ಕೊಪ್ಪಳ…ಹೌದು ಪ್ರತಿ ಬಾರಿ ದೇವರ ಮುಂದಿನ ಹುಂಡಿ ಎಣಿಕೆಗೆ ಮುಂದಾದಾದ ಒಂದಲ್ಲ ಒಂದು ವಿಷೇಶಗಳು ಕೈಗೆ ಸಿಗುತ್ತಲೇ ಇರುತ್ತವೆ. ಈ ಹಿಂದೆ ಎಸ್.ಎಸ್.ಎಲ್.ಸಿ. ವಿಧ್ಯಾರ್ಥಿ ಶೇಕಡ 35 ಅಂಕಗಳನ್ನ ಕೊಟ್ಟು ಪಾಸ್ ಮಾಡಪ್ಪಾ ಭಗವಂತ ಎಂದು ಚೀಟಿ ಬರೆದು ಹಾಕಿದ್ದ, ಅದೇ ರೀತಿ ಮತ್ತೊಬ್ಬ, ತಾನು ಪ್ರೀತಿಸಿದ ಹುಡುಗಿ ಸಿಗಲಿ ಎಂದು ಪತ್ರ ಬರೆದು ಕಾಣಿಕೆ ಪೆಟ್ಟಿಗೆಗೆ ಹಾಕಿದ್ದ, ಅದೇರೀತಿಯಾಗಿ ಇನ್ನೂ ಹಲವು ಬಗೆಯ ಬರವಣಿಗೆಗಳು ಹುಂಡಿ ಎಣಿಕೆಮಾಡುವವರ ಕೈಗೆ ಸಿಕ್ಕು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದರು, ಇದೀಗ ಮತ್ತೊಂದು ಚೀಟಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಮೇಲಿನ ದೇವಸ್ಥಾನದಲ್ಲಿದ್ದ ಹುಂಡಿಯಲ್ಲಿ ಸಿಕ್ಕಿದೆ.
ಅಂಜನಾದ್ರಿ ಹುಂಡಿಯಲ್ಲಿ ಭಕ್ತನ ಹರಕೆ ಪತ್ರದಲ್ಲಿ ಏನಿದೆ ಎಂದ್ರೆ, ನನ್ನ ಪತ್ನಿಗೆ ಹೆಣ್ಣುಮಗು ಜನಿಸಲಿ ದೇವರೆ ಎಂದು ಬರವಣಿಗೆ ಪ್ರಾರಂಬಿಸಿರುವ ಈ ಬರವಣಿಗೆ ಭಕ್ತ, ತನ್ನ ಹೆಂಡತಿಯ ಹೆರಿಗೆ ಸೂಸುತ್ರವಾಗಿ ಆಗಲಿ ಎಂದು ತನ್ನ ಮುಗ್ದತೆಯನ್ನ ಬರವಣಿಗೆಯಲ್ಲಿ ವ್ಯಕ್ತಪಡಿಸಿದ್ದಾನೆ,
ಅದಲ್ಲದೆ ನನ್ನ ಮೇಲೆ ಯಾವುದೇ ಕೇಸ್ ಇಲ್ಲದಂತೆ ಮಾಡು ಭಗವಂತ, ಇನ್ನು ಮುಂದೆ ಕೂಡ ಯಾವುದೇ ಕೇಸ್ ಬೀಳದಂತೆ ಮಾಡು ಎಂದು ಹರಕೆ ಬೇಡಿಕೆ ಇಟ್ಟಿದ್ದಾನೆ, ಅಲ್ಲದೆ ತನ್ನ ತಂಗಿಗೆ ಒಳ್ಳೆಯ ವರ ಸಿಗುವ ಹಾಗೇ ಮಾಡು ಎಂದು ಬೇಡಿಕೆ ಇಟ್ಟಿದ್ದಾನೆ, ಅದೇ ರೀತಿಯಾಗಿ ಒಟ್ಟು ಹತ್ತು ಬೇಡಿಕೆಗಳನ್ನ ಈ ಭಕ್ತ ಬರವಣಿಗೆ ರೂಪದಲ್ಲಿ ದೇವರಿಗೆ ಸಲ್ಲಿಸಿದ್ದಾನೆ.ಒಟ್ಟಿನಲ್ಲಿ ಐತಿಹಾಸಿಕವಾಗಿ ಸಾಕಷ್ಟು ಪ್ರಸಿದ್ದಿ ಪಡೆದಿರುವ ಅಂಜನಾದ್ರಿ ಪರ್ವತದಲ್ಲಿ ಇಂತಾ ಮುಗ್ದ ಭಕ್ತರು ಹರಕೆ ಸಲ್ಲಿಕೆ ಪ್ರತಿ ಬಾರಿ ಸರ್ವೇ ಸಾಮಾನ್ಯವಾಗಿರುತ್ತೆ.
ವರದಿ.ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.