ವಿಜಯನಗರ (ಹೊಸಪೇಟೆ)

ಕಲುಷಿತ ನೀರು ಸೇವನೆಯಿಂದ ಓರ್ವ ಮಹಿಳೆಯೊಬ್ಬರು ಸಾವನ್ನಪ್ಪಿ ಹಲವರು ಅಸ್ವಸ್ಥರಾದ ಘಟನೆ ಹೊಸಪೇಟೆ ನಗರದ ರಾಣಿಪೇಟೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಲಕ್ಷ್ಮೀ (55) ಮೃತ ಮಹಿಳೆಯಾಗಿದ್ದಾರೆ.

ಹೊಸಪೇಟೆಯ ರಾಣಿಪೇಟೆ, ಚಲುವಾದಿಕೇರಿ ಸೇರಿದಂತೆ ನಾನಾ ಕಡೆ ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ, ಈ ಸಂಬಂಧ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣ ಆಗಿ ಇಂತ ಅವಘಡ ಸಂಭಾವಿಸಿದೆ.

ಅಸ್ವಸ್ಥರಾದ 40 ಕ್ಕೂ ಹೆಚ್ಚು ಜನರು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಮನೆಗಳಿಗೆ ತೆರಳಿದ್ದಾರೆ, ಅಧಿಕಾರಿಗಳ ಈ ನಿರ್ಲಕ್ಷಕ್ಕೆ ಬೇಸತ್ತ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.