
ವಿಜಯನಗರ…ಹೊಸಪೇಟೆಯ ಅಪ್ಪು ಅಭಿಮಾನಿಯೊಬ್ಬ ಹೊಸಪೇಟೆ ನಗರದಿಂದ ಪುನಿತ್ ರಾಜಕುಮಾರ್ ಸಮಾದಿಯವರೆಗೆ ಸೈಕಲ್ ಯಾತ್ರೆ ಮಾಡಿ ಗಮನ ಸೆಳೆಯುವ ಮೂಲಕ ತನ್ನೂರಿಗೆ ಇಂದು ಮರಳಿದ್ದಾನೆ. ಸೈಕಲ್ ಯಾತ್ರೆ ಮುಗಿಸಿ ಮರಳಿ ಬಂದ ಅಭಿಮಾನಿಗೆ ಅದ್ದೂರಿ ಸ್ವಾಗತ ಕೋರಿದ ಹೊಸಪೇಟೆ ನಾಗರಿಕರು ಪುನೀತ್ ಅವರ ಭಾವಚಿತ್ರ ಕೊಟ್ಟು, ಹೂವಿನ ಹಾರ ಹಾಕಿ ಗೌರವಿಸಿದರು.ಇದೇ ತಿಂಗಳು 21ನೆ ತಾರೀಕಿನಂದು ಅಪ್ಪು ಸಮಾಧಿಗೆ ಸೈಕಲ್ ಮೇಲೆ ತೆರಳಿದ ಬೆಳಗೋಡು ಉಮೇಶ್, ಅಪ್ಪು ಸಮಾದಿಯ ದರ್ಶನ ಪಡೆದು, ನಂತರ ಶಿವರಾಜ್ ಕುಮಾರ್ ಮತ್ತು ಯುವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಇಂದು ನಗರಕ್ಕೆ ಮತ್ತೆ ಮರಳಿದ್ದಾನೆ. ಹೊಸಪೇಟೆ ನರಕ್ಕೆ ಬಂದ ಉಮೇಶ ನಂತರ ಮಾತನಾಡಿ, ನಾನು ಹೊಸಪೇಟೆಯಿಂದ ಸೈಕಲ್ ಯಾತ್ರೆ ಹೊರಟಾಗ ದಾರಿಯುದ್ದಕ್ಕೂ ಅಭಿಮಾನಿಗಳು ಸ್ವಾಗತ ಮಾಡಿಕೊಂಡ್ರು , ಊಟ ಕೊಟ್ರು ಶೂಟಿಂಗ್ ನಲ್ಲಿದ್ದ ಶಿವಣ್ಣ ಶೂಟಿಂಗ್ ನಿಂದ ಬಂದು ನನ್ನ ಮಾತನಾಡಿಸಿದ್ರು, ಅಪ್ಪು ಅವರು ಮಾಡಿದ ಉತ್ತಮ ಕೆಲಸಗಳು ಇಂದು ನಮಗೆ ಪ್ರೇರಣೆ ಎಂದು ತಮ್ಮ ಅನುಭವ ಅಂಚಿಕೊಂಡ್ರು.