ವಿಜಯನಗರ….ಒಂದಾನೊಂದು ಕಾಲದಲ್ಲಿ ಹೊಸಪೇಟೆ ನಗರಕ್ಕೆ ಪ್ರಪಂಚದ ಮೂಲೆ ಮೂಲೆಯಿಂದ ವಲಸೆ ಬಂದ ಅದೆಷ್ಟೋ ಕೂಲಿ ಕಾರ್ಮಿಕರು ತಮ್ಮ ಬದುಕಿನ ನೆಲೆಯನ್ನ ಕಂಡುಕೊಂಡಿದ್ರು. ಆದ್ರೆ ಕಳೆದ ಕೆಲವು ವರ್ಷಗಳಿಂದ ಈ ಬಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಾಗಿನಿಂದ ಈ ನಗರಕ್ಕೆ ವಲಸೆ ಬಂದ ಕೂಲಿ ಕಾರ್ಮಿಕರು ಮತ್ತೊಂದು ಕಡೆ ಕೂಲಿಮಾಡಲು ವಲಸೆ ಹೋಗಿದ್ದಾರೆ, ಇನ್ನು ಸ್ಥಳೀಯ ಜನಗಳು ಮಾತ್ರ ತಾವು ಹುಟ್ಟಿದ ಊರನ್ನ ಬಿಟ್ಟು ಬೇರೆಡೆ ಹೋಗದೆ, ಸಣ್ಣ ಪುಟ್ಟ ಕೆಲಸಗಳನ್ನ ಮಾಡಿಕೊಂಡು ಬದುಕಿನ ಬಂಡಿಯನ್ನ ತಳ್ಳುತ್ತಿದ್ದಾರೆ, ಆದ್ರೆ ಇಲ್ಲಿ ಉದ್ಯೂಗ ಸ್ರಷ್ಠಿಮಾಡಬೇಕಿದ್ದ ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ನಡೆದುಕೊಳ್ಳುತ್ತಿದ್ದಾರೆ.
ಹೌದು ಗಣಿನಾಡು ಎಂದ್ರೆ ಅತೀ ಹೆಚ್ಚು ಬಡ ಜನಗಳಿರುವ ಶ್ರೀಮಂತರ ಜಿಲ್ಲೆ ಎಂಬ ಹಣೆಪಟ್ಟಿ ಇದೆ, ಕಾರಣ ಈ ಬಾಗದಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಗೇಟ್ ಕಾಯುವ ವಾಚ್ಮೆನ್ ಕೂಡ ಒಂದೊಂದು ಕಾಲದಲ್ಲಿ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡಿಕೊಂಡು ಮನೆ ಸೇರುತ್ತಿದ್ದ ಕಾಲವೊಂದಿತ್ತು, ಆದ್ರೆ ಈಗ ಆ ಪರಿಸ್ಥಿತಿ ಇಲ್ಲ, ಯಾಕೆಂದ್ರೆ ಸಕ್ರಮವಾಗಿ ಗಣಿಗಾರಿಕೆ ನಡೆಸಿದ ಗಣಿಮಾಲಿಕರು ಬೆರಳೆಣಿಕೆಯಷ್ಟು ಮಾತ್ರ, ಹಾಗಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಗಣಿನಾಡಿಗೆ ಬೇಟಿ ಕೊಟ್ಟ ಸಿ ಇ ಸಿ ತಂಡ ಒಬ್ಬೊಬ್ಬ ಗಣಿ ಬಾಕರ ಆಳ ಅಗಲ ಅಳೆದು ಅಕ್ರಮಕ್ಕೆ ಕಡಿವಾಣ ಹಾಕಿದ್ರು, ಉಪ್ಪು ತಿಂದವನು ನೀರು