ವಿಜಯನಗರ… ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರಕ್ಕೆ ಶಾಸಕನೂ ಹೌದು ರಾಜ್ಯಕ್ಕೆ ಮುಖ್ಯಮಂತ್ರಿಯೂ ಹೌದು ಎಂದು ಹೇಳುವ ಮೂಲಕ ಸೇರಿದ್ದವರನ್ನ ಬೆರಗುಮಾಡಿದ ಸಚಿವ ಆನಂದ್ ಸಿಂಗ್. ಹೌದು ಹೊಸಪೇಟೆ ತಹಸಿಲ್ದಾರ್ ಕಛೇರಿಯ ಮುಂದೆ ವಾಲ್ಮೀಕಿ ಸಮುದಾಯ ಹಮ್ಮಿಕೊಂಡಿದ್ದ ಎಸ್ಸಿ ಎಷ್ಟಿ ಮೀಸಲಾತಿ ಹೆಚ್ಚಳ ಧರಣಿ ಸತ್ಯಾಗ್ರಹದಲ್ಲಿ ಸಚಿವ ಆನಂದ್ ಸಿಂಗ್ ಮಾತಿನ ಭರದಲ್ಲಿ ಮಾಡಿದ ತಪ್ಪಿದು.
ಹೌದು ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಹೊಸಪೇಟೆ ನಗರದಲ್ಲಿ ರಾಜ್ಯ ಬಿಜೆಪಿ ಕಾರ್ಯಾ ಕಾರಿಣಿ ಸಭೆಯನ್ನ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅದ್ಯಕ್ಷ ಜೆಪಿ ನಡ್ಡಾ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೊಸಪೇಟೆ ನಗರಕ್ಕೆ ಆಗಮಿಸಲಿದ್ದಾರೆ, ಅದರ ಜೊತೆ ರಾಜ್ಯದ ಮೂಲೆ ಮೂಲೆಯಿಂದ ಬಿಜೆಪಿ ಕಾರ್ಯಕರ್ತರು ಶಾಸಕ ಸಚಿವರು ಕೂಡ ಹರಿದು ಬರಲಿದ್ದು, ಹೊಸಪೇಟೆ ನಗರವನ್ನ ಈಗಾಗಲೆ ಮದುವಣಗಿತ್ತಿಯಂತೆ ಸಿಂಗಾರ ಗೊಳಿಸಲಾಗಿದೆ.
ಅಥಿತಿ ಸತ್ಕಾರ್ಯಕ್ಕೆ ಹೊಸಪೇಟೆ ಸಂಪೂರ್ಣ ಸಜ್ಜಾಗಿದ್ದು. ರಸ್ತೆಯ ತಗ್ಗು ಗುಂಡಿಗಳನ್ನ ಮುಚ್ಚಿ ರಸ್ತೆಯ ಇಕ್ಕೆಲಗಳಲ್ಲಿ ಕಮಲ ಕೇಸರಿಯೇ ತುಂಬಿ ತುಳುಕುತ್ತಿದೆ. ಪ್ಲಕ್ಸ್ ಬ್ಯಾನರ್ ಸೇರಿದಂತೆ ಹೊಸಪೇಟೆ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿಯೂ ಹತ್ತರಿಂದ ಹದಿನೈದು ಕಿಲೋಮಿಟರ್ ವರೆಗೆ ಬಿಜೆಪಿಯ ದ್ವಜಗಳು ಹಾರಾಟ ನಡೆಸಿವೆ. ಇಷ್ಟೆಲ್ಲ ಸುಸಜ್ಜಿತವಾಗಿ ಸಿದ್ದಗೊಂಡಿರುವ ಹೊಸಪೇಟೆ ನಗರದಲ್ಲಿ ಎಸ್ಸಿ ಎಷ್ಟಿ. ಮೀಸಲಾತಿ ಹೆಚ್ಚಳ ಹೋರಾಟ ಕೂಡ ಅಷ್ಟೇ ಜೋರಾಗಿ ನಡೆದಿದೆ. ಮೀಸಲಾತಿ ಹೆಚ್ಚಳ ಸಂಭಂದ ಪ್ರಾರಂಭವಾಗಿರುವ ಈ ಹೋರಾಟದಿಂದ ನಾಳೆ ನಡೆಯುವ ರಾಜ್ಯ ಬಿಜೆಪಿ ಕಾರ್ಯ ಕಾರಣಿ ಸಭೆಗೆ ಏನಾದರು ಮುಜುಗರ ಉಂಟಾಗಬಹುದಾ ಎಂಬ ಆತಂಕ ಸಚಿವ ಆನಂದ್ ಸಿಂಗ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಎದುರಾಗಿದೆ.
