ವಿಜಯನಗರ.. ಹೌದು ಬಳ್ಳಾರಿಯ ಮಿಲ್ಲಾರ್ ಪೇಟೆಯ ನಿವಾಸಿ ಗೌಸ್ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಆದ ಆಘಾತ ಇದು. ಕಳೆದ ಎರಡು ದಿನಗಳ ಹಿಂದೆ ಬಕ್ರೀದ್ ಹಬ್ಬ ಆಚರಣೆಗೆ ಬಚ್ಚೇ ಬೀವಿಗೆ ಹೊಸ ಬಟ್ಟೆ ದಿನಸಿ ತರುವೆ ಎಂದು ಹೇಳಿ ಮನೆಯಿಂದ ಹೋಗಿದ್ದ ಗೌಸ್ ನಿನ್ನೆ ಹೆಣವಾಗಿದ್ದಾರೆ. ಬಾಬ ಮನೆಗೆ ಬರುವ ಎಂದು ಕಾದು ಕುಳಿತಿದ್ದ ಮಕ್ಕಳು ಮಡಿದಿ ಸಾವಿನ ಸುದ್ದಿ ತಿಳಿದು ದಿಕ್ಕು ಕಾಣದಂತೆ ಕಂಗಾಲಾಗಿದ್ದಾರೆ.
ಹೌದು ನಿನ್ನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಹಳೆಯ ಪೊಲೀಸ್ ಕ್ವಾಟ್ರಸ್ ನಲ್ಲಿ ಸರ್ಜಾ ಕುಸಿದ ಪರಿಣಾಮ ಬಿ.ಗೌಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಳೆ ಕಟ್ಟಡ ಡೆಮಾಲಿಷ್ ಮಾಡುವ ಸಂದರ್ಭದಲ್ಲಿ ಮೇಲ್ಛಾವಣಿ ಏಕಾ ಏಕಿ ಗೌಸ್ ಮೇಲೆ ಕುಸಿದು ಬಿದ್ದ ಪರಿಣಾಮ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬಳ್ಳಾರಿಯ ಮಿಲ್ಲರಪೇಟೆ ನಿವಾಸಿ ಬಿ.ಗೌಸ್ (37) ಸಾವನ್ನಪ್ಪಿದ್ದರೆ, ಜೊತೆಗಿದ್ದ ಮತ್ತೋರ್ವ ಕಾರ್ಮಿಕನ ಕಾಲಿಗೆ ಗಂಬೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಘಟನೆ ನಡೆಯುತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಮೃತದೇಹವನ್ನು ಹೊರ ತೆಗೆದು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಕಟ್ಟಡ ತೆರವು ಗೊಳಿಸಲು ಒಪ್ಪಂದ ಪಡೆದಿರುವ ಗುತ್ತಿಗೆದಾರ ಮತ್ತು ಮೇಸ್ತ್ರಿ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಘಟನೆ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಮೃತನ ಪತ್ನಿ ಶಂಶಾದ್ ಅವರು ಗುತ್ತಿಗೆದಾರ ಮತ್ತು ಮೇಸ್ತ್ರಿ ವಿರುದ್ಧ ಹಲವಾಗಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವುದರ ಜೊತೆ ತಮ್ಮ ಕುಟುಂಭಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಕೂಲಿ ಕೆಲಸಮಾಡಿ ಬದುಕುತಿದ್ದ ಗೌಸ್ ಕುಟುಂಭ ಇದೀಗ ಬೀದಿಗೆ ಬಿದ್ದಿದ್ದು, ಏನು ಅರಿಯದ ಗೌಸ್ ಶಂಶಾದ್ ಮಕ್ಕಳಿಗೆ ಈ ಬಾರಿಯ ಬಕ್ರೀದ್ ಕರಾಳ ನೆನಪಾಗಿ ಉಳಿದಿದೆ. ಈ ಬಡ ಕುಟುಂಭಕ್ಕೆ ಸೂಕ್ತ ಪರಿಹಾರದ ಅನಿವಾರ್ಯತೆ ಇದ್ದು ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಕೆ ಅವರು ಸೂಕ್ತ ಪರಿಹಾರ ಕೊಡಿಸಲು ಮುಂದಾಗಬೇಕಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.