ವಿಜಯನಗರ….ನಿನ್ನೆ ಇದೇ ಸಮಯಕ್ಕೆ ಮಕ್ಕಳ ಆರೋಗ್ಯ ಕಾಪಾಡಬೇಕಾದ ಸಿಬ್ಬಂದಿಗಳೇ ಮಾರಕವಾಗಿದ್ದಾರಾ ಎಂಬ ಶಿರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಸಾರಮಾಡಿದ್ದ ನಮ್ಮ ಹಂಪಿ ಮಿರರ್, ಸಂಭಂದ ಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುದ್ದಿಗೆ ಎಚ್ಚೆತ್ತ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಯ ವೈಧ್ಯಾದಿಕಾರಿ ಡಾಕ್ಟರ್ ಸಲೀಮ್ ಅವರು ಕೋವಿಡ್ ವ್ಯಾಕ್ಸಿನೇಷನ್ ಹಾಕುವ ಕೊಠಡಿಯನ್ನ ಪ್ರತ್ತ್ಯೇಕಮಾಡಿದ್ದಾರೆ.
ಹೌದು ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಮಕ್ಕಳ ಬಿ.ಸಿ.ಜಿ ಲಸಿಕಾ ಕೊಠಡಿಯಲ್ಲಿಯೇ ಕೊವಿಡ್ ಲಸಿಕೆ ಹಾಕಲಾಗುತಿತ್ತು, ಇದನ್ನ ಮಕ್ಕಳ ಹೆತ್ತ ತಂದೆ ತಾಯಿಗಳು ಪ್ರಶ್ನೆಮಾಡಿ ಕೊವಿಡ್ ವ್ಯಾಕ್ಸಿನೇಷನ್ ಹಾಕುವ ಕೊಠಡಿಯನ್ನ ಪ್ರತ್ತ್ಯೇಕ ಗೊಳಿಸಲು ಒತ್ತಾಯಿಸಿದ್ದರು, ಕೇವಲ ಹತ್ತು ಅಡಿ ಉದ್ದಗಲದ ಈ ಕೊಠಡಿಯಲ್ಲಿ ಒಂದು ಕಡೆ ಕೊವಿಡ್ ಲಸಿಕೆ ಹಾಕಿದರೆ, ಮತ್ತೊಂದು ಟೇಬಲಲ್ಲಿ ನವಜಾತ ಶಿಸುಗಳಿಗೆ ಚುಚ್ಚುಮದ್ದು ಹಾಕುತ್ತಿದ್ದರು, ಇದರಿಂದ ಮಕ್ಕಳಿಗೆ ಬೇರೆಯ ರೀತಿಯ ಸೋಂಕುಗಳು ತಗುಲುವ ಭಯದಲ್ಲಿ ಆಸ್ಪತ್ರೆಗೆ ಹೋಗುತಿದ್ದರು ಜನ ಸಾಮಾನ್ಯರು.
ಹಾಗಾಗಿ ಈ ಎಲ್ಲಾ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಕೆಲಸವನ್ನ ನಮ್ಮ ಹಂಪಿ ಮಿರರ್ ಮಾಡಿತ್ತು. ಸುದ್ದಿಗೆ ಸ್ಪಂದಿಸಿದ ವೈಧ್ಯಾದಿಕಾರಿ, ಮಕ್ಕಳ ಬಿ.ಸಿ.ಜಿ.ಚುಚ್ಚುಮದ್ದು ಹಾಕುವ ಕೊಠಡಿಯನ್ನ ಮತ್ತು ಕೊವಿಡ್ ವ್ಯಾಕ್ಸಿನೇಷನ್ ಹಾಕುವ ಕೊಠಡಿಯನ್ನ ಪ್ರತ್ತ್ಯೇಕಗೊಳಿಸಿದ್ದಾರೆ, ಅದಲ್ಲದೆ ಮುಂದೆ ಈ ರೀತಿಯ ಪ್ರಮಾದ ನಡೆಯದಂತೆ ನೋಡಿಕೊಳ್ಳುವ ಭರವಸೆಯನ್ನ ಕೂಡ ಕೊಟ್ಟಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.