ವಿಜಯನಗರ… ಮುಂಬರುವ ವಿಧಾನಸಭ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ 150 ಸ್ಥಾನಗಳನ್ನ ಪಡೆಯಬೇಕೆನ್ನುವ ಮಹದಾಸೆಯಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯನ್ನ ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಆಯೋಜನೆಮಾಡಲಾಗಿತ್ತು. ಕಾರ್ಯಕ್ರಮ ಮುಗಿದು ಎರಡು ವಾರಗಳ ಬಳಿಕ ಅಂದರೆ ಇಂದು ಹೊಸಪೇಟೆ ನಗರದ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮದ ಅವಲೋಕನ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನ ಆಯೋಜನೆಮಾಡಲಾಗಿತ್ತು.
ಕಳೆದ ಎರಡು ವಾರಗಳ ಹಿಂದೆ ನಡೆದ ಕಾರ್ಯಕಾರಣಿ ಸಭೆಯಲ್ಲಿನ ಅನುಭವವನ್ನ ಹಂಚಿಕೊಳ್ಳುವ ಮೂಲಕ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು. ಅದೇ ರೀತಿ ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಕೂಡ ತಮ್ಮಾನುಭವವನ್ನ ಹಂಚಿಕೊಂಡರು. ಮಾತಿನ ಕೊನೆಗೆ ಮುಂಬರುವ ವಿಧಾನಸಭ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷ 126ಕ್ಕಿಂತ ಹೆಚ್ಚಿನ ಸ್ಥಾನಗಳನ್ನ ಪಡೆಯಲಿದೆ ಎಂದು ಹೇಳಿದರು. 150 ಸ್ಥಾನಗಳನ್ನ ನಮ್ಮ ಬಿಜೆಪಿ ಪಕ್ಷ ಪಡೆಯುತ್ತೆ ಎಂದರೆ ಅದು ಓವರ್ ಕಾನ್ಪಡೆನ್ಸ್ ಎನಿಸುತ್ತೆ, ಅದರ ಬದಲಾಗಿ 126ಕ್ಕಿಂತ ಹೆಚ್ಚಿನ ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸುತ್ತೆ ಎನ್ನುವ ಭರವಸೆ ಇದೆ ಎಂದು ಮಾತನಾಡಿದರು. 126ಸ್ಥಾನ ಎಂದು ಯಾಕೆ ಹೇಳಿದೆ ಎಂದರೆ 1ಮತ್ತು2ಹಾಗೂ6 ಸಂಖೆಯನ್ನ ಒಟ್ಟಿಗೆ ಕೂಡಿಸಿದರೆ ಒಂಭತ್ತು ಒಟ್ಟಾಗುತ್ತೆ, ಎಲ್ಲಾ ಸಂಖೆಗಳಲ್ಲಿ ಒಂಭತ್ತು ದೊಡ್ಡ ಸಂಖೆ ಆಗಿದೆ. ಆ ಕಾರಣಕ್ಕೆ 126 ಸ್ಥಾನ ಗೆಲ್ಲಬಹುದೆಂದು ಹೇಳಿದೆ ಎಂದು ಸಂಖ್ಯಾ ಶಾಸ್ತ್ರವನ್ನ ನೆನಪಿಸಿದರು.ಇನ್ನು ಆನಂದ್ ಸಿಂಗ್ ಮಾತನಾಡುವ ಸಂದರ್ಭದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಸಭೆಯಲ್ಲಿ ಬಾಗಿಯಾಗಿದ್ದರು.
ಕಳೆದ ಹಲವು ಕಾರ್ಯಕ್ರಮಗಳಲ್ಲಿ ಬಿಜೆಪಿಯ ಮುಖಂಡರು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುವ ಸಂಭಂದ ಹೇಳಿಕೆ ಕೊಟ್ಟಿರುವುದು ನಮ್ಮ ಪಕ್ಷ 150ಸ್ಥಾನಗಳನ್ನ ಗೆಲ್ಲುತ್ತೆ ಎಂದು, ಇದೇ 150ರ ಜಪವನ್ನ ಕಳೆ ಎರಡು ವಾರಗಳ ಹಿಂದೆ ನಡೆದ ಕಾರ್ಯಕಾರಣಿ ಸಭೆಯಲ್ಲಿ ಕೂಡ ಮಾಡಲಾಗಿತ್ತು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಪ್ರತಿಯೊಬ್ಬ ರಾಷ್ಟ್ರೀಯ ನಾಯಕರು 150ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ಭರವಸೆಯ ಮಾತುಗಳನ್ನ ಆಡಿದ್ದರು. ಆದರೆ ಕಾರ್ಯಕಾರಣಿ ಸಭೆ ನಡೆದು ಎರಡೇ ವಾರಗಳ ಬಳಿಕ ಅದು ಕಾರ್ಯಕ್ರಮದ ಅಭಿನಂದನಾ ಸಮಾರಂಭದಲ್ಲಿ ಸಚಿವ ಆನಂದ್ ಸಿಂಗ್ 126 ಸ್ಥಾನಗಳನ್ನ ಗೆಲ್ಲುತ್ತೇವೆ ಎನ್ನುವ ಈ ಮಾತು ಚರ್ಚೆಗೆ ಗ್ರಾಸವಾಗಿದೆ.
ಅದಲ್ಲದೆ ಓವರ್ ಕಾನ್ಪಡೆನ್ಸ್ ಇಟ್ಟುಕೊಳ್ಳುವುದು ಬೇಡ ಎನ್ನುವ ಸಚಿವ ಆನಂದ್ ಸಿಂಗ್ ಹೇಳಿಕೆ ಎಲ್ಲೊ ಒಂದು ಕಡೆ ಬಿಜೆಪಿಯ ನಾಯಕರಿಗೆ ಮುಜುಗರ ಉಂಟುಮಾಡಿರುವುದ್ದಂತೂ ಸತ್ಯ. ಇನ್ನು ಈ ಹಿಂದೆ 150 ಶಾಸಕ ಸ್ಥಾನಗಳನ್ನ ಗೆಲ್ಲುತ್ತೇವೆ ಎನ್ನುವ ಬಿಜೆಪಿ ನಾಯಕರ ಆತ್ಮ ವಿಶ್ವಾಸ ಈಗ ಯಾಕೆ ಇಲ್ಲ ಎನ್ನುವ ಪ್ರಶ್ನೆಗೆ ಬಿಜೆಪಿಯ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತದೇ ಉತ್ತರ ನೀಡಿದ್ದಾರೆ, ಈ ವಿಚಾರವಾಗಿ ನಾವು ಆನಂದ್ ಸಿಂಗ್ ಅವರಿಗೆ ಹೇಳಿದ್ದೇವೆ, ಯಾವುದೇ ಕಾರಣಕ್ಕೂ ನಮ್ಮ ಆತ್ಮ ವಿಶ್ವಾಸ ಕುಗ್ಗಿಸಿಕೊಳ್ಳುವ ಮಾತೆ ಇಲ್ಲ, ನಾವು ನೂರೈವತ್ತು ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಒಟ್ಟಿನಲ್ಲಿ 150ಸ್ಥಾನಗಳನ್ನ ಗೆಲ್ಲುತ್ತೇವೆ ಎನ್ನುವ ಬಿಜೆಪಿ ಪಕ್ಷದ ನಾಯಕರ ಆತ್ಮ ವಿಶ್ವಾಸ ಕಡಿಮೆ ಆಗಲು ಕಾರಣ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆ ಕಾರಣ ಎನ್ನಲಾಗಿದೆ. ಅದೇನೆ ಇರಲಿ ಆದರೆ ಸಚಿವ ಆನಂದ್ ಸಿಂಗ್ ನೀಡಿದ ಇಂದಿನ ಈ ಹೇಳಿಕೆ ಎದುರಾಳಿಗಳಿಗೆ ಮತ್ತೊಂದು ಅಸ್ತ್ರವಾಗಿ ಸಿಕ್ಕಿದ್ದಂತೂ ಸತ್ತ್ಯ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.