ವಿಜಯನಗರ…ಇನ್ಪೊಸಿಸ್ ಮುಖ್ಯಸ್ಥೆ ಶ್ರೀ ಮತಿ ಸುಧಾಮೂರ್ತಿ ಅವರು ರಾಷ್ಟ್ರಪತಿ ಆಗಬೇಕೆಂಬುದು ಹಂಪಿಯ ಪ್ರವಾಸಿ ಮಾರ್ಗದರ್ಶಿಗಳ ಬೇಡಿಕೆಯಾಗಿದೆ. ಈ ಸಂಭಂದ ಇಂದು ಹಂಪಿಯ ವಿರೂಪಾಕ್ಷೇಶ್ವರನಿಗೆ ರುದ್ರಾಭಿಷೇಕ ಮಾಡಿಸುವ ಮೂಲಕ ಹರಕೆ ಮಾಡಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪದಾದಿಕಾರಿಗಳು ಹಂಪಿಯ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸನ್ನಿಧಾನಧಿಗೆ ಇಂದು ಬೆಳಗ್ಗೆ ಬೇಟಿ ನೀಡಿ ವಿಷೇಶ ಪೂಜೆ ಸಲ್ಲಿಸಿದ್ದಾರೆ. ಶ್ರೀಮತಿ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಎಳೆನೀರು ಅಭಿಷೇಕ ಮತ್ತು ರುದ್ರಾಭಿಷೇಕ ಮಾಡಿಸುವ ಮೂಲಕ ಹರಕೆಮಾಡಿಕೊಂಡರು.
ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಗೆ ಶ್ರೀಮತಿ ಸುಧಾ ಮೂರ್ತಿ ಅವರನ್ನು ಆಯ್ಕೆ ಮಾಡಬೇಕೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಗಿದೆ. ಅದರಲ್ಲೂ ಧಕ್ಷಿಣ ಭಾರತದಲ್ಲಿ ಸುಧಾ ಮೂರ್ತಿಯವರ ಹೆಸರು ಮುಂಚೂಣಿಯಲ್ಲಿದ್ದು ಅವರ ಆಯ್ಕೆಗೆ ಯಾವುದೇ ವಿಜ್ಞ ಎದುರಾಗದೆ ಇರಲಿ ಎಂದು ಪ್ರವಾಸಿಮಾರ್ಗದರ್ಶಿಗಳು ಹರಕೆ ಮಾಡಿಕೊಂಡಿದ್ದಾರೆ.
ಕೋವಿಡ್ ಮಹಾಮಾರಿ ನಮ್ಮ ದೇಶಕ್ಕೆ ಆವರಿಸಿದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಗೈಡ್ ಗಳು ಸಂಕಷ್ಟದಲ್ಲಿ ಇದ್ದರು, ಈ ವಿಷಯ ಸುಧಾಮೂರ್ತಿಯವರ ಗಮನಕ್ಕೆ ತಲುಪುತಿದ್ದಂತೆ ಹಂಪಿಯ ಎರಡು ನೂರಕ್ಕು ಹೆಚ್ಚು ಪ್ರವಾಸಿ ಮಾರ್ಗದರ್ಶಿಗಳಿಗೆ ತಲ ರೂ 10000/-ಗಳಂತೆ ಎರಡು ಬಾರಿ ಆರ್ಥಿಕ ಸಹಾಯವನ್ನು ನೀಡಿದರು, ಇದೇ ರೀತಿಯಾಗಿ ಹಲವು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಸುಧಾಮೂರ್ತಿ ಅಮ್ಮನವರು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬೇಕೆಂಬುದು ಹಂಪಿಯ ಪ್ರವಾಸಿ ಮಾರ್ಗದರ್ಶಿಗಳ ಆಸೆಯಾಗಿದೆ.
ಹಾಗಾಗಿ ಇಂದು ದೇವರಗೆ ಹರಕೆ ಸಲ್ಲಿಸಿ ಮೊರೆ ಇಟ್ಟಿದ್ದಾರೆ. ಪ್ರವಾಸಿ ಮಾರ್ಗದರ್ಶಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ ವಿ. ನಿರ್ದೇಶಕರಾದ H ಹುಲಗಪ್ಪ, ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ್ ಗೌಡ, ಎಸ್ ದೇವರಾಜ್, ವಿ ಗೋಪಾಲ, ಹುಸೇನ್ ಉಪಸ್ಥಿತರಿದ್ದರು.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.