You are currently viewing ಹೊಸಪೇಟೆ ಗ್ರಾಮೀಣ ಪೊಲೀಸರ ಕಾರ್ಯಾಚರಣೆ.<br>ಇಬ್ಬರು ಮನೆಗಳ್ಳರ ಬಂಧನ.

ಹೊಸಪೇಟೆ ಗ್ರಾಮೀಣ ಪೊಲೀಸರ ಕಾರ್ಯಾಚರಣೆ.
ಇಬ್ಬರು ಮನೆಗಳ್ಳರ ಬಂಧನ.

  • Post category:Uncategorized

(ವಿಜಯನಗರ)ಹೊಸಪೇಟೆ.  ಇಬ್ಬರುಮನೆ ಕಳ್ಳರನ್ನ ಬಂಧಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.  ಬಂದಿದ್ದರಿಂದ 19 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇಂದು ಸಂಜೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಈ ಕುರಿತು ಮಾಹಿತಿ ನೀಡಿದರು.

ಹೊಸಪೇಟೆ ನಗರದ ಮರಡಿ ಹನುಮಂತ ಅಲಿಯಾಸ್ ಎಂ.ಎಲ್.ಎ ತಂದೆ ದಿ|| ಮರಡಿ ಜಂಬಯ್ಯ ಹಾಗೂ ಜಿ.ಅನಿಲ್ ಅಲಿಯಾಸ್ ಮೂಗ ತಂದೆ ಬಸವರಾಜ ಬಂಧಿತರಾಗಿದ್ದು, ಇವರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತರಿಂದ 383 ಗ್ರಾಂ ಬಂಗಾರದ ಆಭರಣಗಳು ಮತ್ತು 70 ಗ್ರಾಂ ಬೆಳ್ಳಿಯ ಆಭರಣಗಳ ಒಟ್ಟು ಮೌಲ್ಯ ರೂ. 19,19,200 ಎಂದು ಎಸ್ಪಿ ತಿಳಿಸಿದರು.

ಜನವರಿ.21ರಂದು ಹೊಸಪೇಟೆಯ ಅರವಿಂದ ನಗರದ ಶಾದಿ ಮಹಲ್ ಹಿಂಬಾಗದಲ್ಲಿ ಇರುವ ಜೆ.ಇಬ್ರಾಹಿಂ ಎಂಬುವವರ ಮನೆಯ ಬೀಗ ಮುರಿದ ಆರೋಪಿತರು 
ಒಳಗಡೆ ನುಗ್ಗಿ ಗಾಡ್ರೇಜ್‌ಗಳ ಲಾಕ್‌ಗಳನ್ನು ಮುರಿದು ಅವುಗಳಲ್ಲಿಟ್ಟಿದ್ದ 315 ಗ್ರಾಂ. ಬಂಗಾರದ ಆಭರಣಗಳು   72 ತೊಲೆ ಬೆಳ್ಳಿ ಆಭರಗಣಗಳು, ಮತ್ತು 11, ಸಾವಿರ ನಗದು ಹಣ ಒಟ್ಟು ರೂ. 13,07,000/-ಗಳು ಬೆಲೆ ಬಾಳುವ  ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ಜೊತೆ ಹೊಸಪೇಟೆಯ ವಿವಿಧ ಭಾಗಗಳಲ್ಲಿ ನಡೆದಂತಹ ಕಳ್ಳತನ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸ್ರು ಕಳ್ಳತನಕ್ಕೆ ಕಡಿವಾಣ ಹಾಕಲು ತನಿಖೆಯನ್ನು ಪ್ರಾರಂಭಿಸಿದರು.ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಒಂದು ತನಿಕಾ ತಂಡವನ್ನ ರಚಿಸಲಾಗಿತ್ತು.

ಹೊಸಪೇಟೆಯ ಬಳ್ಳಾರಿ ರಸ್ತೆಯ ಎಚ್.ಎಲ್.ಸಿ ಕಾಲುವೆಯ ಆಲದ ಮರದ ಹತ್ತಿರ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಅವರಿಬ್ಬರು ಸೇರಿಕೊಂಡು ಸುಮಾರು ಒಂದು ವರ್ಷದಿಂದ ಹೊಸಪೇಟೆಯ ವಿವಿದ ಕಡೆಗಳಲ್ಲಿ ಸುಮಾರು 08 ಮನೆಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ ಎಂದು ಎಸ್ಪಿ ವಿವರಿಸಿದರು.

ಹೊಸಪೇಟೆ ಉಪ-ವಿಭಾಗದ ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ದೀಪಕ್ ಆರ್.ಬೂಸರೆಡ್ಡಿ ನೇತೃತ್ವದಲ್ಲಿ  ಗ್ರಾಮೀಣ ಠಾಣೆಯ ಸಿಬ್ಬಂದಿ ಮೋತಿನಾಯ್ಕ, ಮಂಜುನಾಥ ಮೇಟಿ, ಕೊಟ್ರೇಶ ಏಳಂಜಿ, ಕೊಟ್ರೇಶ್.ಜೆ, ಸಣ್ಣ ಗಾಳೆಪ್ಪ, ಅಡಿವೆಪ್ಪ, ಬಂಡಿಮೇಗಳ ನಾಗರಾಜ, ಎಂ.ಸoತೋಷ, ಕುಮಾರ್‌ನಾಯ್ಕ, ಶಿವುಕುಮಾರ, ಗೋಪಿನಾಯ್ಕ, ಜಗದೀಶ, ಹನುಮಂತ, ಅಂಬರೀಶ,  ತನಿಕಾ ತಂಡದಲ್ಲಿ ಭಾಗಿಯಾಗಿದ್ದು  ತಂಡದ ಕಾರ್ಯವನ್ನು ಎಸ್ಪಿ ಶ್ರೀಹರಿ ಬಾಬು ಅವರು ಪ್ರಶಂಶಿಸಿ, ಬಹುಮಾನ ಘೋಷಿಸಿದ್ದಾರೆ.

ವರದಿ.. ಸುಬಾನಿ ಪಿಂಜಾರ.ಹಂಪಿ ಮಿರರ್ ವಿಜಯನಗರ.