You are currently viewing ಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ವಿಜಯನಗರ.. ಇಂದು ಬೆಳಗ್ಗೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಕಾಲೇಜಿನ ಆವರಣದಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದೆ, ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಎಂಟರಿಂದ ಹತ್ತು ಜನ ವಿಧ್ಯಾರ್ಥಿನೀಯರನ್ನ ತಡೆದ ಕಾಲೇಜಿನ ಪ್ರಿನ್ಸಿಪಲ್ ಜಗದೀಶ್, ಹಿಜಾಬ್ ತೆಗೆದು ತರಗತಿ ಪ್ರವೇಶಿಸುವಂತೆ ಸೂಚಿಸಿದ್ದಾರೆ, ಆದರೆ ಪ್ರಿನ್ಸಿಪಲ್ ಮಾತಿಗೆ ಒಪ್ಪದ ವಿಧ್ಯಾರ್ಥಿನೀಯರು, ನಾವು ಹಿಜಾಬ್ ದರಿಸಿ ಕಾಲೇಜಿಗೆ ಬರುವುದು ಇದೇ ಮೊದಲೇನಲ್ಲ ಸರ್, ಈ ಹಿಂದೆ ಕೂಡ ನಾವು ಹಿಜಾಬ್ ಧರಿಸಿ ಕಾಲೇಜಿಗೆ ಬರುತಿದ್ದೆವು, ಈಗ ಕೂಡ ಹಿಜಾಬ್ ಧರಿಸಿಯೇ ತರಗತಿಗೆ‌ ಬರುತಿದ್ದೇವೆ, ಈ ಹಿಂದೆ ಇರದ ನಿಯಮ ಇಂದೇಕೆ ಎಂದು‌ ಕಾಲೇಜಿನ ಪ್ರಿನ್ಸಿಪಲ್ ಅವರನ್ನ ವಿಧ್ಯಾರ್ಥಿನೀಯರು ಪ್ರಶ್ನಿಸಿದ್ದಾರೆ.

ಹೀಗಿದ್ದರು ವಿಧ್ಯಾರ್ಥಿನೀಯರಿಗೆ ತರಗತಿಗೆ ಪ್ರವೇಶ ನೀಡದ ಕಾಲೇಜಿನ ಪ್ರಿನ್ಸಿಪಲ್ ಜಗದೀಶ ಅವರು ವಿಧ್ಯಾರ್ಥಿನೀಯರನ್ನ ತರಗತಿಯಿಂದ ಹೊರಗೆ ಇಟ್ಟಿದ್ದಾರೆ, ಈ ವಿಷಯ ವಿಧ್ಯಾರ್ಥಿನೀಯರ ಸಂಭಂದಿಗಳು ತಿಳಿದು ಕಾಲೇಜಿಗೆ‌ ಬಂದು ಪ್ರಿನ್ಸಿಪಲ್ ಏಕ ಮುಖ ನಿರ್ಧಾರವನ್ನ ಖಂಡಿಸಿದ್ದಾರೆ. ಇನ್ನು ತಲೆ ಎದ್ದಿರುವ ವಿವಾದ ಹೊಸಪೇಟೆ ಎ.ಸಿ. ಸಿದ್ದರಾಮೇಶ್ವರ ಅವರಿಗೆ ತಿಳಿಯುತಿದ್ದಂತೆ ಸ್ಥಳಕ್ಕೆ‌ ಬಂದ ಅಧಿಕಾರಿಗಳು, ಪೊಷಕರು‌ ಮತ್ತು ವಿಧ್ಯಾರ್ಥಿನೀಯರನ್ನ ಹಾಗೂ ಕಾಲೇಜಿನ ಪ್ರಿನ್ಸಿಪಲ್ ಅವರನ್ನ ಒಟ್ಟುಗೂಡಿಸಿ ಸಂದಾನ ಮಾಡಿ‌ ಮರಳಿದ್ದಾರೆ.

ಆದರೆ ವಿಷಯ ಅದಲ್ಲ. ಕಾಲೇಜಿನ ಪ್ರಿನ್ಸಿಪಲ್‌ ಮತ್ತು ವಿದ್ಯಾರ್ಥಿನೀಯರ ಪೊಷಕರು ಹಾಗೂ ಬಳ್ಳಾರಿಯ ಡಿ.ಡಿ.ಪಿ.ಯು. ರಾಜುನಾಯ್ಕ್ ಮಾತನಾಡಿದ ಸಂಭಾಷಣೆ ನಮ್ಮ ಹಂಪಿ‌ ಮಿರರ್ ಗೆ ಲಭ್ಯವಾಗಿದೆ. ಈ ಹಿಂದೆ ಇರದ ಹಿಜಾಬ್ ವಿವಾದ ಈಗ ಯಾಕೆ ಎನ್ನುವ ಅನುಮಾನ ಎಲ್ಲರಿಗೂ ಮೂಡಿತ್ತು. ದಕ್ಷಿಣ ಕನ್ನಡದಲ್ಲಿ ಹುಟ್ಟಿಕೊಂಡ ಈ ವಿವಾದ ಇನ್ನೇನೆ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮತ್ತೆ ದುತ್ತೆಂದು ತಲೆ ಎತ್ತಿದೆ, ಹೀಗೆ ಈ ವಿವಾದ ತಲೆ ಎತ್ತಲು ಯಾರು ಕಾರಣ, ಈ ಆಡಿಯೊ ಕೇಳಿದ ಮೇಲೆ ನಿಮಗೆ ಒಂದು ಸ್ಪಷ್ಟ ಚಿತ್ರಣ ಗೊತ್ತಾಗುತ್ತದೆ.

