ವಿಜಯನಗರ… ಹೊಸಪೇಟೆ ನಗರದ ಟ್ಯಾಕ್ಸಿ ಸ್ಟಾಂಡಿಗೆ ಆರ್.ಟಿ.ಒ. ವಸಂತ್ ಚೌವ್ಹಾಣ್ ಇಂದು ದೀಡೀರ್ ಬೇಟಿ ನೀಡಿ ವೈಟ್ ಬೋರ್ಡ್ ವಾಹನ ಮಾಲೀಕರಿಗೆ ನಡುಕ ಹುಟ್ಟಿಸಿದರು. ಹೊಸಪೇಟೆ ನಗರದ ಶ್ರೀರಾಮುಲು ಪಾರ್ಕ್ ಮುಂಬಾಗದಲ್ಲಿರುವ ಟ್ಯಾಕ್ಸಿ ಸ್ಟಾಂಡಿನಲ್ಲಿ ವೈಟ್ ಬೋರ್ಡ್ ವಾಹನಗಳು ಬಾಡಿಗೆ ನಡೆಸುವ ವಿಷಯ ತಿಳಿದ ಆರ್.ಟಿ.ಒ.ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ತಮ್ಮ ಸಿಬ್ಬಂದಿಗಳೊಂದಿಗೆ ಏಕ ಏಕಿ ಸ್ಟ್ಯಾಂಡಿಗೆ ಬೇಟಿ ನೀಡಿ ನಿಲ್ದಾಣದಲ್ಲಿ ನಿಂತಿದ್ದ ಬಿಳಿ ಬಣ್ಣದ ಬೋರ್ಡಿನ ಟಾವೇರ, ಇನೊವಾ,ಹಾಗೂ ಟ್ರ್ಯಾಕ್ಸ್ ಸೇರಿದಂತೆ ಇನ್ನಿತರ ವಾಹನಗಳ ಪೊಟೊ ತೆಗೆಯುವ ಮೂಲಕ ವಾಹನ ಮಾಲೀಕರ ಪತ್ತೆಗೆ ಮುಂದಾದರು, ಅದಲ್ಲದೆ, ವೈಟ್ ಬೋರ್ಡ್ ಟ್ಯಾಕ್ಸಿಗಳನ್ನ ಸೀಜ್ ಮಾಡುವುದಾಗಿ ಮುಂದಾದರು,
ನಂತರ ಸ್ಥಳದಲ್ಲೇ ಇದ್ದ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಭಾಷ ಅವರಿಗೆ ವೈಟ್ ಬೋರ್ಡ್ ಮತ್ತು ಎಲ್ಲೊ ಬೋರ್ಡ್ ವಾಹನಗಳ ನಡುವಿನ ವ್ಯತ್ತ್ಯಾಸ ನಿಮಗೆ ತಿಳಿದಿದೆಯಾ ಹೇಳಿ ಎಂದು ಸಹ ಪ್ರಶ್ನಿಸಿದರು. ಈ ಕೂಡಲೆ ಇಲ್ಲಿ ಬಾಡಿಗೆ ನಡೆಸುವ ಎಲ್ಲಾ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನ ಇಲ್ಲಿಂದ ತೆರವುಗೊಳಿಸಬೇಕು, ಇಲ್ಲದೆ ಇದ್ದರೆ ಕಾನೂನಿ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೆ, ಒಂದು ವೇಳೆ ಬಾಡಿಗೆ ನಡೆಸುವ ಇಚ್ಚೆ ಇದ್ದರೆ ಈಗಿರುವ ಎಲ್ಲಾ ವೈಟ್ ಬೋರ್ಡ್ ವಾಹನಗಳನ್ನ ಎಲ್ಲೋ ಬೋರ್ಡ್ ಗೆ ಬದಲಿಸಿಕೊಂಡು ಟ್ಯಾಕ್ಸಿ ಚಲಾಯಿಸಿ, ಇದರಿಂದ ಸರ್ಕಾರಕ್ಕೆ ಆಗುವ ಹೊರೆಯೂ ತಪ್ಪುತ್ತೆ, ಇತ್ತ ಪ್ರಯಾಣಿಕರಿಗೆ ಆಗುವ ಅನ್ಯಾಯವೂ ನಿಲ್ಲುತ್ತೆ ಎಂದು ವೈಟ್ ಬೋರ್ಡ್ ಟ್ಯಾಕ್ಸಿ ಚಾಲಕರಿಗೆ ಕಾನೂನಿನ ಅರಿವು ಮೂಡಿಸಿದರು, ಆ ನಂತರ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಮತ್ತು ಸದಸ್ಯರ ಮನವಿ ಮೇರೆಗೆ ಒಂದು ವಾರಗಳ ಕಾಲ ಗಡುವು ನೀಡಿ ಎಲ್ಲಾ ವೈಟ್ ಬೋರ್ಡ್ ವಾಹನಗಳನ್ನ ಎಲ್ಲೋ ಬೋರ್ಡ್ಗೆ ಬದಲಿಸಿಕೊಳ್ಳಲು ಅವಕಾಶ ನೀಡಿದರು, ಒಂದು ವೇಳೆ ಗಡುವು ಮೀರಿದರೆ ವೈಟ್ ಬೋರ್ಡಲ್ಲಿ ಬಾಡಿಗೆ ನಡೆಸುವ ವಾಹನಗಳನ್ನ ಕಂಡ ಕಂಡಲ್ಲಿ ನಿಲ್ಲಿಸಿ ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಸಂಚಾರಿ ಪೊಲೀಸರು ಕೂಡ ಆರ್.ಟಿ.ಒ.ಜೊತೆಗೆ ಇದ್ದು ಸಹಕರಿಸಿದರು. ಇನ್ನು ಈ ಹಿಂದೆ ಕೂಡ್ಲಿಗಿ ತಾಲೂಕಿನ ಬಳಿಯಲ್ಲಿ ನಡೆದ ಅಪಾಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಸಂದರ್ಭದಲ್ಲಿ ವೈಟ್ ಬೋರ್ಡ್ ಮತ್ತು ಎಲ್ಲೋ ಬೋರ್ಡ್ ನಡುವಿನ ವ್ಯಾತ್ಯಾಸದ ಕುರಿತು ಸಮಗ್ರ ವರದಿ ಪ್ರಸಾರಮಾಡಿತ್ತು ನಮ್ಮ ಹಂಪಿ ಮಿರರ್, ನಮ್ಮ ವರದಿಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು ಇಂದು ರೋಡಿಗೆ ಇಳಿದು ಕಾರ್ಯಾಚರಣೆ ಪ್ರಾರಂಬಿಸಿದ್ದಾರೆ. ಸದ್ಯಕ್ಕೆ ಆರ್.ಟಿ.ಒ.ತೆಗೆದುಕೊಂಡಿರುವ ಕ್ರಮಕ್ಕೆ ಎಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರಿಗೆ ನೆಮ್ಮದಿ ಸಿಕ್ಕಿದ್ದು, ಇದೇ ಗಟ್ಟಿ ನಿಲುವನ್ನ ಎಷ್ಟು ದಿನ ಮುಂದುವರೆಯುತ್ತೆ ಕಾದು ನೋಡಬೇಕಿದೆ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.