ಬಳ್ಳಾರಿ….ಬಳ್ಳಾರಿ ಕೌಲ್ ಬಜಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ನಾಲ್ವರು ಬೈಕ್ ಖದೀಮರನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬಂದಿತರಿಂದ 35ಲಕ್ಷ ಮೌಲ್ಯದ ವಿವಿದ ಕಂಪನಿಯ 35 ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ.
1)ಅಬ್ದುಲ್ ರೆಹಮಾನ್, ಮಿಂಚೇರಿ, ಬಳ್ಳಾರಿ
2)ಶೇಕ್ ಆಮನ್ ಗೋನಿಗೊಂಡ್ಲು ಕರ್ನೂಲ್ ಆಂದ್ರಪ್ರದೇಶ.
3)ಮೊಹಮದ್ ಸುಹೇಲ್ ವಟ್ಟಪ್ಪಗೇರಿ ಬಳ್ಳಾರಿ.
4)ಹೈದಾರ್ ಆಲಿ ಜಾಗೃತಿ ನಗರ ಬಳ್ಳಾರಿ
ಬಂದಿತ ನಾಲ್ವರು ಆರೋಪಿಗಳಾಗಿದ್ದಾರೆ.
ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಬೈಕ್ ಕಳ್ಳತನ ಪ್ರಕರಣವನ್ನ ಕೈಗೆತ್ತಿಕೊಂಡ ಪೊಲೀಸರು ಈ ನಾಲ್ವರು ಆರೋಪಿಗಳನ್ನ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಆದೋನಿ, ರಾಮದುರ್ಗ, ಬಳ್ಳಾರಿ ನಗರದ ವಿವಿದ ಭಾಗಗಳಲ್ಲಿ ಬೈಕ್ ಕಳ್ಳತನ ನಡೆದಿರುವುದು ಈ ಭರ್ಜರಿ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಕಳೆದ ಹಲವು ತಿಂಗಳಿನಿಂದ ಆಂದ್ರಪ್ರದೇಶ ಮತ್ತು ಕರ್ನಾಟಕದ ಪೊಲೀಸರಿಗೆ ತಲೆನೋವಾಗಿದ್ದ ಈ ಖದೀಮರು ಅಂದರ್ ಆಗಿದ್ದಾರೆ,.
ಬಳ್ಳಾರಿಯ ಡಿ.ಎಸ್.ಪಿ ಶೇಖರಪ್ಪ ಹೆಚದ. ಮತ್ತು ಇನ್ಸಪೆಕ್ಟರ್ ಕೆ.ಬಿ.ವಾಸುಕುಮಾರ್ ಪಿ.ಎಸ್.ಐ ಶಿವಕುಮಾರ್ ನಾಯ್ಕ್ ಹಾಗೂ ಅಮಿತಾ ಎ.ಎಸ್.ಐ ಲಾರೆನ್ಸ್ ನೇತೃತ್ವದ ತಂಡದಲ್ಲಿ ಸಿಬ್ಬಂದಿಗಳಾದ ನಾಗರಾಜ್ ಕೆ. ಅನ್ವರ್ ಭಾಷ, ಬಿ.ರಾಮ್ ದಾಸ್,ಕೆ.ಎನ್.ಸೋಮಪ್ಪ, ಬಿ.ಸಿದ್ದೇಶ್, ಶಿವಕುಮಾರ್, ಜಡಿಯಪ್ಪ, ಶ್ರೀಮತಿ ರಾಧ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು.ಬಳ್ಳಾರಿಯ ಎಸ್ಪಿ ಸೈದುಲ್ಲಾ ಅಡಾವತ್ ಎ.ಎಸ್ಪಿ.ಗುರುನಾಥ ವುತ್ತೂರ್ ತಮ್ಮ ಸಿಬ್ಬಂದಿಗಳ ಕಾರ್ಯ ವೈಖರಿಯನ್ನ ಮೆಚ್ಚಿ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದ ಸಿಬ್ಬಂದಿಗಳಿಗೆ ನಗದು ಬಹುಮಾನ ಘೊಷಣೆಮಾಡಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.