ಈ ವಿವಾದ ತಲೆ ಎತ್ತಿರುವುದು ವಿಧ್ಯಾರ್ಥಿನೀಯರಿಂದನ ಅಥವಾ ಕಾಲೇಜಿನ ಪ್ರಿನ್ಸಿಪಲ್ ಅವರಿಂದನಾ..?  ಶಿಕ್ಷಣ ಕೊಡಬೇಕಾಗಿರುವ ಶಿಕ್ಷಕರೇ ಎಲ್ಲೊ‌ ಒಂದು ಕಡೆ ಶಿಕ್ಷಣ ಸಂಸ್ಥೆಗಳಲ್ಲಿ ಸಾಮರಸ್ಯ ಕದಡುತಿದ್ದಾರ ಎನ್ನುವ ಅನುಮಾನಗಳು ಮೂಡುತ್ತಿವೆ. ಸುಮಾರು ಎಂಟರಿಂದ ಹತ್ತು ಜನ ವಿಧ್ಯಾರ್ಥಿನೀಯರು ಕಾಲೇಜಿಗೆ ಸೇರಿದಾಗಿನಿಂದ ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುವ ಪದ್ದತಿಯನ್ನ ಅನುಸರಿಸಿಕೊಂಡು‌ ಬಂದವರು, ಇದೀಗ ಅದೇ ವಿಧ್ಯಾರ್ಥಿನೀಯರನ್ನ ತಡೆದು ನೀವು ಹಿಜಾಬ್ ತೆಗೆದು‌ ಬನ್ನಿ ಎಂದು ಕಾಲೇಜಿನ ಪ್ರಿನ್ಸಿಪಲ್ ಹೇಳಿರುವುದಕ್ಕೆ ಬಳ್ಳಾರಿಯ ಡಿ.ಡಿ.ಪಿಯು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೊದಲಿನಿಂದಲೂ ಆ ವಿಧ್ಯರ್ಥಿನೀಯರು ಹಿಜಾಬ್ ಧರಿಸಿ ತರಗತಿಗೆ‌ ಹಾಜರಾಗುತಿದ್ದರೆ ಈಗ ಯಾಕೆ ಅವರನ್ನ ತಡೆದು‌ ನಿಲ್ಲಿಸಿದಿರಿ ಎಂದು ಪ್ರಶ್ನಿಸಿದ್ದಾರೆ. ಡಿ.ಡಿ.ಪಿ.ಯು ಅವರ ಆಕ್ಷೇಪಕ್ಕೆ‌ ಉತ್ತರಿಸಿರುವ ಥಿಯೊಸಾಫಿಕಲ್ ಕಾಲೇಜಿನ ಪ್ರಿನ್ಸಿಪಲ್ ಜಗದೀಶ ಹೇಳಿರುವುದು ಅವರ ಜೊತೆ ಇನ್ನೂ ಕೆಲವರು ಇತ್ತೀಚೆಗೆ ಹಿಜಾಬ್ ಧರಿಸಿ ಬರುತಿದ್ದಾರೆ, ಹಾಗಾಗಿ ಎಲ್ಲರನ್ನೂ ತಡೆದಿದ್ದೇವೆ ಎಂದು ಪ್ರತ್ಯೂತ್ತರ ನೀಡಿದ್ದಾರೆ. ಪ್ರಿನ್ಸಿಪಲ್ ಜಗದೀಶ, ಹಾಗೂ ಬಳ್ಳಾರಿ ಡಿ.ಡಿ.ಪಿ.ಯು. ರಾಜು ನಾಯ್ಕ್ ಹಾಗೂ ವಿಧ್ಯಾರ್ಥಿನೀಯರ ಸಂಭಂದಿಗಳು ಮಾತನಾಡಿದ ಆಡಿಯೊ ಕ್ಲಪ್ ಇಲ್ಲಿದೆ ನೀವೆ‌ ಕೇಳಿ.

https://youtu.be/uc34K-ycOpA

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.