ಕಡಲ ತೀರದಲ್ಲಿ ತಲೆ ಎತ್ತಿದ ಹಿಜಬ್ ಹೋರಾಟಕ್ಕೆ ಗಣಿನಾಡಿನಲ್ಲಿ ಬೆಂಬಲ ವ್ಯಕ್ತವಾಗಿದೆ. ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಜಬ್ ದಾರಿಣಿಯ ಮುಸ್ಲೀಂ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು, ಅಲ್ಲದೆ ಹಿಜಬ್ ಧರಿಸಿದ ಮುಸ್ಲೀಂ ಹೆಣ್ಣು ಮಕ್ಕಳನ್ನ ಶಾಲೆಯಿಂದ ಹೊರ ನಿಲ್ಲಿಸಿದ ಪ್ರಾಂಶುಪಾಲರನ್ನ ಈ ಕೂಡಲೆ ಅಮಾನತ್ತುಮಾಡಿ ಅವರ ವಿರುದ್ದ ಶಿಸ್ತುಕ್ರಮ ಜರುಗಿಸುವಂತೆ ಕೂಡ ಪ್ರತಿಭಟನಾ ನಿರತ ಮಹಿಳೆಯರು ಒತ್ತಾಯಿಸಿದರು.
ಇನ್ನು ಶಾಲೆಗೆ ಬರುವ ಮುಸ್ಲೀಂ ಹೆಣ್ಣು ಮಕ್ಕಳಿಗೆ ಶಿರವಸ್ತ್ರ ಧರಿಸಲು ಸರ್ಕಾರ ಅವಕಾಶ ಕಲ್ಪಿಸಬೇಕ, ಅದು ಮುಸ್ಲೀಂ ಹೆಣ್ಣು ಮಕ್ಕಳ ಗೌರವದ ಸಂಕೇತವಾಗಿದೆ, ಈ ಕಾರಣದಿಂದ ಹೆಣ್ಣು ಮಕ್ಕಳನ್ನ ಶಾಲೆಯಿಂದ ಹೊರ ಹಾಕಿರುವುದು ಕಾನೂನು ಬಾಹಿರವಾಗಿದೆ, ರಾಜ್ಯ ಸರ್ಕಾರ ಕೂಡಲೆ ಈ ವಿವಾದಕ್ಕೆ ಅಂತ್ಯ ಹಾಡಬೇಕೆಂದು ಒತ್ತಾಯಿಸಿದರು.
ನಮ್ಮ ಗೌರವ ಕಾಪಾಡಿಕೊಳ್ಳುವ ಸಂಭಂದ ನಾವು ಧರಿಸುವ ಶಿರವಸ್ತ್ರದ ಕುರಿತು ಕೆಲವು ಸಂಘ ಸಂಸ್ಥೆಗಳು ಯಾಕೆ ತಲೆ ಕಡೆಸಿಕೊಳ್ಳುತ್ತಿವೆಯೊ ಏನೊ ಗೊತ್ತಿಲ್ಲ.
ಪದವಿ ಪೂರ್ವ ಶಿಕ್ಷಣ ಇಲಾಖೆಯ 2021 ಮತ್ತು 2022ರ ಮಾರ್ಗ ಸೂಚಿಯ ಪ್ರಕಾರ ಕಾಲೇಜುಗಳಲ್ಲಿ ಸಮಸ್ತ್ರ ಕಡ್ಡಾಯವಾಗಿರುವುದಿಲ್ಲ. ಆದರೆ ಕೆಲವು ಕಾಲೇಜಿನ ಪ್ರಾಂಶುಪಾಲರು ಅದನ್ನ ಕಡ್ಡಾಯಗೊಳಿಸುತಿದ್ದಾರೆ, ಇಂತಾ ಕಾಲೇಜುಗಳ ವಿರುದ್ದ ಶಿಕ್ಷಣ ಇಲಾಖೆ ಖಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಇನ್ನು ಇತ್ತೀಚೆಗೆ ಉಡುಪಿಯ ಪದವಿಪೂರ್ವ ಕಾಲೇಜಿನಲ್ಲಿ ಮುಸ್ಲೀಂ ವಿಧ್ಯಾರ್ಥಿನೀಯರು ಹಿಜಬ್ ಧರಿಸಿದ ಒಂದೇ ಕಾರಣ ಇಟ್ಟುಕೊಂಡು ಒಂದು ತಿಂಗಳಿನಿಂದ ತರಗತಿಯಿಂದ ಹೊರ ನಿಲ್ಲಿಸಿರುವುದು ಸರಿಯಲ್ಲ, ಸರ್ಕಾರ ಕೂಡಲೆ ಆ ಕಾಲೇಜಿನ ವಿರುದ್ದ ಮತ್ತು ಅಲ್ಲಿನ ಪ್ರಿನ್ಸಿಪಾಲ್ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಹಿಜಬ್ ವಿವಾದ ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗುತ್ತಿದ್ದು ಇದು ಒಂದು ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು.
ಮಹಿಳಾ ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಈ ಪ್ರತಿಭಟನಾ ಮೆರವಣಿಗೆ ಹೊಸಪೇಟೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ನಡೆಯಿತು. ಡಿ.ಸಿ.ಆಪೀಸ್ ಮುಂದೆ ಪ್ರತಿಭಟನೆ ನಡೆಸಿದ ಮಹಿಳೆಯರು ನಂತರ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಅವರಿಗೆ ಮನವಿ ಸಲ್ಲಿಸಿದರು.
ವರದಿ..ಸುಬಾನಿ ಪಿಂಜಾರ ಹಂಪಿಮಿರರ್ ವಿಜಯನಗರ.