ಹೊಸಪೇಟೆ (ವಿಜಯನಗರ )ವಿಶ್ವ ವಿಖ್ಯಾತ ಹಂಪಿ ಕೇವಲ ಪ್ರವಾಸಿತಾಣ ಮಾತ್ರವಲ್ಲ ವನ್ಯಜೀವಗಳ ವಾಸತಾಣ ಕೂಡ ಹೌದು. ಕೆಲವರು ಹಂಪಿಯ ಸ್ಮಾರಕಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಇಲ್ಲಿಗೆ ಬಂದರೆ, ಇನ್ನೂ ಕೆಲವು ವನ್ಯ ಜೀವಿಗಳ ಪ್ರಾಣಿಪ್ರಿಯರು ಕತ್ತಲ್ಲಿ ಕ್ಯಾಮರಾ ನೇತು ಹಾಕಿಕೊಂಡು ಇಲ್ಲಿರುವ ವನ್ಯ ಜೀವಿಗಳ ಚಿತ್ರ ಸೆರೆ ಹಿಡಿಯಲು ಬರುವುದು ಸರ್ವೇಸಾಮಾನ್ಯವಾಗಿ ಕಂಡು ಬರುತ್ತೆ.

ಆದರೆ ಹೀಗೆ ಬರುವ ಕೆಲವರ ಕ್ಯಾಮರಗಳ ಕಣ್ಣಿಗೆ ಪ್ರಾಣಿಗಳು ಕಾಣಸಿಗದೆ ನಿರಾಸೆಯಿಂದ ಮರಳುವುದು ಕೂಡ ಸರ್ವೇ ಸಾಮಾನ್ಯವಾಗಿರುತ್ತೆ. ಕಾರಣ ಹಂಪಿಯ ಕಲ್ಲು ಗುಡ್ಡಗಳ ಮದ್ಯದಲ್ಲಿ ಪ್ರಾಣಿಗಳ ಚಲನ ವಲನ ಅಷ್ಟು ಸುಲಭವಾಗಿ ಕಾಣಸಿಗುವುದಿಲ್ಲ. ಆದರೆ ಇಂದು ಮಾತ್ರ ಹಂಪಿಗೆ ಭೇಟಿ ನೀಡಿದ ವನ್ಯ ಜೀವಿಗಳ ಪ್ರಾಣಿ ಪ್ರಿಯರಿಗೆ ಹಬ್ಬದೂಟ ಏರ್ಪಡಿಸಿದಂತೆ ಕಾಣುತ್ತಿತ್ತು.

ಕಾರಣ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಪಾರ್ಕಿಂಗ್ ಬಳಿಯ ಕಲ್ಲು ಗುಡ್ಡದ ಮೇಲೆ ಚಿರತೆಯೊಂದು ಸಂಜೆ ಸೂರ್ಯನ ಬೆಳಕಿಗೆ ಮೈಯೋಡ್ಡಿ ಮಲಗಿದ ದೃಶ್ಯ ಪ್ರವಾಸಿಗರನ್ನ ಬೆರಗುಗೋಳಿಸಿತ್ತು.

ಸಂಜೆ ಐದು ಗಂಟೆ ಸುಮಾರಿಗೆ ಕಲ್ಲು ಬಂಡೆಯ ಮೇಲೆ ಬಂದು ಮಲಗಿದ ಚಿರತೆ, ಸೂರ್ಯ ಮುಳುಗಿ ಕತ್ತಲಾಗುವವರೆಗೆ ಅಲ್ಲಿಯೇ ವಿಶ್ರಾಂತಿ ಪಡೆದದ್ದು ಪ್ರವಾಸಿಗರಿಗೆ ಡಬಲ್ ಖುಷಿಯನ್ನ ನೀಡಿದಂತೆ ಕಾಣುತಿತ್ತು. ಕೆಲವು ಪ್ರವಾಸಿಗರು ತಮ್ಮ ದುಬಾರಿ ಬೆಲೆಯ ಕ್ಯಾಮರ ಮತ್ತು ಮೊಬೈಲ್ ನಲ್ಲಿ ಚಿರತೆ ಫೋಟೋವನ್ನ ಸೆರೆ ಹಿಡಿದು ಸಂಭ್ರಮಿಸಿದರು.
ಹೌದು ಹಂಪಿಯಲ್ಲಿ ಚಿರತೆ, ಕರಡಿ, ಮೊಸಳೆ ನೀರು ನಾಯಿ, ಕಾಡು ಹಂದಿ, ನರಿ, ತೋಳ, ಮೊಲ ಸೇರಿದಂತೆ ಇನ್ನೂ ಹಲವು ವನ್ಯ ಜೀವಿಗಳು ಈ ಬಾಗದಲ್ಲಿ ವಾಸವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಅವುಗಳು ಸರ್ವೇ ಸಾಮಾನ್ಯವಾಗಿ ಜನ ಸಾಮಾನ್ಯರ ಕಣ್ಣಿಗೆ ಕಾಣಸಿಗುವಿದಿಲ್ಲ.
ಟ್ರಾಫಿಕ್ ನಿಯಂತ್ರಣಕ್ಕೆ ಕೈ ಜೋಡಿಸಿದ ಟ್ಯಾಕ್ಸಿ ಚಾಲಕರು.


ಹೌದು 2025ರ ಕೊನೇಯ ದಿನಗಳು ಆದ ಕಾರಣ ಕಳೆದ ಒಂದು ವಾರದಿಂದ ವಿಶ್ವ ವಿಖ್ಯಾತ ಹಂಪಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಹೀಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಹಂಪಿಯ ವಿಜಯ ವಿಠಲ ದೇವಸ್ಥಾನದ ಬಳಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡುವುದೇ ಪೊಲೀಸರಿಗೆ ದೊಡ್ಡ ಕೆಲಸ. ಅಂತದ್ದೇ ಪರಿಸ್ಥಿತಿ ಇಂದು ಕೊಡ ಕಂಡು ಬಂತು.

ವಿಜಯ ವಿಠ್ಠಲ ದೇವಸ್ಥಾನದ ಪಾರ್ಕಿಂಗ್ ನಿಂದ ಕಂಪ್ಲಿ ಮತ್ತು ಹೊಸಪೇಟೆ ಮಾರ್ಗಕ್ಕೆ ಸಂಪರ್ಕ ಪಡೆಯಲು ಪ್ರವಾಸಿಗರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಇದ್ದ ಹೊಸಪೇಟೆ ಟ್ಯಾಕ್ಸಿ ಚಾಲಕರು ರಸ್ತೆಗೆ ಇಳಿದು ಟ್ರಾಫಿಕ್ ನಿಯಂತ್ರಣ ಮಾಡಿ ಪ್ರವಾಸಿಗರಿಂದ ಸೈ ಎನಿಸಿಕೊಂಡರು.
ವರದಿ :ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.