ಕುಡಿಯಲೇ ಬೇಕೆಂಭಂತೆ ಕೆಲವರು ಈ ವಿಚಾರದಲ್ಲಿ ಜೈಲು ಕೂಡ ಸೇರಿದ್ರು, ಇನ್ನು ಈ ಬಾಗದಲ್ಲಿದ್ದ ನೂರಾರು ಗಣಿ ಕಂಪನಿಗಳಿಗೆ ಕೋರ್ಟ್ ಬೀಗ ಜಡಿಯುವ ಮೂಲಕ ಅಕ್ರಮದಾರರ ಬಾಯಿಯನ್ನ ಬಂದ್ ಮಾಡಿದ್ದು ಒಂದು ಇತಿಹಾಸ, ಆದ್ರೆ ಹೊಸಪೇಟೆ ನಗರದ ಈಗಿನ ಪರಿಸ್ಥಿತಿಯೇ ಬೇರೆ, ಎಲ್ಲಾ ವ್ಯಾಪಾರ ವಹಿವಾಟುಗಳು ನೆಲಕಚ್ಚಿವೆ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ,ಗಣಿಗಾರಿಕೆಯನ್ನೇ ನಂಬಿಕೊಂಡು ಬದುಕಿದ್ದ ಅದೆಷ್ಟೊ ಕೂಲಿ ಕಾರ್ಮಿಕ ಕೆಲಸವಿಲ್ಲ ಕಂಗಾಲಾಗಿದ್ದಾರೆ, ಇನ್ನು ಗಣಿ ಬಾದಿತ ಪ್ರದೇಶಗಳನ್ನ ಅಭಿವ್ರದ್ದಿ ಪಡಿಸುವ ಹೆಸರಲ್ಲಿ ಕೋಟಿ ಕೋಟಿ ಹಣವನ್ನ ಸರ್ಕಾರ ಮೀಸಲಿಟ್ಟಿದ್ರು, ಆ ಹಣವನ್ನ ಬಳಕೆಮಾಡಿ ಈ ಬಾಗದಲ್ಲಿ ಉದ್ಯೋಗ ಮರುಸ್ರಷ್ಠಿಗೆ ಇಲ್ಲಿನ ಯಾವೊಬ್ಬ ಅಧಿಕಾರಿಗಳಾಗಲಿ ಜನ ಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ, ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ.
ಹೌದು ಹೀಗೆ ಪಾಳು ಬಂಗಲೆಯಲ್ಲಿ ಕೊಳೆಯುತ್ತ ಬಿದ್ದಿರುವ ಯಂತ್ರಗಳು, ಮತ್ತೊಂದೆಡೆ ಉಸಿರಾಡುವುದಕ್ಕೂ ಆಗದಷ್ಟು ಜಾಡುಕಟ್ಟಿರುವ ಕಿಟಕಿಗಳು, ಇನ್ನು ಕಿಡಿಗೇಡಿಗಳ ಕ್ರತ್ಯೆಕ್ಕೆ ಚೂರು ಚೂರಾಗಿರುವ ಕಿಟಕಿ ಗಾಜುಗಳು,ಇದನ್ನೆಲ್ಲ ನೋಡಿದ್ರೆ ಇದಾವುದೋ ಅನುಪಯುಕ್ತ ಗೋಡಾವ್ನ್ ಎಂದ್ಕೊ ಬೇಡಿ, ಅಂದಹಾಗೆ ನಾವೀಗ ನಿಮಗ ತೋರಿಸುತ್ತಿರುವ ಈ ದ್ರಷ್ಯ ಹೊಸಪೇಟೆ ನಗರದ ಕೈಗಾರಿಕ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಮಹಿಳೆಯರಿಗೆ ಗಾರ್ಮೆಂಟ್ ತರಬೇತಿ ನೀಡುವ ಕೇಂದ್ರದ ಸಧ್ಯದ ದ್ರಷ್ಯ,
