ವಿಶ್ವ ವಿಖ್ಯಾತ ಹಂಪಿಯಲ್ಲಿರುವ ಕಲ್ಲಿನ ತೇರು, ಸಂಗೀತ ಮಂಠಪ, ವಿಜಯವಿಠ್ಠಲ ದೇವಸ್ಥಾನದ ಇತಿಹಾಸ ಪ್ರಪಂಚದ ಮೂಲೆ ಮೂಲೆಗೂ ತಲುಪಿದೆ, ಯಾಕೆಂದ್ರೆ ಹಂಪಿಯ ಪ್ರವಾಸಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಈ ಮೂರು ಸ್ಮಾರಕಗಳನ್ನ ಕೇಂದ್ರವಾಗಿಟ್ಟುಕೊಂಡೆ ಹಂಪಿಯ ಪ್ರವಾಸ ಕೈಗೊಳ್ಳೊದು, ಆದ್ರೆ ಈ ಕಲ್ಲಿನ ಸ್ಮಾರಕಗಳ ಸಾಲಿಗೆ ಮತ್ತೊಂದು ಜೀವಂತ ಸ್ಮಾರಕ ಸೇರ್ಪಡೆಯಾಗಿದೆ, ಸ್ಮಾರಕ ಎಂದ ಕೂಡ್ಲೆ ಕಲ್ಲಿನಿಂದಲೋ ಅಥವಾ ಗಾರೆಯಿಂದಲೋ ನಿರ್ಮಾಣಮಾಡಿದ್ದಲ್ಲ, ಬದಲಾಗಿ ಪ್ರಕ್ರತಿ ಮಾತೆ ಕೊಟ್ಟ ಪುಟ್ಟ ಕೂಸು ಇದು,
ಹೌದು ಹೀಗೆ ಮರದ ತುಂಬೆಲ್ಲ ಕಾಣುವ ಬರೀ ಬರಡು ಕೊಂಬೆಗಳು, ಆ ಕೊಂಭೆಗಳ ತುದಿಯಲ್ಲಿ ಫಳ ಫಳ ಹೊಳೆಯುವ ಹೂಗಳು, ಮರದ ಬುಡ ಕಲ್ಲಿನಲ್ಲಿ ಕೆತ್ತನೆಮಾಡಿರುವ ರೀತಿಯಲ್ಲಿ ಗೋಚರವಾಗುವ ಇಂತದ್ದೊಂದು ಚಿತ್ರಣ ಕಂಡು ಬರುವುದು ನಮ್ಮ ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಂಕೀರ್ಣದಲ್ಲಿ, ಹೌದು ಸ್ಮಾರಕದ ರೀತಿಯಲ್ಲಿ ಕಾಣುವ ಈ ಮರ ಈಗ ಹಂಪಿಗೆ ಬರುವ ಪ್ರವಾಸಿಗರ ಆಕರ್ಷಣೀಯ ಕೇಂದ್ರಬಿಂದು.
ಯಾಕೆಂದ್ರೆ ವಿಜಯ ವಿಠ್ಠಲ ದೇವಸ್ಥಾನ ವೀಕ್ಷಣೆಗೆ ಪ್ರವಾಸಿಗರು ಬಂದ್ರೆ ಈ ದೇವಕಣಗಿಲೆ ಮರದ ಮುಂದೆ ನಿಂತು ಒಂದು ಪೋಟೊ ಕ್ಲಿಕ್ಕಿಸಿಕೊಳ್ಳದೆ ಹೋಗೋಕೆ ಸಾಧ್ಯವೇ ಇಲ್ಲ, ಅಷ್ಟೊಂದು ಆಕರ್ಷಕ ಚಲುವನ್ನ ಹೊಂದಿದೆ ಈ ದೇವಕಣಗಿಲೆ,ಇನ್ನು ವಾತವರಣಕ್ಕೆ ತಕ್ಕಂತೆ ಈ ಮರ ಕೂಡ ತನ್ನ ಅಂದವನ್ನ ಬದಲಿಸುತ್ತೆ, ಮಳೆಗಾಲದಲ್ಲಿ ಹಸಿರೆಲೆಗಳಿಂದ ಕೂಡುವ ಈ ಮರ, ಚಳಿಗಾಲದಲ್ಲಿ ಈ ರೀತಿಯ ಹೂವುಗಳಿಂದ ತುಂಬಿಕೊಳ್ಳುತ್ತೆ, ಅದೇ ರೀತಿ ಕಡು ಬೇಸಿಗೆಯಲ್ಲಿ ಮರದ ರಂಭೆ ಕೊಂಭೆಗಳು ಫಳ ಫಳ ಹೊಳೆಯುತ್ತವೆ, ಇನ್ನು ಇದರ ಹೂವ್ವುಗಳ ಪರಿಮಳ ಅಂತೂ ಎಂತವರನ್ನೂ ಆಕರ್ಷಿಸುತ್ತೆದೆ,
