ವಿಜಯನಗರ.. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ಜನ ಸಾಮಾನ್ಯರು ನಮಗೆ ರೈಲ್ವೆ ಬೇಡ ಹೋರಾಟ ಅಂದೋಲನ ಪ್ರಾರಂಬಿಸಲು ಮುಂದಾಗಿದ್ದಾರೆ. ಹೌದು ಈ ಹಿಂದೆ ಇಲ್ಲಿನ ಜನ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಆಶಾದಾಯಕ ಭಾವನೆ ಹೊಂದಿ ಹೋರಾಟಮಾಡಿ ಪಡೆದ ರೈಲ್ವೆ ಸಂಚಾರವನ್ನ ಇದೀಗ ಬೇಡ ಎಂದು ತಡೆಯಲು ಮುಂದಾಗಿದ್ದಾರೆ ಹಗರಿಬೊಮ್ಮನಹಳ್ಳಿಯ ಜನ ಸಾಮಾನ್ಯರು.
ಕಾರಣ ಇಲ್ಲಿನ ಜನ ಸಾಮಾನ್ಯರಿಗೆ ರೈಲ್ವೇ ಇಲಾಖೆಯಿಂದ ಎಲ್ಲಿಲ್ಲದ ಕಿರಿ ಕಿರಿ ಎದುರಾಗಿದೆ. ಈ ಬಾಗದ ಎಲ್ಲಾ ಮಠಗಳ ಸ್ವಾಮೀಜಿಗಳು ಹಾಗೂ ಸಂಘ-ಸಂಸ್ಥೆಗಳು ಹೋರಾಟ ಮಾಡಿದ ಫಲವಾಗಿ ಹೊಸಪೇಟೆ ಯಿಂದ ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಹರಿಹರದ ವರೆಗೆ ರೈಲ್ವೇ ಸಂಚಾರದ ಸೌಕರ್ಯ ಪಡೆದರು.
ಆದರೆ ಈಗ ಇಷ್ಟೊಂದು ಕಷ್ಟ ಪಟ್ಟು ಪಡೆದ ರೈಲ್ವೆ ಸೌಕರ್ಯವನ್ನ ತಡೆದು ಬೇಡಿ ಎನ್ನುವ ಮಟ್ಟಕ್ಕೆ ಇಲ್ಲಿನ ಜನ ಸಾಮಾನ್ಯರು ಬಂದುಬುಟ್ಟಿದ್ದಾರೆ. ಇದಕ್ಕೆ ಕಾರಣ ರಸ್ತೆ ಸಂಚಾರಿಗಳಿಗೆ ಎದುರಾಗಿರುವ ನಿರಂತರ ತೊಂದರೆ. ಹೌದು ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿ ತಲುಪಬೇಕೆಂದರೆ ಎರಡು ರೈಲ್ವೆ ಹಳಿ ಕ್ರಾಸ್ ಮಾಡಿ ಹಗರಿಬೊಮ್ಮನಹಳ್ಳಿ ಪಟ್ಟಣ ತಲುಪುಬೇಕು,
ಇದರಲ್ಲಿ ಒಂದು ರೈಲ್ವೇ ಹಳಿ ಕ್ರಾಸ್ ಪಟ್ಟಣದ ಮದ್ಯಬಾಗದಲ್ಲಿದ್ದು ದಿನದಲ್ಲಿ ಹದಿನೈದರಿಂದ ಇಪ್ಪತ್ತು ಬಾರಿ ಗೇಟ್ ಬಂದಾಗಿರುತ್ತೆ, ಹಾಗಾಗಿ ಪ್ರತಿ ಬಾರಿ ಗೇಟ್ ಹಾಕಿದಾಗಲು ಎಂಟರಿಂದ ಹತ್ತು ನಿಮಿಷಗಳ ಕಾಲ ಬಿರುಬಿಸಿಲಿನಲ್ಲಿ ವಾಹನ ಸವಾರರು ಕಾದು ನಿಲ್ಲಬೇಕಾದ ಪರಿಸ್ಥಿತಿ ಎದುರಸಗಿದೆ.
ಈ ಸಂದರ್ಭದಲ್ಲಿ ಯಾವುದಾದರು ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ ಹೋಗಬೇಕಾದರೆ ಬೇರೆ ಮಾರ್ಗ ಇಲ್ಲದೆ ರೋಗಿಗಳು ನಡು ರಸ್ತೆಯಲ್ಲಿ ಸಾವನ್ನಪ್ಪಿದ ಉದಾಹರಣೆಗಳು ಕೂಡ ಇಲ್ಲಿವೆ. ಎಷ್ಟರ ಮಟ್ಟಿಗೆ ಎಂದರೆ, ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ರೈಲ್ವೇ ಮಾರ್ಗ ಆದಷ್ಟು ಬೇಗ ಮುಚ್ಚಿದರೆ ಸಾಕಪ್ಪ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಜನ ಸಾಮಾನ್ಯರು ಬೇಸತ್ತಿದ್ದಾರೆ.
ನಮಗೆ ಪ್ರಯಾಣಿಕರ ರೈಲು ಮಾರ್ಗ ಬೇಕೆಂದು ಹೋರಾಟಮಾಡಿ ಪಡೆದ ಮಾರ್ಗದಲ್ಲಿ ಇದೀಗ ರೈಲ್ವೇ ಇಲಾಖೆ ಹಣ ಸಂಪಾದನೆಯ ಮಾರ್ಗವಾಗಿ ಬದಲಿಸಿಕೊಂಡಿದೆ. ಹೌದು ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕಿಂತ ಗೂಡ್ಸ್ ರೈಲಿನ ಸಂಚಾರವೇ ಹೆಚ್ಚಾಗಿಬಿಟ್ಟಿದೆ. ದಿನಕ್ಕೆ 20 ಬಾರಿಯಾದರೂ ಗೂಡ್ಸ್ ರೈಲು ಓಡಿಸುವ ರೈಲ್ವೇ ಇಲಾಖೆ ಯಾವುದೇ ಸಮಯ ನಿಗದಿಪಡಿಸದೆ ಇಲ್ಲಿನ ಜನ ಸಾಮಾನ್ಯರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.
ಹಾಗಾಗಿ ಸಾರ್ವಜನಿಕರಿಗೆ ಮೇಲುಸೇತುವೆ ನಿರ್ಮಾಣ ಮಾಡಿ ಅನಂತರ ರೈಲುಗಳನ್ನು ಓಡಿಸಿ ಇಲ್ಲ ನಮಗೆ ರೈಲ್ವೇ ಬೇಡಬೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.ಈ ಸಂಭಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರ ಹಾಕಿರುವ ಇಲ್ಲಿನ ಜನ ಸಾಮಾನ್ಯರು ರೈಲ್ವೆ ಇಲಾಖೆ ವಿರುದ್ದ ಹೋರಾಟ ರೂಪಿಸಲು ಎಲ್ಲರ ಬೆಂಬಲ ಪಡೆಯಲು ಮುಂದಾಗಿದ್ದಾರೆ.
ಈ ಹಿಂದೆ ರೈಲ್ವೆ ಸಂಪರ್ಕ ಪಡೆಯಲು ಯಾವ ರೀತಿಯ ಹೋರಾಟ ರೂಪಿಸಲಾಗಿತ್ತೊ ಅದೇ ಮಾದರಿಯಲ್ಲಿ ಹೋರಾಟ ನಡೆಸಿ ರೈಲ್ವೆ ಇಲಾಖೆಯ ಗಮನ ಸೆಳೆಯಲು ಮುಂದಾಗಿದ್ದಾರೆ.
ವರದಿ.. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.