ವಿಜಯನಗರ….ಸಚಿವ ಆನಂದ್ ಸಿಂಗ್ ಅವರ ಕಿರುಕುಳಕ್ಕೆ ಬೇಸತ್ತ ಕುಟುಂಭವೊಂದು ವಿಜಯನಗರ ಎಸ್ಪಿ ಕಛೇರಿಯ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಎತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಹೊಸಪೇಟೆ ನಗರದ ಆರನೆ ವಾರ್ಡ್ ನಿವಾಸಿ ಡಿ.ಪೊಲಪ್ಪ ಕುಟುಂಭ ಆತ್ಮಹತ್ಯೆಗೆ ಎತ್ನಿಸಿದ್ದು, ಸ್ಥಳದಲ್ಲೇ ಇದ್ದ ಪೊಲೀಸರು ನಡೆಯುತಿದ್ದ ಅನಾಹುತವನ್ನ ತಡೆದು ಕುಟುಂಭದ ಸದಸ್ಯರನ್ನ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಎಸ್ಪಿಯವರು ಕಛೇರಿಯಲ್ಲಿ ಇರಲಿಲ್ಲ, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿಕೆ ಕೊಟ್ಟಿದ್ದಾರೆ. ಇನ್ನು ಘಟನೆಯ ಹಿನ್ನೆಲೆ ಕೆದಕುತ್ತಾ ಹೋದರೆ ಆತ್ಮಹತ್ಯೆಗೆ ಎತ್ನಿಸಿದ ಡಿ.ಪೊಲಪ್ಪ ಕುಟುಂಭ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಆರನೆ ವಾರ್ಡಿನ ಸುಣ್ಣದ ಬಟ್ಟೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ವಾಸವಾಗಿದೆ.
ಈ ಪ್ರದೇಶಕ್ಕೆ ಸಚಿವ ಆನಂದ್ ಸಿಂಗ್ ಬೇಟಿ ನೀಡಿ ನೀವು ಕಟ್ಟಿರುವ ಮನೆ ಅಕ್ರಮವಾಗಿದೆ, ಇದು ಸರ್ಕಾರಿ ಜಾಗ ಆಗಿದೆ, ಹಾಗಾಗಿ ಈ ಜಾವನ್ನ ನಗರಸಭೆ ವಶಕ್ಕೆ ಪಡೆಯಲಾಗುತ್ತೆ, ಇಲ್ಲಿಂದ ಎಲ್ಲರೂ ಜಾಗ ಕಾಲಿ ಮಾಡಿ ಎಂದು ಹೇಳಿದ್ದರಂತೆ, ಈ ಸಂದರ್ಭದಲ್ಲಿ ಕುಟುಂಭದ ಸದಸ್ಯರೆಲ್ಲರೂ ಆನಂದ್ ಸಿಂಗ್ ಅವರಿಗೆ ಮನವಿಮಾಡಿಕೊಂಡು, ನಾವು ಹಲವು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ, ಇದು ಹೇಗೆ ಅಕ್ರಮವಾಗುತ್ತೆ, ನಮ್ಮ ತಂದೆಯ ಕಾಲದಿಂದಲೂ ಈ ಮನೆಯಲ್ಲಿ ವಾಸವಾಗಿರುವ ನಮ್ಮನ್ನ ತೆರವುಗೊಳಿಸಿದರೆ, ನಾವು ಎಲ್ಲಿ ಹೋಗಿ ವಾಸವಾಗಬೇಕು ಎಂದು ಕೇಳಿಕೊಂಡಿದ್ದಾರೆ.
ಆದರೆ ಇದಕ್ಕೆ ಒಪ್ಪದ ಆನಂದ್ ಸಿಂಗ್ ಅವರು, ಅದು ಹೇಗೆ ಹೋರಾಡಿ ಮನೆ ಉಳಿಸಿಕೊಳ್ಳುತ್ತೀಯ ನೋಡೊಣ ಎಂದು ಅಲ್ಲಿಂದ ಹೊರಟು ಹೋಗಿದ್ದರಂತೆ, ಇದರಿಂದ ಬೇಸತ್ತ ಕುಟುಂಬ ಇಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಯವರ ಕಛೇರಿಗೆ ತೆರಳಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಎತ್ನಿಸಿದೆ.
ಇನ್ನು ಈ ಡಿ.ಪೊಲಪ್ಪ ವಾಸವಾಗಿರುವ ಮನೆ ಆರನೇ ವಾರ್ಡ್ ನಲ್ಲಿದ್ದು, ಹೊಸಪೇಟೆ ನಗರಸಭೆ ಸದಸ್ಯ ಖದೀರ್ ಈ ವಾರ್ಡಿನ ಸದಸ್ಯ ಆಗಿದ್ದಾರೆ, ಕಳೆದ ನಗರಸಭೆ ಚುನಾವಣೆಯಲ್ಲಿ ಸಚಿವ ಆನಂದ್ ಸಿಂಗ್ ಅವರನ್ನ ವಿರೋಧ ಕಟ್ಟಿಕೊಂಡು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ವಿರುದ್ದ ಜಯಗಳಿಸಿದ್ದ ಖದೀರ್, ಆನಂದ್ ಸಿಂಗ್ ಅವರು ಅಕ್ರಮವಾಗಿ ಭವ್ಯ ಬಂಗಲೆ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿ ಕೆಲವು ದಾಖಲೆಗಳನ್ನ ಬಿಡುಗಡೆಮಾಡಿ ಸಚಿವ ಆನಂದ್ ಸಿಂಗ್ ಅವರ ವಿರುದ್ದ ಹೋರಾಡಿದ್ದರು.
ಇನ್ನು ಸಚಿವ ಆನಂದ್ ಸಿಂಗ್ ವಿರುದ್ದ ಹೋರಾಟ ನಡೆಸಿದ ಖದೀರ್ ಮತ್ತು ಆತ್ಮಹತ್ಯೆಗೆ ಎತ್ನಿಸಿದ ಕುಟುಂಬದ ಮುಖ್ಯಸ್ಥ ಡಿ.ಪೊಲಪ್ಪ ಆತ್ಮೀಯವಾಗಿದ್ದರು, ಅದಲ್ಲದೆ ಡಿ.ಪೊಲಪ್ಪ ಖದೀರ್ ಬೆಂಬಲಕ್ಕೆ ನಿಂತಿದ್ದು ಸಚಿವ ಆನಂದ್ ಸಿಂಗ್ ಅವರ ಕಣ್ಣು ಕೆಂಪಗಾಗಿಸಿದೆ ಎನ್ನಲಾಗಿದೆ. ಈ ಕಾರಣದಿಂದ ಡಿ.ಪೊಲಪ್ಪ ಮನೆ ಅಕ್ರಮವಾಗಿ ನಿರ್ಮಾಣಮಾಡಿದ್ದಾರೆ ಎಂದು ಇಂದು ಅವರ ಮನೆಗೆ ತೆರಳಿ ಧಮ್ಕಿ ಕೊಟ್ಟಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಇರುವ ಮಾಹಿತಿ ಇಷ್ಟು, ಇನ್ನುಷ್ಟು ಮಾಹಿತಿ ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.
ವರದಿ….ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.