ಹೌದು ನಿರುಧ್ಯೋಗದಿಂದ ಬಳಲುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರು ಸ್ವ ಉದ್ಯೋಗ ಕಲಿಯುವ ಮೂಲಕ ಸ್ವಾಲಂಭನೆ ಸಾಧಿಸಬೇಕೆಂಬುದು ಅಂದಿನ ಸರ್ಕಾರದ ಮುಖ್ಯ ಉದ್ದೇಶವಾಗಿತ್ತು, ಹಾಗಾಗಿ ಕಳೆದ 2010 ರಲ್ಲಿ ಇಲ್ಲಿನ ಹೊಸಪೇಟೆ ನಗರಸಭೆ ಎಸ್.ಎಪ್.ಸಿ ಅನುದಾನದಲ್ಲಿ ಸುಮಾರು 14 ಲಕ್ಷಕ್ಕೂ ಹೆಚ್ಚು ಹಣವನ್ನ ಮೀಸಲಿಟ್ಟು 39 ಅತ್ಯಾಧುನಿಕ ಒಲಿಗೆ ಯಂತ್ರವನ್ನ ಖರೀದಿಮಾಡುವ ಮೂಲಕ ಈ ಕೈಗಾರಿಕ ಪ್ರದೇಶದಲ್ಲಿ ಈ ಗಾರ್ಮೆಂಟ್ಸ್ ತರಬೇತಿ ಕೇಂದ್ರವನ್ನ ಪ್ರಾರಂಭಿಸಲಾಯಿತು, ಆದ್ರೆ ಆರಂಭಕ್ಕೂ ಮುನ್ನವೇ ಮುಗ್ಗರಿಸಿದೆ ಈ ಹೊಲಿಗೆ ತರಬೇತಿ ಕೇಂದ್ರ, ಅಂದಿನಿಂದ ಇಂದಿನ ವರೆಗೆ ಇಲ್ಲಿನ ಸಂಭಂದ ಪಟ್ಟ ಅಧಿಕಾರಿಗಳು ಈ ತರಬೇತಿ ಕೇಂದ್ರವನ್ನ ತೆರೆಯದೆ ಹಾಗೆ ಬಿಟ್ಟಿರುವುದೇ ಕೇಂದ್ರೆದ ದುಸ್ಥಿತಿಗೆ ಕಾರಣ,
ಗಣಿನಾಡು ಎಂಬ ಅಪಕೀರ್ತಿ ಬರುವ ಮುಂಚೆಯೇ ಜೀನ್ಸ್ ಸಿಟಿ ಎಂಬ ಹೆಗ್ಗಳಿಕೆಯನ್ನ ಬಳ್ಳಾರಿ ಹೊಂದಿತ್ತು, ಹೌದು ಬಳ್ಳಾರಿ ಎಂದ್ರೆ ಈ ಹಿಂದೆ ಜೀನ್ಸ್ ಪ್ಯಾಂಟ್ ಮತ್ತು ಶರ್ಟ್ ತಯಾರಿಕೆಗೆ ಹೆಸರುವಾಸಿಯಾದ ನಗರ, ಗಣಿಗಾರಿಕೆ ಎಷ್ಟು ವೇಗವಾಗಿ ಬೆಳೆಯಿತೊ ಅಷ್ಟೇ ವೇಗದಲ್ಲಿ ನೆಲ ಕಚ್ಚಿತು ಕೂಡ, ಆದ್ರೆ ಜೀನ್ಸ್ ಉಧ್ಯಮ ಮಾತ್ರ ಬಳ್ಳಾರಿಯಲ್ಲಿ ಹಲವು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ, ಹಾಗಾಗಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ರು ಬಳ್ಳಾರಿ ನಗರದಲ್ಲಿ ಕೂಲಿ ಕಾರ್ಮಿಕರಿಗೆ ತೊಂದರೆ ಮಾತ್ರ ಎದುರಾಗಿಲ್ಲ, ನಗರದಲ್ಲಿರುವ ನೂರಾರು ಜೀನ್ಸ್ ಉಧ್ಯಮದಲ್ಲಿ ಬಡ ಕೂಲಿ ಕಾರ್ಮಿಕರು ಮರು ಬದುಕು ಕಟ್ಟಿಕೊಂಡಿದ್ದಾರೆ, ಇದೇ ಉದ್ದೇಶದಿಂದ ಹೊಸಪೇಟೆ ನಗರದಲ್ಲಿ ಯಾಕೆ ಜೀನ್ಸ್ ಉಧ್ಯಮ ಪ್ರಾರಂಭಿಸಿ ಇಲ್ಲಿನ ನಿರುಧ್ಯೋಗ ಸಮಸ್ಯೆಯನ್ನ ನಿವಾರಿಸಬಹುದೆಂದು ಚಿಂತಿಸಿದ ಅಂದಿನ ಸರ್ಕಾರ ಈ ಗಾರ್ಮೆಂಟ್ಸ್ ತರಬೇತಿ ಕೇಂದ್ರವನ್ನ ಪ್ರಾರಂಭಿಸಿತು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ಮಹಿಳೆಯರು ಹೊಸಪೇಟೆ ನಗರದ ಬಟ್ಟೆ ವ್ಯಾಪಾರಸ್ತರ ಅಂಗಡಿಗಳಲ್ಲಿ ಹೆಚ್ಚಿನ ಸಂಖೆಯಲ್ಲಿ ಕೂಲಿ ಕೆಲಸಮಾಡುತ್ತಿರುವುದೇ ಈ ಟ್ರೈನಿಂಗ್ ಸೆಂಟರ್ ಪ್ರಾರಂಭಿಸುವುದಕ್ಕೆ ಪ್ರಮುಖ ಕಾರಣ ,ಕಡಿಮೆ ಕೂಲಿಗಾಗಿ ಕೆಲಸಮಾಡುವ ಇಲ್ಲಿನ ಬಡ ಮಹಿಳೆಯರು ಗಾರ್ಮೆಂಟ್ ಉಧ್ಯಮದಲ್ಲಿ ಅಷ್ಟೇ ಪಳಗಿದ್ದಾರೆ ಕೂಡ, ಒಂದು ಅಂದಾಜಿನ ಪ್ರಕಾರ ಹೊಸಪೇಟೆ ನಗರ ಒಂದರಲ್ಲೇ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳೆಯರು ಬಟ್ಟೆ ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ, ಒಂದು ವೇಳೆ ಈ ಗಾರ್ಮೆಂಟ್ ತರಬೇತಿ ಕೇಂದ್ರ ಅಂದು ಕೊಂಡಂತೆ ಈ ಹಿಂದೆಯೇ ಪ್ರಾರಂಭವಾಗಿದ್ರೆ ಈ ಮಹಿಳೆಯರು ಇಷ್ಟೊತ್ತಿಗೆ ಸ್ವಾಲಂಭನೆ ಸಾಧಿಸಿ ಸ್ವಂತ ಉದ್ಯೋಗಕ್ಕೆ ದಾರಿ ಕಂಡುಕೊಳ್ಳುತ್ತಿದ್ರು,
ಇನ್ನು 14 ಲಕ್ಷ ಹಣವನ್ನ ಕರ್ಚುಮಾಡಿ ಅತ್ಯಾಧುನಿಕ ಯಂತ್ರ ಖರೀದಿಸಿರುವ ನಗರಸಭೆ 11 ಲಕ್ಷ ಹಣವನ್ನ ಕರ್ಚುಮಾಡಿ ಈ ಕೈಗಾರಿಕ ಪ್ರದೇಶದಲ್ಲಿ ಒಂದು ದೊದ್ಡ ಗೋಡಾವ್ನ್ ಕೂಡ ಖರೀದಿಸಿತು, ಅಂದ್ರೆ ಅಲ್ಲಿಗೆ ಸರಿ ಸುಮಾರು ಇಪ್ಪತ್ತೈದು ಲಕ್ಷ ಹಣ ವೆಚ್ಚಮಾಡಿದಂತಾಯ್ತು, ಇಷ್ಟೊಂದು ಅನುದಾನ ನೀಡಿ ಈ ತರಬೇತಿ ಕೇಂದ್ರ ಪ್ರಾರಂಭಿಸಿದ ನಗರಸಭೆ ಮತ್ತೊಮ್ಮೆ ಈ ಕಡೆ ತಲೆ ಕೂಡ ಹಾಕಿ ಮಲಗಲಿಲ್ಲ, ದಿನಗಳು ಕಳೆದಂತೆ ಇಲ್ಲಿರುವ ಒಂದೊಂದೆ ಯಂತ್ರಗಳು ಹಾಳಾಗುತ್ತಾ ಬರುತ್ತಿವೆ, ಇನ್ನು ಪ್ರತಿದಿನ ಮಹಿಳೆಯರಿಂದ ತುಂಬಿ ತುಳುಕಬೇಕಿದ್ದ ಈ ಗೋಡಾವ್ನ್ ಇದೀಗ ಭೂತ ಬಂಗಲೆಯಾಗಿ ಬದಲಾಗಿದೆ, ಕಿಟಕಿಗಳು ಕಿತ್ತು ಹಾಳಾಗಿದ್ರೆ ಗೋಡಾವ್ನ್ ಮೇಲ್ಚಾವಣಿ ಹಕ್ಕಿ ಪಕ್ಷಿಗಳ ವಾಸಸ್ತಾನವಾಗಿ ಬದಲಾಗಿದೆ, ನೆಲವಂತೂ ಹೆಗ್ಗಣಗಳ ವಾಸ ಸ್ತಾನವಾಗಿದೆ,
ಇನ್ನು ಕಳೆದ ಐದು ವರ್ಷಗಳ ಹಿಂದೆ ಈ ದುಸ್ಥಿತಿಯನ್ನ ಕಂಡು ಕೆಲ ಮಾದ್ಯಮಗಳು ವರದಿ ಕೂಡ ಮಾಡಿದ್ದವು, ವರದಿಗೆ ಎಚ್ಚೆತ್ತು ನಾಟಕವಾಡಿದ ಇಲ್ಲಿನ ಅಧಿಕಾರಿಗಳು ಅಂದು ತರಬೇತೆ ಕೇಂದ್ರ ತೆರೆದು ಕಸ ಗುಡಿಸಿ ಸಣ್ಣ ಬಣ್ಣ ಬಳಿದು ನಾಳೆಯೇ ತರಬೇತಿ ಪ್ರಾರಂಭಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ರು, ಆದ್ರೆ ರಾಜಕಾರಣಿಗಳಂತೆ ಆಶ್ವಾಸನೆ ನೀಡಿದ ಇಲ್ಲಿನ ಅಧಿಕಾರಿಗಳು ಮತ್ತದೆ ಚಾಳಿ ಎಂಭಂತೆ ಒಂದು ವಾರದ ನಂತ್ರ ತರಬೇತಿ ಕೇಂದ್ರಕ್ಕೆ ಮತ್ತೆ ಬೀಗ ಜಡಿದು ಸುಮ್ಮನಾಗಿ ಬಿಟ್ರು, ಅದಾದ ಬಳಿಕ ಈ ತರಬೇತಿ ಕೇಂದ್ರವನ್ನ ನಮ್ಮಿಂದ ನಡೆಸಲು ಸಾದ್ಯವಿಲ್ಲ ಎಂದು ತಿಳಿದ ಹೊಸಪೇಟೆ ನಗರಸಭೆ ತಮ್ಮ ಮೇಲಿರುವ ಈ ಬಾರವನ್ನ ಬಳ್ಳಾರಿಯ ಕೈಗಾರಿಕಾಭಿವ್ರದ್ದಿ ನಿಗಮದ ಮೇಲೆ ಹಾಕಿದೆ, ಈ ಸಂಭಂದ ನಗರಸಭೆ ಕೈಗಾರಿಕಾಭಿವ್ರದ್ದಿಗೆ ಪತ್ರ ಬರೆದು ಈ ಕೇಂದ್ರದ ಜವಾಬ್ದಾರಿ ನೀಡಿ ಕೈತೊಳೆದುಕೊಂಡಿದೆ. ಅಂದಿನಿಂದ ಇಂದಿನ ವರೆಗೆ ಒಂದು ಬಾರಿಯೂ ಈ ತರಬೇತಿ ಕೇಂದ್ರದ ಬಾಗಿಲು ತೆಗೆದು ಕಸವನ್ನ ಸಹ ಗುಡಿಸಿಲ್ಲ, ಇನ್ನು ಈ ಟ್ರೈನಿಂಗ್ ಸೆಂಟರ್ ಜವಾಬ್ದಾರಿ ಪಡೆದ ಬಳ್ಳಾರಿಯ ಇಂಡಸ್ಟ್ರಿಯಲ್ ಡೌಲಪ್ಮೆಂಟ್ ಅಥಾರಿಟಿ ಒಂದು ಬಾರಿಯೂ ಈ ಕಡೇ ತಿರುಗಿ ಕೂಡ ನೋಡಿಲ್ಲ, ಅದರ ಪರಿಣಾಮ ಈ ದುಸ್ಥಿತಿ ಈ ಕೇಂದ್ರಕ್ಕೆ ಬಂದೊದಗಿದೆ,
