ವಿಜಯನಗರ… ಅಕ್ರಮ ಮದ್ಯ ಸಂಗ್ರಹಿಸಿದ್ದ ಗೂಡಂಗಡಿಯ ಮೇಲೆ ಚಿಗಟೇರಿ ಪೊಲೀಸರು ಏಕಾ ಏಕಿ ದಾಳಿ ನಡೆಸಿ, ಸಂಗ್ರಹಸಿದ್ದ ಮದ್ಯದ ಸರಕನ್ನ ವಶಕ್ಕೆ ಪಡೆದಿದ್ದಾರೆ.ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಗೌರಿಪುರ ಗ್ರಾಮದ ಹೊರ ವಲಯದಲ್ಲಿ ಇದ್ದ ಡಬ್ಬಾ ಅಂಗಡಿಯಲ್ಲಿ ಸಂಗ್ರಹಿಸಿದ್ದ ವಿವಿದ ಕಂಪನಿಯ 67ಲೀಟರ್ ಮದ್ಯದ ಸರಕನ್ನ ಹಾಗೂ 14ಸಾವಿರ ರೂಪಾಯಿ ನಗದು ವಶಕ್ಕೆಪಡೆದಿದ್ದಾರೆ.
ಇಬ್ಬರ ವಿರುದ್ದ ದೂರು ದಾಖಲಿಸಿರುವ ಪೊಲೀಸರು ಬಸವನಾಳ ಚಂದ್ರಪ್ಪ ಎನ್ನುವ ಓರ್ವ ವ್ಯಕ್ತಿಯನ್ನ ವಶಕ್ಕೆಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊರ್ವ ವ್ಯಕ್ತಿ ಬಸವನಾಳ ದುರುಗಪ್ಪ ಎನ್ನುವ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ.
ಹರಪನಹಳ್ಳಿಯ ಡಿ.ವೈ.ಎಸ್ಪಿ.ಹಾಲಮೂರ್ತಿ ರಾವ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯ ನೇತೃತ್ವವನ್ನ ಹರಪನಹಳ್ಳಿಯ ಸಿ.ಪಿ.ಐ.ನಾಗರಾಜ ಎಂ.ಕಮ್ಮಾರ ವಹಿಸಿದ್ದರು,
ಚಿಗಟೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ನಾಗರಾಜ ಟಿ.ಎ. ಹಾಗೂ ಸಿಬ್ಬಂದಿಗಳಾದ ಬಿ.ದೇವೇಂದ್ರಪ್ಪ. ಹೆಚ್.ಆಂಜನೆಪ್ಪ,ಇಮಾಮ್ ಸಾಹೇಬ್. ಟಿ.ಎಂ.ಗೋವರ್ಧನ ತನಿಖಾ ತಂಡದಲ್ಲಿದ್ದರು.ಇನ್ನು ಇತ್ತೀಚೆಗೆ ಈ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟದ ಹಾವಳಿ ಹೆಚ್ಚಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು, ಗ್ರಾಮೀಣ ಬಾಗದಲ್ಲಿ ಅಪ್ರಾಪ್ತರು ಕೂಡ ಮದ್ಯವೆಸನಿಗಳಾಗುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು ಈ ಬಾಗದ ಮಹಿಳೆಯರು, ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು, ಈ ಹಿನ್ನೆಲೆಯಲ್ಲಿ ಸರಿಯಾದ ಸಮಯ ನೋಡಿ ಕಂದು ಗೂಡಂಗಡಿಯಲ್ಲಿ ಸಂಗ್ರಹಿಸಿದ್ದ ಮದ್ಯ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಿಬ್ಬಂದಿಗಳ ಕಾರ್ಯವೈಖರಿಗೆ ಎಸ್ಪಿ ಕೆ.ಅರುಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ.ಸುಬಾನಿ ಪಿಂಜಾರ ವಿಜಯನಗರ.