ಈ ಸಂಭಂದ ಹೋರಾಟಗಾರರ ಮನವಲಿಸಲು ಸಚಿವ ಆನಂದ್ ಸಿಂಗ್ ಮತ್ತು ಶಶಿಕಲಾ ಜೊಲ್ಲೆ ಹೊಸಪೇಟೆ ತಹಸಿಲ್ದಾರ್ ಕಛೇರಿಯ ಮುಂದೆ ನಡೆಯುವ ಧರಣಿ ಸ್ಥಳಕ್ಕೆ ಬೇಟಿ ನೀಡಿ, ನಾಳೆ ಹೊಸಪೇಟೆ ನಗರಕ್ಕೆ ಸಿ.ಎಂ.ಬಸವರಾಜ್ ಬೊಮ್ಮಾಯಿಯವರು ಬೇಟಿ ನೀಡಲಿದ್ದಾರೆ, ಆ ಸಂದರ್ಭದಲ್ಲಿ ನೀವು ಕಪ್ಪು ಬಟ್ಟೆ ಪ್ರದರ್ಶನ ಮಾಡುವುದಾಗಲಿ ಸರ್ಕಾರದ ವಿರುದ್ದ ಘೋಷಣೆ ಕೂಗುವುದಾಗಲಿ ಮಾಡಿ ನಮ್ಮ ಹೊಸಪೇಟೆ ನಗರಕ್ಕೆ ಮತ್ತು ನಮಗೆ ಕೆಟ್ಟ ಹೆಸರು ತರುವಂತ ಕೆಲಸ ಮಾಡಬೇಡಿ, ನಿಮ್ಮ ಬೇಡಿಕೆ ಈಡೇರಿಕೆಗೆ ಏನೆಲ್ಲ ಪ್ರಯತ್ನಮಾಡಬೇಕು ಅದನ್ನ ನಾನು ಪ್ರಾಮಾಣಿಕವಾಗಿಮಾಡುತ್ತೇನೆ, ಸಿ.ಎಂ.ಬಸವರಾಜ ಬೊಮ್ಮಾಯಿಯವರನ್ನ ನಿಮ್ಮ ಧರಣಿ ಸ್ಥಳಕ್ಕೆ ಕರೆತಂದು ನಿಮ್ಮ ಮನವಿಯನ್ನ ಅವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ದಯವಿಟ್ಟು ಯಾರು ಕೂಡ ಈ ಸಂದರ್ಭದಲ್ಲಿ ಕಪ್ಪು ಪಟ್ಟಿ ತೋರಿಸಿ ನಮ್ಮ ನಂಬಿಕೆ ಕಳೆಯಬೇಡಿ ಎಂದು ಧರಣಿ ನಿರತರಿಗೆ ಸಚಿವ ಆನಂದ್ ಸಿಂಗ್ ಮನವರಿಕೆ ಮಾಡಿಕೊಂಡರು.
ನಾನು ಕೊಟ್ಟ ಮಾತನ್ನ ಯಾವತ್ತೂ ಕಳೆದುಕೊಳ್ಳುವುದಿಲ್ಲ ಎನ್ನುವ ಭರವಸೆಯ ನುಡಿಗಳನ್ನ ಆಡುತ್ತ ಮೀಸಲಾತಿ ಸಂಭಂದ ವಾಲ್ಮೀಕಿ ಶ್ರೀಗಳು ಹಮ್ಮಿಕೊಂಡಿರುವ ಧರಣಿಗೆ ನ್ಯಾಯ ಸಿಕ್ಕೇ ಸಿಗುತ್ತೆ ಎಂದು ನಾನು ಇಷ್ಟೆಲ್ಲ ಭರವಸೆಯಿಂದ ಹೇಳುತ್ತೇನೆ ಎಂದ್ರೆ ವಿಜಯನಗರ ವಿಧಾನ ಸಭ ಕ್ಷೇತ್ರದ ಶಾಸಕ ಮಾತ್ರ ಅಲ್ಲ ಈ ರಾಜ್ಯದ ಮುಖ್ಯಮಂತ್ರಿ ಕೂಡ ಹೌದು ಎಂದು ಹೇಳುವ ಮೂಲಕ ತಮ್ಮ ಮಾತನ್ನ ಮುಗಿಸಿದರು, ಆದರೆ ಅವರು ಏನು ಮಾತನಾಡಿದರು ಎನ್ನುವ ಅರಿವಿಲ್ಲದೆ ಅಲ್ಲಿಂದ ಹೊರಟು ಹೋದರು. ಇದನ್ನೆಲ್ಲ ನೋಡಿದರೆ ಸಚಿವ ಆನಂದ್ ಸಿಂಗ್ ಅವರ ಕಣ್ಣು ಮುಖ್ಯಮಂತ್ರಿ ಕುರ್ಚಿಯ ಮೇಲೆ ಈಗಾಗಲೆ ಬಿದ್ದಿದೆಯಾ ಅಥವಾ ಕನಸು ಮನಸಿನಲ್ಲಿ ಮುಖ್ಯಮಂತ್ರಿ ಕುರ್ಚಿಯ ಜಪ ಮಾಡುತಿದ್ದಾರಾ ಎನ್ನುವ ಮುನ್ಸೂಚನೆಗಳು ಗೋಚರಿಸಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.