ವಿಜಯನಗರ ( ಹೊಸಪೇಟೆ )ಡಿ.25 ರಂದು ರಾಷ್ಟ್ರೋತ್ಥಾನದಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವ
ಹಗರಿಬೊಮ್ಮನಹಳ್ಳಿ.ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಡಿ.25 ರಂದು 50ನೇ ವರ್ಷದ ಸುವರ್ಣ ಮಹೋತ್ಸವ ಉದ್ಘಾಟನೆ ಮತ್ತು ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಬಿ.ಬಸವನಗೌಡ ಹೇಳಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು, ಹಬೊಹಳ್ಳಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸ್ಥಾಪಿಸಿ 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸಲಾಗುತ್ತಿದೆ.
ಡಿ.25 ರಂದು ನಂದಿಪುರ ಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದು, ದಿಕ್ಸೂಚಿ ಭಾಷಣವನ್ನು ರಾಷ್ಟ್ರೋತ್ಥಾನ ಪರಿಷತ್ನ ಕಾರ್ಯದರ್ಶಿ ನಾ.ದಿನೇಶ ಹೆಗ್ಡೆ, ಮುಖ್ಯ ಅತಿಥಿಗಳಾಗಿ ವಿಎಸ್ಕೆ ವಿವಿಯ ಸಿಂಡಿಕೇಟ್ ಸದಸ್ಯ, ಸಂಸ್ಕಾರ ಭಾರತೀಯ ಅಖಿಲ ಭಾರತ ಪ್ರಂಬಧಕಾರಿಣಿ ಸದಸ್ಯೆ ಪದ್ಮಾ ವಿಠಲ್ ಆಗಮಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಗುರುಮೂರ್ತಿ ಪೆಂಡಕೂರ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ವಕ್ತಾರರಾಗಿ ಪೂತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಆಗಮಿಸುತ್ತಿದ್ದಾರೆ ಎಂದರು. ವಿದ್ಯಾಕೇಂದ್ರದ ಆವರಣದಲ್ಲಿ 25 ರಂದು ರಾಷ್ಟ್ರೋತ್ಥಾನ ಸಾಹಿತ್ಯದಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ.
ವಿಶೇಷ ರಿಯಾಯ್ತಿ ಧರದಲ್ಲಿ ಸಾಹಿತ್ಯಿಕ ಪುಸ್ತಕಗಳನ್ನು ಮಾರಾಟ ಮಾಡಲಾಗುವುದು. ರಾಷ್ಟ್ರೋತ್ಥಾನ ಶಾಲೆಯ ಸುಮಾರು 50 ಬ್ಯಾಚಿನ ಎಲ್ಲಾ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ನಡೆಸಲಾಗುತ್ತಿದೆ. ಶಾಲೆಯಲ್ಲಿ ವ್ಯಾಸಂಗ ಮಾಡಿದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸುವರ್ಣ ಸಂಭ್ರಮದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ.