ವಿಜಯನಗರ..ಶ್ರೀ ಶೈಲ, ಧರ್ಮಸ್ಥಳ ಸೇರಿದಂತೆ ಇನ್ನಿತರ ಪುಣ್ಯ ಕ್ಷೇತ್ರಗಳಿಗೆ ಜನ ಸಾಮಾನ್ಯರು ಪಾದಯಾತ್ರೆ,ಸೈಕಲ್ ಯಾತ್ರೆ ಹೋಗುವುದನ್ನ ನೋಡುತಿದ್ದೆವು, ಆದರೆ ಇದೀಗ ಹೊಸಪೇಟೆ ನಗರದಲ್ಲಿ ಹೊಸದೊಂದು ಟ್ರೆಂಡ್ ಸುರುವಾಗಿದೆ, ಅದು ಅಪ್ಪು ಸಮಾದಿಗೆ ಸೈಕಲ್ ಯಾತ್ರೆ ಕೈಗೊಳ್ಳುವುದು, ಹೌದು ಕಳೆದ ವಾರವಷ್ಟೆ ಹೊಸಪೇಟೆಯ ಯುವಕನೊಬ್ಬ ಅಪ್ಪು ಸಮಾದಿಗೆ ಸೈಕಲ್ ಮೂಲಕ ತೆರಳಿ ಮರಳಿ ಬಂದ ಮೇಲೆ, ಹೊಸಪೇಟೆ ನಗರದಲ್ಲಿ ಟ್ರೆಂಡ್ ಒಂದು ಪ್ರಾರಂಭವಾಗಿದೆ. ಹೌದು ಇಂದು ಕೂಡ ಯುವಕರ ಗುಂಪೊಂದು ಹೊಸಪೇಟೆ ನಗರದಿಂದ ಬೆಂಗಳೂರಿನ ಅಪ್ಪು ಸಮಾದಿಯ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದೆ.
ಶ್ರೀರಾಮ ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಅಪ್ಪು ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸೈಕಲ್ ಯಾತ್ರೆಗೆ ಚಾಲನೆ ನೀಡಿದರು.ಸುಮಾರು 13 ಯುವಕರ ತಂಡ ಹೊಸಪೇಟೆ ನಗರದ ಪುನೀತ್ ರಾಜ್ಕುಮಾರ್ ಸರ್ಕಲ್ ನಿಂದ ಪ್ರಾರಂಬಿಸಿ ಬೆಂಗಳೂರಿನ ಕಡೆಗೆ ತಮ್ಮ ಸೈಕಲ್ ಯಾತ್ರೆ ಹೊರಟರು.ಇನ್ನು ಹೊಸಪೇಟೆ ನಗರದ ಅಪ್ಪು ಅಭಿಮಾನಿಗಳು ಸೈಕಲ್ ಯಾತ್ರೆ ಕೈಗೊಂಡವರಿಗೆ ಪ್ರೋತ್ಸಾಹಿಸಿ ನಗರ ದಾಟುವವರೆಗೆ ಅದ್ದೂರಿ ಬೀಳ್ಕೊಡಿಗೆ ನೀಡಿದರು.
ಸೈಕಲಿಂಗ್ ಪಟುಗಳಂತೆ ಇರುವ ಈ ಯುವಕರ ತಂಡ ಇಂದು ಸಂಜೆ ಬೆಂಗಳೂರು ತಲುಪಿ ಅಪ್ಪು ಸಮಾಧಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಇಂದು ರಾತ್ರಿ ಶಿವಣ್ಣ ರಾಘಣ್ಣ ಅವರನ್ನ ಬೇಟಿ ಮಾಡಿ ನಂತರ ನಾಳೆ ಬೆಂಗಳೂರಿನಿಂದ ಹೊಸಪೇಟೆ ನಗರಕ್ಕೆ ಮರಳಲಿದ್ದಾರೆ.
ಸೈಕಲಿಂಗ್ ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ವಿಜಯನಗರ.