ವಿಜಯನಗರ..ಕಳೆದ ಎರಡು ದಿನಗಳಿಂದ ವಿಜಯನಗರ ಜಿಲ್ಲೆಯಾಧ್ಯಂತ ಅನಧಿಕೃತ ಎಣ್ಣೆ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಮದ್ಯದ ಸರಕನ್ನ ವಶಕ್ಕೆ ಪಡೆದಿದ್ದಾರೆ, ಅದರಲ್ಲೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು,ಇಟಿಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆ ವಶಕ್ಕೆಪಡೆದಿದ್ದಾರೆ. ನಿನ್ನೆ ಅಂದರೆ ಜೂನ್ ಮೂರನೆ ತಾರೀಕಿನಂದು ಇಟಿಗಿ ಪೊಲೀಸ್ ಠಾಣೆಯ ಪಿ.ಎಸ್.ಐ. ವೀರೇಶ್ ಮತ್ತು ವಿಶ್ವೇಶ್ವರಯ್ಯ ನೇತೃತ್ವದ ತನಿಖಾ ತಂಡ ಕೋಗಳಿ ತಾಂಡದಲ್ಲಿದ್ದ ಅಕ್ರಮ ಮದ್ಯ ಮಾರಾಟದ ಅಂಗಡಿಯ ಮೇಲೆ ದಾಳಿ ನಡೆಸಿ 24707 ರೂಪಾಯಿ ಮೌಲ್ಯದ 61.460 ಲೀಟರ್ ಮದ್ಯವನ್ನ ವಶಕ್ಕೆ ಪಡೆದಿದ್ದಾರೆ. ಮದ್ಯಮಾರಾಟದಲ್ಲಿ ತೊಡಗಿದ್ದ ತುಕಾರಾಮ್ ನಾಯ್ಕ್ ವಶಕ್ಕೆ ಪಡೆದಿದ್ದು, ತಲೆ ಮರೆಸಿಕೊಂಡಿರುವ ಭೋಜನಾಯ್ಕ್ ಎನ್ನುವ ವ್ಯಕ್ತಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹರಪನಹಳ್ಳಿ ಡಿ.ವೈ.ಎಸ್.ಪಿ. ಹಾಲಮೂರ್ತಿರಾವ್ ಮತ್ತು ಹೂವಿನಹಡಗಲಿ ಸಿ.ಪಿ.ಐ. ರಮೇಶ್ ಕುಲಕರ್ಣಿ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇಟಿಗಿ ಪಿ.ಎಸ್.ಐ. ವೀರೇಶ್, ವಿಶ್ವೇಶ್ವರಯ್ಯ, ಸಿಬ್ಬಂದಿಗಳಾದ ಬಲರಾಮ್ ನಾಯ್ಕ್, ರಾಜಶೇಖರ, ಸತೀಶನಾಯ್ಕ್, ಕಾಂತರಾಜ್,ಉಮೇಶ್ ನಾಯ್ಕ್, ಬಾಗಿಯಾಗಿದ್ದರು.
ಅದೇರೀತಯಾಗಿ ಇದೇ ಇಟಿಗಿ ಪೊಲೀಸ್ ಠಾಣೆ ವ್ಯಾಪ್ತಿಯ ಅಡವಿಮಲ್ಲನಕೇರಿ ತಾಂಡದಲ್ಲಿ ಪೂರ್ಯಾನಾಯ್ಕ್ ಎನ್ನುವವರ ಮನೆಯ ಮುಂದೆ ಮಾರಾಟಮಾಡುತಿದ್ದ ಮದ್ಯದ ಅಂಗಡಿಯ ಮೇಲೆ ದಾಳಿ ನಡೆಸಿ, 89996ಮೌಲ್ಯದ 236.460 ಲೀಟರ್ ಮದ್ಯವನ್ನ ವಶಕ್ಕೆ ಪಡೆದಿದ್ದಾರೆ, ಪ್ರಕರಣಕ್ಕೆ ಸಂಭಂದಿಸಿದಂತೆ ಜಯಾನಾಯ್ಕ್ ಎಂಬ ಓರ್ವ ಆರೋಪಿಯನ್ನ ಬಂದಿಸಿದ್ದು ತಲೆಮರೆಸಿಕೊಂಡಿರುವ ಪೂರ್ಯಾ ನಾಯ್ಕ್ ಎನ್ನುವ ಆರೋಪಿಗೆ ಹುಡುಕಾಟ ನಡೆಸಿದ್ದಾರೆ. ಇನ್ನು ಹಳ್ಳಿಗಳಲ್ಲಿ ವೈನ್ ಶಾಪ್ ಇಲ್ಲದೆ ಇದ್ದರೂ ಇಷ್ಟೊಂದು ಮದ್ಯದ ಸರಕು ಎಲ್ಲಿಂದ ಬಂತು ಎಂದು ಜಾಡು ಹಿಡಿದ ಪೊಲೀಸರು, ಹರಪನಹಳ್ಳಿಯ ಶ್ರೀ ರೇಣುಕಾ ವೈನ್ ಶಾಪ್ ಮಾಲೀಕ ಶಿವಕುಮಾರ್ ಮೇಲೆಯೂ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಿ.ಎಸ್.ಐ.ವೀರೇಶ್, ವಿಶ್ವೇಶ್ವರಯ್ಯ, ರಾಜೇಂದ್ರನಾಯ್ಕ್, ಬಲರಾಮ್, ಉಮೇಶ್ ನಾಯ್ಕ್,ರಾಜಶೇಖರ್,ಸತೀಶ್ ನಾಯ್ಕ್,ಚಿದಾನಂದ್,ಉಮೇಶ್ ನಾಯ್ಕ್, ಬಿ.ಹೊಲೆಪ್ಪ,ಕರಿಯಮ್ಮ, ಬಾಗಿಯಾಗಿದ್ದಾರೆ.
ಕೂಡ್ಲಿಗಿ ಡಿ.ವೈ.ಎಸ್.ಪಿ. ಹರೀಶ್ ರೆಡ್ಡಿ ಮತ್ತು ಹಗರಿಬೊಮ್ಮನಹಳ್ಳಿ ಸಿ.ಪಿ.ಐ. ನೇತೃತ್ವದಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಹಗರಿಬೊಮ್ಮನಹಳ್ಳಿ ಮಹಿಳಾ ಪಿ.ಎಸ್.ಐ. ಶ್ರೀಮತಿ ಸರಳ ಪಟ್ಟಣದ ಬೇರೆ ಬೇರೆ ಕಡೆಗಳಲ್ಲಿ ದಾಳಿ ನಡೆಸಿ 7333 ಮೌಲ್ಯದ 23ಲೀಟರ್ ಮದ್ಯವನ್ನ ವಶಕ್ಕೆ ಪಡೆದಿದ್ದಾರೆ. ಪಿ.ಬಾಬು,ತಿಪ್ಪಣ್ಣ, ರಮೇಶ್, ಇವರುಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ತಮ್ಮ ಸಿಬ್ಬಂದಿಗಳ ಕಾರ್ಯವೈಖರಿಯನ್ನ ಮೆಚ್ಚಿರುವ ವಿಜಯನಗರ ಎಸ್ಪಿ.ಡಾಕ್ಟರ್ ಅರುಣ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದುರಂತ ಎಂದರೆ ಈ ಅನಧಿಕೃತ ಎಣ್ಣೆ ಅಗಡಿಗಳೆಲ್ಲ ಪತ್ತೆ ಆಗಿರುವುದು ಸಣ್ಣ ಸಣ್ಣ ಹಳ್ಳಿಗಳಲ್ಲಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.