ವಿಜಯನಗರ..ಇಂದು ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ರಾಜ್ಯ ಹೆದ್ದಾರಿಯ ಟೋಲ್ ಗೇಟಿನ ಮೇಲ್ಛಾವಣೆ ಕುಸಿದು ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಟೋಲ್ ಗೇಟ್ ಕುಸಿದು ಬಿದ್ದ ಪರಿಣಾಮ ಕೆಲವೊತ್ತು ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ. ಅದೃಷ್ಟವಶಾತ್ ಟೊಲ್ ಗೇಟ್ ನಲ್ಲಿ ಕಾರ್ಯನಿರ್ವಹಿಸುತಿದ್ದ 8ಕ್ಕೂ ಹೆಚ್ವು ಸಿಬ್ಬಂದಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸಿಬ್ಬಂದಿಗಳ ಅದೃಷ್ಟ ಸ್ವಲ್ಪ ಕೈಕೊಟ್ಟಿದ್ದರೂ ದೊಡ್ಡ ಅನಾಹುತವೇ ಸಂಭವಿಸಿಬಿಡುತಿತ್ತು. ಇನ್ನು ಘಟನೆಯ ವಿಷಯ ತಿಳಿಯುತಿದ್ದಂತೆ ಹರಪನಹಳ್ಳಿ ಪೊಲೀಸರು ಸ್ಥಳಕ್ಕೆ ಬೇಟಿನೀಡಿ ಪರಿಸೀಲನೆ ನಡೆಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ನಿರ್ಮಾಣವಾದ ಈ ಟೋಲ್ ಗೇಟ್ ಕಾಮಗಾರಿಯನ್ನ ದಿಲೀಪ್ ಬಿಲ್ಡ್ಂಕಾನ್ ಕಂಪನಿ ಗುತ್ತಿಗೆ ಪಡೆದು 2018-19ರಲ್ಲಿ ಕಾಮಗಾರಿಯನ್ನ ಮುಕ್ತಾಯಗೊಳಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.
ಆದರೆ ಕಳಪೆ ಕಾಮಗಾರಿಯ ಪರಿಣಾಮ ಟೋಲ್ಗೇಟ್ ಮೇಲ್ಛಾಣೆ ಕೇವಲ ಮೂರು ವರ್ಷಗಳಲ್ಲೇ ಕಳಚಿ ನೆಲ ಕಚ್ಚಿದೆ. ಸದ್ಯಕ್ಕೆ ಕೆ.ವಿ.ಹಂಚಿನಾಳ್ ಎಂಬ ಗುತ್ತಿಗೆದಾರ ಟೋಲ್ ಸಂಗ್ರಹಮಾಡುತಿದ್ದು ಈ ಹಿಂದೆ ಮುಂಡರಗಿ ತಾಲೂಕಿನ ಕೋರಲಹಳ್ಳಿ ಗ್ರಾಮದ ಮದರಸಾಬ್ ಖಾದರ್ಸಾಬ್ ಸಿಂಗನಮಲ್ಲಿ ಎಂಬುವವರು ಗುತ್ತಿಗೆ ಪಡೆದಿದ್ದು ಅವರಿಂದ ಹಂಚಿನಾಳ್ ಉಪ ಗುತ್ತಿಗೆ ಪಡೆದು ಟೋಲ್ ಸಂಗ್ರಹಿಸುತಿದ್ದರು ಎನ್ನಲಾಗಿದೆ. ಈ ಟೊಲ್ ಗೇಟ್ ಪ್ರಾರಂಭವಾದಾಗಿನಿಂದಲೂ ನಿಯಮ ಮೀರಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಸೌಚಾಲಯ ಸರ್ವೀಸ್ ರಸ್ತೆ ಸೇರಿದಂತೆ ಇನ್ನಿತರ ಸೌಕರ್ಯಗಳಿಲ್ಲ ಟೋಲ್ ಗೇಟ್ ಇದಾಗಿದ್ದು ಸಾರ್ವಜನಿಕರು ಈ ಹಿಂದಿನಿಂದಲೂ ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ.
ವರದಿ.. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.