ಇನ್ನು ಈ ಮರ ಇತ್ತೀಚೆಗೆ ಬೆಳದಿದ್ದಲ್ಲ, ಸರಿ ಸುಮಾರು ನೂರೈವತ್ತು ವರ್ಷಗಳಿಗೂ ಹೆಚ್ಚು ಹಳೆ ಮರ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ, ಅದಕ್ಕೆ ಕಾರಣ ಕೂಡ ಇದೆ,1856ರಲ್ಲಿ ರಾಬರ್ಟ್ ಜಾನ್ ಗ್ರೀನ್ ಲಾ ಮೊಟ್ಟ ಮೊದಲ ಬಾರಿಗೆ ಹಂಪಿಗೆ ಬೇಟಿ ಕೊಟ್ಟು ಚಿತ್ರೀಕರಿಸಿದ ಪೊಟೊಗಳಲ್ಲಿ ಈ ಮರ ಇರುವುದು ನಾವು ಕಾಣಬಹುದು,
ಇನ್ನು ಕೆಲವರು ಹೇಳುವುದು ಇದು ಸುಗಂದ ಭರಿತ ಹೂವ್ವಿನ ಮರ ಆಗಿದೆ, ಅಲ್ಲದೆ ವಿಜಯವಿಠ್ಠಲ ದೇವಸ್ಥಾನದ ಎಡ ಬಾಗದಲ್ಲಿರುವುದರಿಂದ ದೇವಸ್ಥಾನ ಕಟ್ಟುವ ಮುಂಚೆಯೇ ಅಂದಿನ ರಾಜರು ಈ ಮರವನ್ನ ನೆಟ್ಟಿರಬಹುದು ಎಂದು ತಮ್ಮ ಅಭಿಪ್ರಾಯ ವ್ಯೆಕ್ತಪಡಿಸುತ್ತಾರೆ, ಇಷ್ಟೆಲ್ಲ ಇತಿಹಾಸ ಹೊಂದಿರುವ ಈ ದೇವ ಕಣಗಿಲೆ ಮರ ಪ್ರವಾಸಿಗರ ಫೇವರಿಟ್ ಪೊಟೊಗ್ರಫಿ ಸ್ಪಾಟ್ ಆಗಿ ಬದಲಾಗಿದೆ.
ಇಲ್ಲಿನ ಪುರಾತತ್ವ ಇಲಾಖೆಯ ಅದಿಕಾರಿಗಳು ಈ ಮರವನ್ನ ಸ್ಮಾರಕಗಳ ರೀತಿಯಲ್ಲಿ ರಕ್ಷಣೆಮಾಡಬೇಕೆನ್ನುವುದು ಇಲ್ಲಿಗೆ ಬರುವ ಇತಿಹಾಸ ಪ್ರಿಯರ ಒತ್ತಾಯವಾಗಿದೆ. ಮರ ಬೆಳವಣಿಗೆಗೆ ಬೇಕಾಗಿರುವ ಸ್ಥಳವನ್ನ ಕಲ್ಲು ಹಾಸಿನಿಂದ ತೆರವುಗೊಳಿಸಿದ್ರೆ ಈ ಮರ ಮತ್ತಷ್ಟು ವರ್ಷಗಳ ಕಾಲ ಬದುಕುಳಿಯುತ್ತೆ, ಅಲ್ಲದೆ ಹಂಪಿಯ ಇತಿಹಾಸದಲ್ಲಿ ಈ ಮರದ ಇತಿಹಾಸ ಕೂಡ ಅಚ್ಚಳಿಯದೆ ಉಳಿಯಬೇಕೆನ್ನುವುದು ನಮ್ಮ ಅಭಿಪ್ರಾಯ ಕೂಡ ಹೌದು.
ವರದಿ.. ಸುಬಾನಿ ಪಿಂಜಾರ ವಿಜಯನಗರ.