ವಿಜಯನಗರ….ಹೌದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು, ಮಹಿಳೆಗೆ ಮರು ಹುಟ್ಟು ನೀಡುವುದಲ್ಲದೆ ಮತ್ತೆರಡು ಜೀವಗಳು ಜಗತ್ತನ್ನ ಕಣ್ಬಿಟ್ಟು ನೋಡಲು ಕಾರಣರಾಗಿದ್ದಾರೆ.
ಹೌದು ತೀರ್ವ ಹೆರಿಗೆ ನೋವಿನಿಂದ ಬಳಲುತಿದ್ದ ಕೊಟಗಿನಹಾಳು ಗ್ರಾಮದ ಶಶಿಕಲಾ ಎಂಬ ಮಹಿಳೆಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆಯ ಅನಿವಾರ್ಯತೆ ಇತ್ತು, ಈ ಸಂದರ್ಭದಲ್ಲಿ ನೆರವಿಗೆ ದಾವಿಸಿದವರೇ ಕಮಲಾಪುರದ 108ಅಂಬುಲೆನ್ಸ ಸಿಬ್ಬಂದಿಗಳು.
ಹೌದು ಕೊಟಗಿನಹಾಳು ಗ್ರಾಮದಿಂದ ಬಳ್ಳಾರಿಗೆ ಮಹಿಳೆಯನ್ನ ಚಿಕಿತ್ಸೆಗಾಗಿ ಕರೆದೊಯ್ಯುವ ಮಾರ್ಗ ಮದ್ಯದಲ್ಲಿ ಹೆರಿಗೆ ನೋವು ಹೆಚ್ಚಾಗಿದೆ, ಈ ಸಂದರ್ಭದಲ್ಲಿ ಎಚ್ಚೆತ್ತ ಪೈಲೆಟ್ ಸುರೇಶ್ ಕೆ. ಮತ್ತು, ಇ.ಎಂ.ಟಿ. ಸುರೇಶ್ ಎಸ್.ಕೆ. ಸುರಕ್ಷಿತವಾಗಿ ಮಹಿಳೆಯ ಹೆರಿಗೆಯನ್ನ ಮಾಡಿಸಿದ್ದಾರೆ.
ಸಹಜ ಹೆರಿಗೆ ಕಷ್ಟ ಸಾಧ್ಯ ಎಂದು ವೈದ್ಯರು ಸೂಚಿಸಿದ್ದರು, ಆದರೆ 108 ಸಿಬ್ಬಂದಿಗಳ ಜಾಣ್ಮೆಯ ಕೆಲಸ ಮೂರು ಜೀವಗಳನ್ನ ಬದುಕುಳಿಸಿದೆ. 26ವರ್ಷದ ಮಹಿಳೆ ಶಶಿಕಲಾ ಅವರು ನಿನ್ನೆ ಸಂಜೆ 6:45ರ ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಬಳಿಕ 7:22ರ ಸುಮಾರಿಗೆ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಗಂಡು ಮತ್ತು ಹೆಣ್ಣು ಮಗುವಿಗೆ ಏಕ ಕಾಲಕ್ಕೆ ಜನ್ಮ ನೀಡಿದ ಬಾಣಂತಿ ತಾಯಿಗೆ ಬೆಟ್ಟದಷ್ಟು ಖುಷಿಯಾಗಿದ್ದರೆ, ಇತ್ತ ಮಹಿಳೆಯ ಸಂಭಂದಿಗಳು 108 ಸಿಬ್ಬಂದಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಬಾಣಂತಿ ಮತ್ತು ಅವಳಿ ಮಕ್ಕಳು ಆರೋಗ್ಯವಾಗಿದ್ದು ಗಾದಿಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಇವರ ಹಾರೈಕೆ ನಡೆಯುತ್ತಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.