You are currently viewing <em>ಹಂಪಿ ಉತ್ಸವ-2023</em><br><em>ರಾಷ್ಟ್ರೀಯ ಶಿಲ್ಪಕಲಾ ಶಿಬಿರಕ್ಕೆ ಸಚಿವ ಆನಂದ್ ಸಿಂಗ್ ಚಾಲನೆ</em>

ಹಂಪಿ ಉತ್ಸವ-2023
ರಾಷ್ಟ್ರೀಯ ಶಿಲ್ಪಕಲಾ ಶಿಬಿರಕ್ಕೆ ಸಚಿವ ಆನಂದ್ ಸಿಂಗ್ ಚಾಲನೆ

  • Post category:Uncategorized

ಹೊಸಪೇಟೆ(ವಿಜಯನಗರ),ಜ.23 ಹಂಪಿ ಉತ್ಸವ ಆಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಶಿಲ್ಪಕಲಾ ಶಿಬಿರವನ್ನು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಉದ್ಘಾಟಿಸಿದರು.
ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿ ಪಕ್ಕದ ಮೈದಾನದಲ್ಲಿ ಆಯೋಜಿಸಲಾದ ಶಿಬಿರವನ್ನು ಸೋಮವಾರ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬೃಹತ್ ಕಲ್ಲಿಗೆ ಉಳಿಪೆಟ್ಟು ಹಾಕುವ ಮೂಲಕ ಉದ್ಘಾಟಿಸಿದರು.


ಜ.26 ರವೆರಗೂ ಶಿಬಿರ ನಡೆಯಲಿದ್ದು ಹೊಸಪೇಟೆ ಸೇರಿದಂತೆ ಕೊಲ್ಕತ್ತಾ, ಬೆಂಗಳೂರು, ಚೆನೈ, ಬರೋಡಾ, ಮಂಡ್ಯ, ಬುಕ್ಕಸಾಗರ, ಬೈಲುವದ್ದಿಗೇರಿ , ಬಿಜಾಪುರ, ಬಾದಾಮಿ ಭಾಗದ 20 ಜನ ನುರಿತ ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ಶಿಬಿರದ ಆಯೋಜಕ ಮೋಹನ್‍ರಾವ್ ಪಾಂಚಾಳ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೆÇಲೀಸ್ ವರಿμÁ್ಠಧಿಕಾರಿ ಶ್ರೀಹರಿ ಬಾಬು, ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ಹಂಪಿ ಗ್ರಾಮಪಂಚಾಯಿತಿ ಸದಸ್ಯರಾದ ಸ್ವಾತಿಸಿಂಗ್ ಇದ್ದರು.


*ಹಂಪಿ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್*
*ಮನೆಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ: ಸಚಿವ ಆನಂದ್ ಸಿಂಗ್*
ಹೊಸಪೇಟೆ(ವಿಜಯನಗರ),ಜ.23(ಕರ್ನಾಟಕ ವಾರ್ತೆ): ವಿಜಯನಗರ ಜಿಲ್ಲೆಯಾದ ನಂತರ ಮೊಟ್ಟಮೊದಲ ಬಾರಿಗೆ ಹಂಪಿ ಉತ್ಸವ ಆಯೋಜಿಸಲಾಗಿದ್ದು, ಅದ್ಧೂರಿ ಆಚರಣೆ ಅಂಗವಾಗಿ ಜಿಲ್ಲಾ ಕೇಂದ್ರದ ಮನೆಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ತಿಳಿಸಿದರು.
ವಿಶ್ವವಿಖ್ಯಾತ ಹಂಪಿಯಲ್ಲಿ ಜ.27ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗುತ್ತಿರುವ ಹಂಪಿ ಉತ್ಸವ ಆಚರಣೆ ಅಂಗವಾಗಿ ಸೋಮವಾರ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಸಿದ್ಧತಾ ಪರಿಶೀಲನೆ ಕೈಗೊಂಡು ಮಾಹಿತಿ ಪಡೆದುಕೊಂಡರು.
ಹಂಪಿ ಉತ್ಸವದ ಅಂಗವಾಗಿ ಕೈಗೊಂಡ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಮುಖ್ಯ ವೇದಿಕೆ ಗಾಯಿತ್ರಿ ಪೀಠ ಹಾಗೂ ಎದುರು ಬಸವಣ್ಣ ಮಂಟಪದ ವೇದಿಕೆಗಳ ನಿರ್ಮಾಣ ಸಿದ್ಧತೆಗಳನ್ನು ಪರಿಶೀಲಿಸಿದರು.
ಹಂಪಿ ಉತ್ಸವಕ್ಕೆ ಆಯೋಜಿಸುವ ವಿವಿಧ ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದರು.


ನಂತರ ಮಾತನಾಡಿದ ಆನಂದ್ ಸಿಂಗ್ ಅದ್ಧೂರಿಯಾಗಿ ಉತ್ಸವವನ್ನು ಕೈಗೊಳ್ಳಲಾಗುತ್ತಿದ್ದು, ವೇದಿಕೆ ಹಾಗೂ ಇನ್ನಿತರ ಸಿದ್ಧತೆಗಳನ್ನು ಪರಿಶೀಲನೆ ಮಾಡಲಾಗಿದೆ. ಮೂರು ದಿನಗಳ ಉತ್ಸವದ ಆರಂಭಕ್ಕೂ ಮುನ್ನ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ನೂರಾರು ಕಲಾವಿದರ ತಂಡದಿಂದ ವಸಂತ ವೈಭವ ವಿಶೇಷ ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ ಎಂದರು.
ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ; ಹಂಪಿ ಉತ್ಸವದಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮ ನೀಡಲು 12 ಸಾವಿರ ಕಲಾವಿದರಿಂದ ಅರ್ಜಿ ಬಂದಿದ್ದವು, ಅದರಲ್ಲಿ 3 ಸಾವಿರ ಕಲಾವಿದರನ್ನು ಆಯ್ಕೆಮಾಡಲಾಗಿದೆ ಅದರಲ್ಲಿ ಬಹುಪಾಲು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಾಲಿವುಡ್‍ನಿಂದ 3-4 ಕಲಾವಿದರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೆÇಲೀಸ್ ವರಿμÁ್ಠಧಿಕಾರಿ ಶ್ರೀಹರಿ ಬಾಬು, ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ಹಂಪಿ ಗ್ರಾಮ ಪಂಚಾಯಿತಿ ಸದಸ್ಯೆ ಸ್ವಾತಿ ಸಿಂಗ್ ಇದ್ದರು.