ವಿಜಯನಗರ( ಹೂವಿನಹಡಗಲಿ)ಸರ್ಕಾರಿ ಬಸ್ ನಲ್ಲಿ ಸೀಮೆಎಣ್ಣೆ ಸಾಗಾಟ ಮಾಡಲು ಯತ್ನಿಸಿದ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ 5,000 ದಂಡ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ ಹೂವಿನ ಹಡಗಲಿ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ವೀರೇಶ್ ಕುಮಾರ್ ಸಿ. ಕೆ. ಸಾಹೇಬರು.
ಹೌದು 2014ರ ಡಿಸೆಂಬರ್ ತಿಂಗಳು 16ನೇ ತಾರೀಖಿನಂದು ಸಂಜೆ 7:00 ಗಂಟೆ ಸುಮಾರಿಗೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕಾಂತೆಬೆನ್ನೂರು ಗ್ರಾಮದ ಶಿವಪ್ಪನವರ ಮಹೇಶಪ್ಪ ತಂದೆ ಕೊಟ್ರುಬಸಪ್ಪ ಎಂಬ ವ್ಯಕ್ತಿಯು ಕೆ ಎ 34 ಎಫ್ 941 ನಂಬರಿನ ಕೆ ಆರ್ ಟಿ ಸಿ ಬಸ್ಸಿನಲ್ಲಿ ಸೀಮೆ ಎಣ್ಣೆ ಸಾಗಾಟ ಮಾಡಲು ಮುಂದಾಗಿದ್ದರು.
ಈ ಸಂದರ್ಭದಲ್ಲಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಅಂಗಡಿ ಕೊಟ್ರಪ್ಪ, ಪ್ರಯಾಣಿಕರ ಬಸ್ಸಿನಲ್ಲಿ ಸೀಮೆ ಎಣ್ಣೆ ಸಾಗಾಟ ಮಾಡಲು ಅವಕಾಶ ಇಲ್ಲ ಎಂದು ವಿರೋಧಿಸಿದ್ದರು, ಇದರಿಂದ ಸಿಟ್ಟಿಗೆದ್ದ ಆರೋಪಿ ಶಿವಪ್ಪನವರ ಮಹೇಶಪ್ಪ, ಡ್ರೈವರ್ ಅಂಗಡಿ ಕೊಟ್ರಪ್ಪ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸೀಮೆಎಣ್ಣೆ ಕ್ಯಾನಿನಿಂದ ತಲೆಗೆ ಹೊಡೆದು ರಕ್ತ ಗಾಯ ಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಡ್ರೈವರ್ ಕೊಟ್ರಪ್ಪ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಹಡಗಲಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಹೂವಿನಹಡಗಲಿಯ ಜೆ.ಎಂ.ಎಫ್. ಸಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಅಜ್ಜಯ್ಯ ಕೆ ಅವರು( ಸರ್ಕಾರದ) ದೂರುದಾರರ ಪರವಾಗಿ ವಾದ ಮಂಡಿಸಿದ್ದರು.
ಪ್ರಕರಣದ ಪರ ಮತ್ತು ವಿರೋಧದ ವಾದ ಆಲಿಸಿದ ನ್ಯಾಯಾಧೀಶರಾದ ವೀರೇಶ್ ಕುಮಾರ್ ಸಿ ಕೆ ಸಾಹೇಬರು, ಐಪಿಸಿ ಸೆಕ್ಷನ್ 353 ಪ್ರಕಾರ ಶಿವಪ್ಪನವರ ಮಹೇಶಪ್ಪ ಈತನಿಗೆ ಎರಡು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 5000 ಜುಲ್ಮಾನೆ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಿದಿದ್ದಲ್ಲಿ ನಾಲ್ಕು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ಪ್ರಕಟಿಸಿದ್ದಾರೆ.
ಮತ್ತು ಐಪಿಸಿ ಸೆಕ್ಷನ್ 332 ಪ್ರಕಾರ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5000 ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟದೆ ಇದ್ದಲ್ಲಿ ಆರು ತಿಂಗಳ ಕಾಲ ಕಠಿಣ ಜೈಲುವಾಸ ವಿಧಿಸಿದ್ದಾರೆ.
ಮತ್ತು ಐಪಿಸಿ ಸೆಕ್ಷನ್ 504 ಪ್ರಕಾರ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5000 ದಂಡ ವಿಧಿಸಿ ತೀರ್ಪು ಹೊರಡಿಸಿದ್ದಾರೆ. ಒಂದು ವೇಳೆ ದಂಡ ಕಟ್ಟದೇ ಇದ್ದಲ್ಲಿ ನಾಲ್ಕು ತಿಂಗಳ ಕಾಲ ಕಠಿಣ ಜೈಲು ಶಿಕ್ಷೆ ವಿಸ್ತರಿಸಿ ತೀರ್ಪು ಹೊರಡಿಸಿದ್ದಾರೆ.
ಮತ್ತು ಐಪಿಸಿ ಸೆಕ್ಷನ್ 506 ಪ್ರಕಾರ ಎರಡು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 5000 ದಂಡ ವಿಧಿಸಿದ್ದಾರೆ, ಒಂದು ವೇಳೆ ದಂಡ ಕಟ್ಟದೇ ಇದ್ದಲ್ಲಿ ನಾಲ್ಕು ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಇದರ ಜೊತೆ ನೊಂದ ವ್ಯಕ್ತಿ ಡ್ರೈವರ್ ಕೊಟ್ರಪ್ಪ ಇವರಿಗೆ 10000 ಪರಿಹಾರ ನೀಡುವಂತೆ ಸಹ ಆದೇಶದಲ್ಲಿ ಸೂಚಿಸಿದ್ದಾರೆ.
ದಿನಾಂಕ 3.2.2023 ರಂದು ತೀರ್ಪು ಹೊರಡಿಸಿರುವ ನ್ಯಾಯಾಧೀಶರು,ಮೇಲಿನ ಈ ಎಲ್ಲಾ ಐಪಿಸಿ ಸೆಕ್ಷನ್ ಪ್ರಕಾರ ಹೊರಡಿಸಿರುವ ಶಿಕ್ಷೆಯನ್ನು ಏಕ ಕಾಲಕ್ಕೆ ಅನುಭವಿಸುವಂತೆ ತೀರ್ಪಿನಲ್ಲಿ ವಿವರಿಸಿದ್ದಾರೆ.
ವರದಿ…ಸುಭಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.