವಿಶ್ವವಿಖ್ಯಾತ ಹಂಪಿ ಪಕ್ಕದಲ್ಲಿರುವರಿಂದ.
ಅದರಲ್ಲೂ ಗಣಿಗಾರಿಕೆಗೆ ಹೆಸರುವಾಸಿಯಾಗಿರುವ ನಗರ ಕೂಡ ಹೌದು ಈ ಹೊಸಪೇಟೆ ನಗರ. ಹಾಗೆಂದ ಕೂಡಲೇ ಇಲ್ಲಿ ವಾಸವಾಗಿರುವ ಪ್ರತಿಯೊಬ್ಬ ಜನಸಾಮಾನ್ಯರು ಸ್ಥಿತಿವಂತರು ಎನ್ನುವ ಅಪನಂಬಿಕೆ ಹೊರಗಿನ ಜನಗಳಿಗೆ ಇದೆ. ಆದರೆ ವಾಸ್ತವವಾಗಿ ಇಲ್ಲಿ ಇರುವ ಪರಿಸ್ಥಿತಿಯೇ ಬೇರೆ, ಉದಾಹರಣೆಯೆಂದರೆ ನಾವೀಗ ನಿಮಗೆ ತೋರಿಸಲು ಹೊರಟಿರುವ ಈ ದುಸ್ಥಿತಿ.
ಹೌದು ನೀವೀಗ ನೋಡುತ್ತಿರುವ ಈ ಬಡ ಕುಟುಂಬದ ಪರಿಸ್ಥಿತಿ ಎಲ್ಲಿದೆ ಅಂದ್ರೆ, ಮಾಜಿ ಸಚಿವ ಆನಂದ್ ಸಿಂಗ್ ಅವರ ಮನೆಯ ಮುಂಭಾಗದಲ್ಲಿನ ಪರಿಸ್ಥಿತಿ ಇದು. ಬಸಪ್ಪ ಮತ್ತು ಲಕ್ಷ್ಮಿ ಎಂಬ ಈ ಇಬ್ಬರು ದಂಪತಿಗಳು ತಮ್ಮ ಮೂರು ಮಕ್ಕಳೊಂದಿಗೆ ಕಳೆದ ಆರೇಳು ವರ್ಷಗಳಿಂದ ಈ ಸ್ಮಶಾನದಲ್ಲಿ ವಾಸವಾಗಿದ್ದಾರೆ.
ಕಾರಣ ಇವರಿಗೆ ವಾಸಿಸಲು ಒಂದು ಸರಿಯಾದ ಮನೆ ಇಲ್ಲದೆ ಇರುವುದು. ಹೌದು ಮೂಲತ ಹೊಸಪೇಟೆಯ ಚಿತ್ವಾಡಗಿಯವರಾದ ಈ ಬಸಪ್ಪ ಮತ್ತು ಲಕ್ಷ್ಮಿ ದಂಪತಿಗಳು ಕಳೆದ ಆರೇಳು ವರ್ಷಗಳಿಂದ ಈ ಸ್ಮಶಾನದಲ್ಲಿ ವಾಸವಾಗಿದ್ದರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಎಲ್ಲವೂ ಈ ಕುಟುಂಬಕ್ಕೆ ಇದೆ. ಆದರೆ ವಾಸಕ್ಕೆ ಒಂದು ಸೂರಿಲ್ಲ ಇವರಿಗೆ.
ಕಳೆದ ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಾಲಿಡಿದು ಸುಸ್ತಾಗಿರುವ ಈ ಬಡ ಕುಟುಂಬ ಈ ಸ್ಮಶಾನದಲ್ಲಿ ವಾಸವಾಗಿದೆ. ಆದರೆ ಯಾವೊಬ್ಬ ಜನಪ್ರತಿನಿಧಿಗಳು ಆಗಲಿ ಅಥವಾ ಅಧಿಕಾರಿಗಳಾಗಲಿ ಇವರ ಕಷ್ಟಕ್ಕೆ ಸ್ಪಂದಿಸಿಲ್ಲ. ದೇಶವನ್ನ, ರಾಜ್ಯವನ್ನ ಗುಡಿಸಲು ಮುಕ್ತ ಮಾಡುತ್ತೇವೆ ಎಂದು ಹೇಳಿದ ಅದೆಷ್ಟೋ ಭರವಸೆಗಳನ್ನ ನಾವು ನೀವು ಎಲ್ಲರೂ ಕೇಳಿದ್ದೇವೆ. ಆದರೆ ಇಲ್ಲಿರುವ ಈ ಬಡ ಕುಟುಂಬಕ್ಕೆ ಗುಡಿಸಲು ಕಟ್ಟಿಕೊಳ್ಳಲು ಒಂದು ಸರಿಯಾದ ಸ್ಥಳ ಕೂಡ ಇಲ್ಲ. ಜನಪ್ರತಿನಿದಿನಗಳು ಕೊಟ್ಟಿರುವ ಗುಡಿಸಲು ಮುಕ್ತ ದೇಶದ ಭರವಸೆ, ಕೇವಲ ಕಲ್ಪನೆಯಲ್ಲೇ ಉಳಿದಿದೆ ಹೊಸಪೇಟೆ ನಗರದಲ್ಲಿ.
ಮಳೆ,ಚಳಿ,ಗಾಳಿ, ಬಿಸಿಲನ್ನ ಲೆಕ್ಕಿಸದೆ ಬದುಕುತ್ತಿರುವ ಈ ಕುಟುಂಬದ ಸದಸ್ಯರು ಪ್ರತಿದಿನ ಸಾವಿನೊಂದಿಗೆ ಸರಸ ಆಡುತ್ತಿದ್ದಾರೆ. ಕಾರಣ ಇವರು ವಾಸವಾಗಿರುವುದು ಸ್ಮಶಾನದಲ್ಲಿ, ಮುಳ್ಳಿನ ಗಿಡ ಗಂಟಿಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ ವಿಷ ಜಂತುಗಳು ಕೂಡ ಹೆಚ್ಚಾಗಿವೆ. ಇಂತಾ ಪ್ರದೇಶದಲ್ಲಿ ವಾಸವಿರುವ ಈ ಬಡ ಕುಟುಂಬದ ಪರಿಸ್ಥಿತಿ ಯಾರೊಬ್ಬರಿಗೂ ಕಾಣದೆ ಇರುವುದು ದುರಂತದ ವಿಚಾರ. ಇತ್ತೀಚಿಗೆ ಈ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿರುವ ಹೆಚ್. ಆರ್. ಗವಿಯಪ್ಪ ಇತ್ತ ತಿರುಗಿನೋಡಬೇಕು. ಕೂಡಲೇ ಈ ಬಡ ಕುಟುಂಬಕ್ಕೆ ಸೂರು ಕೊಟ್ಟು ಜನರ ಸೇವೆಯೇ ಜನಾರ್ಧನ ಸೇವೆ ಎಂದು ತೋರಿಸಬೇಕು.