ವಿಜಯನಗರ..ಇಂದು ಮದ್ಯಾಹ್ನ ಒಂದು ಗಂಟೆಯ ಸುಮಾರಿಗೆ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಕಾರ್ಯನಿರ್ವಹಿಸುತಿದ್ದ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರು ಪುನಿತ್ ಕೆರೆಹಳ್ಳಿ ಹಾಗೂ ಆತನ ಹತ್ತು ಜನ ಬೆಂಬಲಿಗರ ವಿರುದ್ದ ದೂರು ದಾಖಲಿಸಿದ್ದಾರೆ.
ಕಾರಣ ಕೊವಿಡ್ ನಿಯಮ ಉಲ್ಲಂಘಿಸಿ ಶ್ರೀಕೃಷ್ಣದೇವರಾಯರ ಜಯಂತಿ ಆಚರಣೆಗೆ ಮುಂದಾಗಿದ್ದರು. ಇತ್ತೀಚೆಗೆ ಕೊವಿಡ್ ನಿಯಂತ್ರಣ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ, ಯಾವುದೆ ಸಭೆ ಸಮಾರಂಭಗಳು ಹಾಗೂ ಗುಂಪು ಸೇರುವುದಕ್ಕೆ ಅವಕಾಶ ನೀಡಿಲ್ಲ. ಹೀಗಿದ್ದರು ಪುನಿತ್ ಕೆರೆಹಳ್ಳಿ ಹಾಗು ಅವರ ಬೆಂಬಲಿಗರು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದೆ ಘೊಷಣೆ ಕೂಗುತ್ತ ಮೆರವಣಿಗೆ ಮಾಡಿ, ಶ್ರೀಕೃಷ್ಣದೇವರಾಯರ ಜಯಂತಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಗುಂಪು ಸೇರದ ಜನರನ್ನ ಅಲ್ಲಿಂದ ಕಳಿಸಲು ಹಂಪಿ ಠಾಣೆಯ ಎ.ಎಸ್.ಐ.ಕರಿಯಪ್ಪ ಹಾಗೂ ಶಬ್ಬೀರ್ ಹುಸೇನ್ ಮುಂದಾಗಿದ್ದಾರೆ, ಆದರೆ ಪೊಲೀಸರಿಗೆ ಕ್ಯಾರೆ ಎನ್ನದ ಕೆರೆಹಳ್ಳಿ ಮತ್ತು ಆತನ ಹತ್ತು ಜನ ಬೆಂಬಲಿಗರು ಕಾರ್ಯಕ್ರಮಮಾಡಲು ಮುಂದಾಗಿದ್ದಾರೆ. ಹಾಗಾಗಿ ಹಂಪಿ ಪೊಲೀಸ್ ಠಾಣೆಗೆ ಕೆರೆಹಳ್ಳಿ ಮತ್ತು ಆತನ ಹತ್ತು ಜನ ಬೆಂಬಲಿಗರನ್ನ ಬಂದಿಸಿ ಕರೆದೊಯ್ದ ಪೊಲೀಸರು ದೂರು ದಾಖಲಿಸಿ ಬಿಡುಗಡೆಗೊಳಿಸಿದ್ದಾರೆ.
1)ಪುನಿತ್ ಕೆರೆಹಳ್ಳಿ. 2)ಗೋಪಿ 3)ಅನಂತ ಪದ್ಮನಾಭ 4)ಅನೀಲ್ ಕುಮಾರ 5)ಹರಿನಾಥರೆಡ್ಡಿ. 6)ರವಿಕುಮಾರ.7)ಚಂದ್ರಕಾಂತ್. 8)ಶಶಿಕಿರಣ 9)ಸಚಿನ್ 10)ತರುಣ ಬಂದಿತ ಆರೋಪಿಗಳಾಗಿದ್ದಾರೆ.
ಐ.ಪಿ.ಸಿ.143/149/269 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ ಪೊಲೀಸರು.
ವರದಿ..ಸುಬಾನಿ ಪಿಂಜಾರ ವಿಜಯನಗರ.