ಈ ಎಲ್ಲಾ ಬೆಳವಣಿಗೆಯನ್ನ ನೋಡಿದ್ರೆ ಇಲ್ಲಿನ ಬಂಡವಾಳ ಶಾಹಿಗಳ ತಾಳಕ್ಕೆ ತಕ್ಕಂತೆ ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕುಣಿಯುತ್ತಿದ್ದಾರ ಎನ್ನುವ ಅನುಮಾನ ಮೂಡುತ್ತಿದೆ, ಕಾರಣ ಇಲ್ಲಿನ ಪ್ರತಿಯೊಂದು ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು ಕಡಿಮೆ ಕೂಲಿಗೆ ದುಡಿಯುತ್ತಿದ್ದಾರೆ, ಒಂದು ವೇಳೆ ಈ ತರಬೇತಿ ಕೇಂದ್ರ ಪ್ರಾರಂಭವಾದ್ರೆ ಇಲ್ಲಿನ 90 ರಷ್ಠು ಮಹಿಳೆಯರು ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಸ್ವಂತ ಉದ್ಯೋಗ ಪ್ರಾರಂಭಿಸುತ್ತಾರಲ್ಲದೆ ನಗರದಲ್ಲಿನ ಬಟ್ಟೆ ಅಂಗಡಿಗಳಲ್ಲಿ ಕೆಲಸಕ್ಕೆ ಯಾವೊಬ್ಬ ಮಹಿಳೆಯರು ಸಿಗುವುದಿಲ್ಲ ಎಂಭ ಮಾತು ಕೂಡ ಒಂದಿದೆ, ಹಾಗಾಗಿ ನಗರದಲ್ಲಿನ ಬಂಡವಾಳ ಶಾಹಿಗಳು ಈ ತರಬೇತಿ ಕೇಂದ್ರ ಪ್ರಾರಂಬಿಸಲು ಇಲ್ಲಿನ ಅಧಿಕಾರಿಗಳನ್ನ ಬಿಡದೆ ತಡೆ ಹಿಡಿದಿದ್ದಾರೆ ಎನ್ನುವ ಅನುಮಾನ ನಗರದ ಜನತೆಯಲ್ಲಿ ಮೂಡಿದೆ,
ಸಂಭಂದ ಪಟ್ಟ ಅದಿಕಾರಿಗಳು ಕೂಡಲೆ ಎಚ್ಚೆತ್ತು ಈ ತರಬೇತಿ ಕೇಂದ್ರ ಪ್ರಾರಂಭಿಸಿದ್ರೆ ಜೀನ್ಸ್ ಉದ್ಯಮದಲ್ಲಿ ಮುಂದೊಂದು ದಿನ ಬಳ್ಳಾರಿಯಷ್ಟೇ ನಮ್ಮ ಹೊಸಪೇಟೆ ನಗರ ಕೂಡ ಹೆಸರುಮಾಡುವುದರಲ್ಲಿ ಎರಡುಮಾತಿಲ್ಲ, ಕಾರಣ ಉದ್ಯಮಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಹೊಸಪೇಟೆ ನಗರದಲ್ಲಿದ್ದು ಅದಿಕಾರಿಗಳ ಇಚ್ಚಾ ಶಕ್ತಿ ಕೊರತೆ ಮಾತ್ರ ಇಲ್ಲಿ ಎದ್ದು ಕಾಣುತ್ತಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.