You are currently viewing ಮುಸ್ಲಿಂ ದಂಪತಿ ಅಧಿಕಾರಿಗಳಿಂದ ಸರ್ವಧರ್ಮ ಸಾಮೋಹಿಕ ವಿವಾಹ ಆಯೋಜನೆಗೆ ಎಲ್ಲೆಡೆ ಮೆಚ್ಚುಗೆ.

ಮುಸ್ಲಿಂ ದಂಪತಿ ಅಧಿಕಾರಿಗಳಿಂದ ಸರ್ವಧರ್ಮ ಸಾಮೋಹಿಕ ವಿವಾಹ ಆಯೋಜನೆಗೆ ಎಲ್ಲೆಡೆ ಮೆಚ್ಚುಗೆ.

ರಾಯಚೂರು (ಸಿಂಧನೂರು) ಇತೀಚೆಗೆ ರಾಯಚೂರು ಜಿಲ್ಲೆಯ ಸಿಂದನೂರಿನಲ್ಲಿ ಸರ್ವಧರ್ಮದ ಸಾಮೋಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡ ಮುಸ್ಲಿಂ ಅಧಿಕಾರಿ ದಂಪತಿಗಳಿಬ್ಬರು ಈ ಬಾಗದಲ್ಲಿ ಸಾಕಷ್ಟು ಗಮನ ಸೆಳೆಸಿದ್ದಾರೆ. ಹಿರಿಯ ರಾಜಕಾರಣಿ ಸಿ. ಎಂ. ಇಬ್ರಾಹಿಂ ಸೇರಿದಂತೆ ಈ ಭಾಗದ ಹಲವು ರಾಜಕೀಯ ನಾಯಕರು ಈ ಮಾಸ್ ಮ್ಯಾರೇಜಲ್ಲಿ ಭಾಗಿಯಾಗಿ ಈ ಅಧಿಕಾರಿ ದಂಪತಿಗಳ ಸಮಾಜಮುಖಿ ಕಾರ್ಯವನ್ನ ಕೊಂಡಾಡಿದ್ದಾರೆ,

ಅಂದಹಾಗೆ ಕರ್ನಾಟಕ ಸರ್ಕಾರದ ಹೋಮ್ ಡಿಪಾರ್ಟ್ಮೆಂಟ್ ನ ಜಾಯಿಂಟ್ ಸೇಕ್ರೆಟರಿ ಆಗಿರುವ ಮೆಹಬೂಬ್ ಸಾಬ್ ಅವರ ಸಹೋದರ ಸಂದಾನಿ ಮತ್ತು ಶಮಿಮ್ ಅವರ ವಿವಾಹವನ್ನ ಇದೇ ನವೆಂಬರ್ ತಿಂಗಳ 15ನೇ ತಾರೀಕಿನಂದು ಗಂಗಾವತಿ ಪಟ್ಟಣದಲ್ಲಿ ಆಯೋಜಿಸಲಾಗಿತ್ತು.

ಇದಾದ ಬಳಿಕ 18ನೇ ತಾರೀಕಿನಂದು ಸಿಂದನೂರ್ ಪಟ್ಟಣದ ಸಮುದಾಯ ಭವನ ಒಂದರಲ್ಲಿ ಅರತಕ್ಷತೆ (ವಲಿಮಾ) ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಇದೇ ಸಮಾರಂಭದಲ್ಲಿ 14ಜೋಡಿ ಬಡ ಕುಟುಂಭದ ವದು ವರರು ಕೂಡ ಹೊಸ ಜೀವನಕ್ಕೆ ಕಾಲಿಡಲು ಈ ಅಧಿಕಾರಿ ದಂಪತಿಗಳು ಅನುವು ಮಾಡಿಕೊಟ್ಟಿದ್ದಾರೆ.

ಅಂದಹಾಗೆ ಕರ್ನಾಟಕ ಸರ್ಕಾರದ ಹೋಮ್ ಡಿಪಾರ್ಟ್ಮೆಂಟ್ ನ ಜಾಯಿಂಟ್ ಸೇಕ್ರೆಟರಿ ಆಗಿರುವ ಮೆಹಬೂಬ್ ಸಾಬ್ ಅವರು, ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯ ಕಡು ಬಡತನ ಕುಟುಂಭದಲ್ಲಿ ಹುಟ್ಟಿ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ  ಮೂಲಕ  ಉನ್ನತ ವ್ಯಾಸಾಂಗ ಮುಗಿಸಿ ಇದೀಗ ಕರ್ನಾಟಕ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮೆಹಬೂಬ್ ಸಾಬ್ ಮತ್ತು ಮೆಹಬೂಬಿ ದಂಪತಿಗಳಿಬ್ಬರು ಬಡತವನ್ನ ಅನುಭವಿಸಿ ಬೆಳೆದವರಾಗಿದ್ದು,  ಇದೀಗ ಬಡವರ ಬಗೆಗಿನ ಕಾಳಜಿಗೆ ಕಾರಣವಾಗಿದೆ, ತಮ್ಮ ವೈಯಕ್ತಿಕ ಹಣವನ್ನ ವ್ಯಯಿಸಿ
ಟೈಲರ್ ಮೌಲಸಾಬ್ ಮೆಣದಾಳ್ ಪೌಡೇಷನ್ ಕಾರಟಗಿ. ಹೆಸರಿನಲ್ಲಿ ಇಂತದೊಂದು ಸಮಾಜ ಮುಖಿ ಕಾರ್ಯವನ್ನ ಪ್ರಾರಂಬಿಸುವ ಮೂಲಕ ಜನರ ಸೇವೆ ಮಾಡಲು ಮುಂದಾಗಿದ್ದಾರೆ.

ಮೆಹಬೂಬ್ ಸಾಬ್ ದಂಪತಿಗಳ ಈ ಸಮಾಜ ಮುಖಿ ಕಾರ್ಯ ಹೀಗೆ  ಮುಂದುವರೆಯಲಿ. ವೃತ್ತಿಯಲ್ಲಿ ಮಾತ್ರವಲ್ಲ, ಸಮಾಜ ಸೇವೆ ಎಂಬ ಪ್ರವೃತ್ತಿಯಲ್ಲಿ ಕೂಡ ಜನರ ಸೇವೆಯನ್ನ  ನಿರಂತರವಾಗಿ ಮಾಡಲಿ ಎಂದು ಆಶೀಸೋಣ.