ವಿಜಯನಗರ.. ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯ ಕೂಡ ಲಕ್ಷ ಲಕ್ಷ ಅಕ್ರಮ ಹಣ ಆಸ್ತಿ ಸಂಪಾದಿಸಿರುವುದು ಅದೆಷ್ಟೊ ಪ್ರಕರಣಗಳು ನಮ್ಮ ಕಣ್ಣುಮುಂದೆ ಬಂದು ಹೋಗಿವೆ, ಆದ್ರೆ ಇಲ್ಲೊಬ್ಬ ಮಾಜಿ ಶಾಸಕ ಆಳಿ ಹೋದ ಹೆಜ್ಜೆ ಗುರುತುಗಳಿವೆ, ಐದು ವರ್ಷ ಅವದಿ ಪೂರ್ತಿ ಅಧಿಕಾರ ನಡೆಸಿದ್ರು ಸ್ವಂತಕ್ಕೆ ಒಂದು ಬಿಡಿಗಾಸು ಸಂಪಾದಿಸದೆ ಹೆಸರು ಗಳಿಸಿ ಇಂದಿನ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ, ಇನ್ನು ಅವರ ಕುಟುಂಭದ ತುತ್ತಿನ ಚೀಲ ತುಂಬಿಸುತ್ತಿರುವುದು ಸರ್ಕಾರ ಕೊಡುವ ಅನ್ನ ಭಾಗ್ಯದ ಅಕ್ಕಿಯೇ ಎಂದರೆ ನಂಬುತ್ತೀರ ನಂಬಲೇಬೇಕು ಈ ಸುದ್ದಿಯನ್ನ ಸಂಪೂರ್ಣ ಓದಿ.
ಹೌದು ಬಳ್ಳಾರಿ ಹಾಗೂ ವಿಜಯನಗರ ರಾಜಕೀಯ ವ್ಯೆವಸ್ಥೆಯ ಬಗ್ಗೆ ಯಾರನ್ನಾದ್ರು ಕೇಳಿದ್ರೆ ಅಲ್ಲಿ ಕೋಟಿ ಕೋಟಿ ಅಕ್ರಮ ಹಣ, ಆಸ್ಥಿ ಸಂಪಾದಿಸಿರುವ ಹೆಸರುಗಳು ಕೇಳಿ ಬರುವುದು ಸರ್ವೇ ಸಾಮಾನ್ಯ, ಯಾಕೆಂದ್ರೆ ಇಂದಿನ ರಾಜಕೀಯ ವ್ಯೆವಸ್ಥೆಗೆ ಬರುವಂತ ಬಹುತೇಕ ರಾಜಕೀಯ ನಾಯಕರು ಹಣಮಾಡುವ ಉದ್ದೇಶದಿಂದಲೇ ರಾಜಕೀಯಕ್ಕೆ ಬಂದು ಇಡೀ ವ್ಯೆವಸ್ಥೆಯನ್ನ ಗಬ್ಬೆಬ್ಬಿಸಿ ಹೊರಟು ಹೋಗುತ್ತಾರೆ, ಆದ್ರೆ ಈ ಪೋಟೊದಲ್ಲಿ ಕಾಣುವ ಈ ವ್ಯೆಕ್ತಿ ಮಾತ್ರ ಐದು ವರ್ಷಗಳ ಕಾಲ ಶಾಸಕರಾಗಿ ಆಳ್ವಿಕೆ ನಡೆಸಿದ್ರು ಸ್ವಂತಕ್ಕೆ ಒಂದು ರೂಪಾಯಿ ಹಣ ಸಂಪಾದಿಸದೆ ನಿಸ್ವಾರ್ಥ ಸೇವೆ ಮಾಡಿ ಕಣ್ಮರೆಯಾದ್ರು.
ಅಂದಹಾಗೆ ಈ ಪೋಟೊದಲ್ಲಿ ಕಾಣುವ ಈ ವ್ಯೆಕ್ತಿ ಬೇರೆ ಯಾರು ಅಲ್ಲ, ಮಾಜಿ ಮುಖ್ಯ ಮಂತ್ರಿಗಳಾದ ದಿವಂಗತ ದೇವರಾಜ್ ಅರಸು ಮತ್ತು ಗುಂಡುರಾವ್ ಅವರ ಅವದಿಯಲ್ಲಿ ಹೊಸಪೇಟೆ ನಗರದ ಶಾಸಕರಾಗಿ ಆಯ್ಕೆಯಾದ ಗುಡೂಸಾಬ್ ಅವರು. ಇನ್ನು ದೇವರಾಜ್ ಅರಸು ಅವರ ಆಪ್ತರಾಗಿದ್ದ ಈ ಗೂಡುಸಾಬ್ ತಮ್ಮ ಅವದಿಯಲ್ಲಿ ಹೊಸಪೇಟೆ ವಿಜಯನಗರ ಕ್ಷೇತ್ರಕ್ಕೆ ಸಾಕಷ್ಠು ಅಭಿವ್ರದ್ದಿ ಕೆಲಸಗಳನ್ನ ತಂದು ಅಭಿವ್ರದ್ದಿಪಡಿಸಿದರು. ಆದರೆ ಅವರ ಕುಟುಂಭಕ್ಕೆ ಇಂದಿಗೂ ಒಂದು ಸ್ವಂತ ಮನೆಯೂ ಕೂಡ ಇಲ್ಲ, ದುರಂತ ಎಂದ್ರೆ ಅವರ ಮಕ್ಕಳು ಇದೀಗ ಸರ್ಕಾರ ಕೊಡುವ ಅನ್ನ ಭ್ಯಾಗ್ಯ ಅಕ್ಕಿಯನ್ನೇ ಅವಲಂಬಿಸಿದೆ. ಆ ತಿಂಗಳು ಅಕ್ಕಿ ಸಿಗದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ.
ಇನ್ನು ಅಂದಿನ ಕಾಲದಲ್ಲಿ ಗೂಡುಸಾಬ್ ಹೊಸಪೇಟೆಯ ಎಸ್.ಆರ್. ನಗರದಲ್ಲಿ ಖರೀದಿಸಿದ್ದ 10 ಅಡಿ ಅಗಲ 30 ಅಡಿ ಉದ್ದದ ಒಂದು ಚಿಕ್ಕ ಮನೆಯೇ ಅವರ 8 ಮಕ್ಕಳಿಗೆ ಕೊಟ್ಟಿರುವ ಆಸ್ತಿ, 9 ಜನ ಮಕ್ಕಳಿಲ್ಲಿ ಓರ್ವ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ರೆ, ನಾಲ್ಕು ಜನ ಹೆಣ್ಣು ಮಕ್ಕಳು ಮದುವೆಯಾಗಿ ಗಂಡಂದಿರ ಮನೆ ಸೇರಿದ್ದಾರೆ, ಇನ್ನುಳಿದ ನಾಲ್ಕು ಜನ ಗಂಡು ಮಕ್ಕಳು ಒಂದೇ ಮನೆಯಲ್ಲಿ ವಾಸವಾಗಿದ್ದು, ಇದರಲ್ಲಿ ಹಿರಿಯ ಮಗ ಅಮೀರ್ ಸಾಬ್ ಹೊಸಪೇಟೆಯ ಟಿ.ಎಸ್.ಪಿ ರಿಟೈರ್ಡ್ ಕಾರ್ಮಿಕರಾಗಿದ್ದಾರೆ, ಇದರಲ್ಲಿ ಅವರಿಗೆ ಪ್ರತಿ ತಿಂಗಳು ಸಿಗುವ ಪಿಂಚಣಿ ಕೇವಲ 1063 ರೂಪಾಯಿ ಮಾತ್ರ, ಇನ್ನೊಬ್ಬ ಮಗ ಅಪಘಾತದಲ್ಲಿ ಒಂದು ಕಾಲನ್ನ ಕಳೆದುಕೊಂಡು ಮನೆಯಲ್ಲಿ ಮೂಲೆ ಗಿಂಪಾಗಿದ್ರೆ, ಇನ್ನಿಬ್ಬರಲ್ಲಿ ಓರ್ವ ಆಟೋ ಚಾಲಕನಾಗಿ ಕೆಲಸಮಾಡುತ್ತಿದ್ದಾರೆ, ಮತ್ತೊಬ್ಬರು ಪೇಂಟರ್ ಆಗಿ ಕೆಲಸಮಾಡುತ್ತಿದ್ದಾರೆ,
ನಗರಾಭಿವ್ರದ್ದಿ ಪ್ರಾದಿಕಾರದ ಅಧ್ಯಕ್ಷರಾಗಿ ಒಂದು ಬಾರಿ ಎಮ್.ಎಲ್.ಎ.ಆಗಿ ಅಧಿಕಾರ ನಡೆಸಿದ ಒಬ್ಬ ಮಾಜಿ ಶಾಸಕರು ತಮ್ಮ ಸ್ವಂತಕ್ಕೆ ಒಂದು ಗೇಣು ಆಸ್ತಿ ಖರಿದಿಮಾಡದೆ, ಒಬ್ಬ ರಾಜಕೀಯ ನಾಯಕರು ಹೇಗಿರಬೇಕೆಂದು ತೋರಿಸಿಕೊಟ್ಟವರು ಗೂಡುಸಾಬು ಅವರು,ಆದರೆ ಇಂದಿನ ರಾಜಕೀಯ ನಾಯಕರು ಹೇಗೆಲ್ಲ ಅಕ್ರಮಗಳಲ್ಲಿ ಬಾಗಿಯಾಗಿ ಐದು ವರ್ಷದ ಅವದಿಯಲ್ಲಿ ಎಷ್ಟೆಲ್ಲ ಆಸ್ತಿ ಸಂಪತ್ತನ್ನ ಗಳಿಕೆಮಾಡುತ್ತಾರೆ ಎಂಬುದನ್ನ ನಾವೇನು ನಿಮಗೆ ಹೇಳಬೇಕಾಗಿಲ್ಲ.
ವರದಿ….ಸುಬಾನಿ ಪಿಂಜಾರ ವಿಜಯನಗರ.