ವಿಜಯನಗರ.. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಬಳಿಯಲ್ಲಿ ಇರುವ, ಮಾಜಿ ಸಚಿವ ಮತ್ತು ಹಾಲಿ ಶಾಸಕ ಪಿಟಿ. ಪರಮೇಶ್ವರನಾಯ್ಕ್ ಒಡೆತನದ ಜಮೀನಿನಲ್ಲಿ ಸಂಗ್ರಹಿಸಿಟ್ಟಿ ಎರಡು ಟನ್ ಕಟ್ಟಡ ಕಬ್ಬಿಣದ ಸರಕನ್ನ ಕಳ್ಳತನಮಾಡಿದ್ದ ಖದೀಮರನ್ಮ ಬಂದಿಸುವಲ್ಲಿ ಅರಸಿಕೆರೆ ಪೊಲೀಸರು ಯಸಶ್ವಿಯಾಗಿದ್ದಾರೆ. ಇಂದು ಬೆಳಗ್ಗೆ ಅರಸಿಕೆರೆ ಬಳಿಯ ತೌಡೂರು ಕ್ರಾಸ್ ಬಳಿಯಲ್ಲಿ ಇಬ್ಬರು ಅನುಮಾನಸ್ಪದ ವ್ಯಕ್ತಿಗಳು ಲಾರಿಯ ಹೋಗುತ್ತಿದ್ದಾಗ, ಅವರನ್ನ ತಡೆಯಲು ಅರಸಿಕೆರೆ ಪೊಲೀಸ್ ಠಾಣೆಯ ಪಿ.ಎಸ್.ಐ. ಮುಂದಾದಾಗ ಕಳ್ಳರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಲು ಎತ್ನಿಸಿದ್ದಾರೆ, ಇದೇ ಅನುಮಾನದ ಮೇಲೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಕಳ್ಳತನಮಾಡಿದ್ದನ್ನ ಬಾಯಿ ಬಿಟ್ಟಿರುವ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಹರಿಹರ ತಾಲೂಕಿನ ಗಂಗನರಸಿ ಗ್ರಾಮದ ರೇವಣಸಿದ್ದಪ್ಪ ಮತ್ತು ಅದೇ ಗ್ರಾಮದ ಮತ್ತೊರ್ವ ಆರೋಪಿ ಅಣ್ಣಪ್ಪ ಹೆಚ್.ಎನ್. ಬಂದಿತ ಆರೋಪಿಗಳಾಗಿದ್ದಾರೆ. ಬಂದಿತರಿಂದ ಒಂದು ಲಕ್ಷ 22ಸಾವಿರದ 5 ನೂರು ರೂಪಾಯಿ ಮೌಲ್ಯದ ಎರಡು ಟನ್ ಕಬ್ಬಣ ಮತ್ತು ಕಳ್ಳತನಕ್ಕೆ ಬಳಕೆಮಾಡಿದ್ದ ಒಂದು ಮಜ್ಡಾ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.
ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್ ಮತ್ತು ಸಿ.ಪಿ.ಐ.ನಾಗರಾಜ ಕಮ್ಮಾರ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯ ನೇತೃತ್ವವನ್ನ ಪಿ.ಎಸ್.ಐ. ನಾಗರತ್ನ ವಹಿಸಿಕೊಂಡಿದ್ದು, ಸಿಬ್ಬಂದಿಗಳಾದ ಹಸನ್ ಸಾಬ್. ಕೆ.ಮಹಂತೇಶ್, ರವಿ ದಾದಾಪುರ,ಜಿ ಕೊಟ್ರೇಶ್. ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದು, ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕೆ. ಅವರು ಕಾರ್ಯಾಚರಣೆಯ ತಂಡಕ್ಕೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.